ರಾಜ್ಯಾದ್ಯಂತ ಗ್ಯಾರಂಟಿ ಗಲಾಟೆ: ಕೊಪ್ಪಳದಲ್ಲಿ ಪತ್ನಿಗೆ ಟಿಕೆಟ್ ತೆಗೆಯದ ಪತಿರಾಯ, ಯಾದಗಿರಿಯಲ್ಲಿ ಕನೆಕ್ಷನ್ ಕಟ್ ಮಾಡಿದ ವೈರ್ ನ್ನು ಸಿಬ್ಬಂದಿ ಕಾರಿನಿಂದ ಕಸಿದುಕೊಂಡ ಮಹಿಳೆಯರು
Congress Guarantee :ರಾಜ್ಯದ್ಯಂತ ಗ್ಯಾರಂಟಿ (Congress Guarantee) ಗಲಾಟೆ ಹೆಚ್ಚುತ್ತಿದೆ. ಅಲ್ಲಲ್ಲಿ ಗ್ಯಾರೆಂಟಿಯ ಲಾಭವನ್ನು ಪಡೆದುಕೊಳ್ಳಲು ಜನರು ಆಡಳಿತದೊಂದಿಗೆ ತಿಕ್ಕಾಟಕ್ಕೆ ಇಳಿದಿದ್ದಾರೆ. ಇವತ್ತು ಎಲ್ಲೆಲ್ಲಿ ಏನೇನು ಗಲಾಟೆ ಆಯ್ತು ಎನ್ನುವ ಸಣ್ಣ ರೌಂಡಪ್ ಇಲ್ಲಿದೆ.
ಕೊಪ್ಪಳದಲ್ಲಿ (Koppal) ಒಬ್ಬ ವ್ಯಕ್ತಿ ಬಸ್ನಲ್ಲಿ ತಾನು ಮಾತ್ರ ಟಿಕೆಟ್ ಪಡೆದು ಪತ್ನಿಗೆ ಟಿಕೆಟ್ ಪಡೆಯಲು ಒಪ್ಪದ ಪ್ರಕರಣ ನಡೆದಿದೆ. ಕೊಪ್ಪಳದ ಗಂಗಾವತಿಯಿಂದ ಹುಲಿಗಿ ಗ್ರಾಮಕ್ಕೆ ಹೋಗುವ ಸರ್ಕಾರಿ ಬಸ್ನಲ್ಲಿ ಈ ಗಲಾಟೆ ನಡೆದಿದೆ. ‘ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಎಂದು ಸಿಎಂ ಸಿದ್ದರಾಮಯ್ಯ ಆದೇಶ ಕೂಡ ಹೊರಡಿಸಿದ್ದಾರೆ. ಹೀಗಾಗಿ ನಾನು ಪತ್ನಿಗೆ ಟಿಕೆಟ್ ಪಡೆಯುವುದಿಲ್ಲ ‘ ಎಂದು ವ್ಯಕ್ತಿಯೊಬ್ಬ ಪಟ್ಟು ಹಿಡಿದ ಕಾರಣ ಬಸ್ ಸಿಬ್ಬಂದಿ ಜತೆ ವಾಗ್ಯುದ್ಧ ಉಂಟಾಗಿದೆ.
ಕರೆಂಟ್ ಬಿಲ್ ಕಟ್ಟದ್ದಕ್ಕೆ ಕನೆಕ್ಷನ್ ಕಟ್ ಮಾಡಿದ ಸಿಬ್ಬಂದಿ: ಗಲಾಟೆ ಮಾಡಿ ವಯರ್ ಕಿತ್ತುಕೊಂಡು ಹೋದ ಮಹಿಳೆಯರು
ವಿದ್ಯುತ್ ಬಿಲ್ (Electricity bill) ಕಟ್ಟಿಲ್ಲ ಎಂದು ಕನೆಕ್ಷನ್ ಅನ್ನೇ ತೆಗೆದುದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಜೆಸ್ಕಾಂ (JESCOM) ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗುಕೊಂಡಿರುವ ಘಟನೆ ಯಾದಗಿರಿಯಲ್ಲಿ (Yadgir) ನಡೆದಿದೆ.
ಯಾದಗೀರ್ ತಾಲೂಕಿನ ಅಬ್ಬೆತುಮಕೂರ ಗ್ರಾಮದಲ್ಲಿ ವಿದ್ಯುತ್ ಕನೆಕ್ಷನ್ ಕಟ್ ಮಾಡಿದ್ದಕ್ಕೆ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ನವರು ಕರೆಂಟ್ ಬಿಲ್ ಕಟ್ಟಬೇಡಿ ಎಂದಿದ್ದಾರೆ. ಅದಕ್ಕೆ ನಾವ್ಯಾರೂ ಬಿಲ್ ಕಟ್ಟೋದಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ 6-7 ಕುಟುಂಬಸ್ಥರು ವಿದ್ಯುತ್ ಬಿಲ್ ಅನ್ನು ಬಾಕಿ ಇಟ್ಟಿದ್ದಾರೆ. ಈ ಕಾರಣಕ್ಕೆ ಜೆಸ್ಕಾಂ ಸಿಬ್ಬಂದಿ ಲೈನ್ ಕಟ್ ಮಾಡಿದ್ದಾರೆ. ಕಟ್ ಮಾಡಿದ ವಯರ್ ಅನ್ನು ತಮ್ಮ ವಾಹನದಲ್ಲಿ ಇರಿಸಿದಾಗ ಅಲ್ಲಿನ ಮಹಿಳೆಯರು ಗಲಾಟೆ ನಡೆಸಿ ವಾಹನದಲ್ಲಿದ್ದ ವಯರ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಮಹಿಳೆಯರ ರಂಪಾಟಕ್ಕೆ ಜೆಸ್ಕಾಂ ಸಿಬ್ಬಂದಿ ಸುಸ್ತು.