BK Hariprasad: ಮಂತ್ರಿ ಪದವಿ ಹಂಚಿಕೆಯಲ್ಲಿ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ: ರಾಜೀನಾಮೆಗೆ ನಿರ್ಧರಿಸಿದ ಬಿಕೆ ಹರಿಪ್ರಸಾದ್ ?!

BK Hariprasad has decided to resign

BK Hariprasad: 24 ಮಂದಿ ನೂತನ ಸಚಿವರ ಅಧಿಕೃತ ಪಟ್ಟಿ ಹೊರಬೀಳುತ್ತಿದ್ದಂತೆ ಕರ್ನಾಟಕ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗ ಕಾಂಗ್ರೆಸ್‌ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅದು ಬೂದಿ ಮುಚ್ಚಿದ ಕೆಂಡದಂತಾಗಿದೆ.

 

ಅದರಲ್ಲಿಯೂ ಹಿರಿಯ ನಾಯಕರಾದ ಬಿಕೆ ಹರಿಪ್ರಸಾದ್‌ (BK Hariprasad), ಟಿಬಿ ಜಯಚಂದ್ರ, ವಿಜಯಾನಂದ ಕಾಶಪ್ಪನವರ್‌, ಲಕ್ಷ್ಮಣ ಸವದಿ ಸೇರಿದಂತೆ ಹಲವು ಹಿರಿಯ ಸಚಿವ ಸ್ಥಾನ ಕೈತಪ್ಪಿರುವುದು ಇದೀಗ ದೃಢ ಆಗಿದೆ.

ಇದರ ನಡುವೆ ಮಂತ್ರಿ ಪದವಿ ನೀಡದ ಹಿನ್ನೆಲೆಯಲ್ಲಿ ತೀವ್ರ ಅಸಮಧಾನಗೊಂಡಿರುವ ಮೇಲ್ಮನೆಯ ವಿಪಕ್ಷ ನಾಯಕ, ವಿಧಾನ ಪರಿಷತ್ ಸದಸ್ಯತ್ವಕ್ಕೆ ಬಿಕೆ ಹರಿಪ್ರಸಾದ್‌ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನುವ ಅನುಮಾನ ದಟ್ಟವಾಗಿದೆ ಎಂದು ವರದಿಯಾಗಿದೆ. ಹಿರಿಯರನ್ನು ಬಿಜೆಪಿ ನಡೆಸಿಕೊಂಡ ರೀತಿಯಲ್ಲೇ ಕಾಂಗ್ರೆಸ್ ಕೂಡಾ ನಡೆಸಿಕೊಳ್ಳುತ್ತಿದೆ ಎನ್ನುವ ಮಾತು ಹಿರಿಯರು ಹೇಳುತ್ತಿದ್ದಾರೆ.

ನಿಮಗೆ ನಮ್ಮ ಸೇವೆ ಬೇಡ ಎಂದಾದರೆ ನಮ್ಮನ್ನು ಬಿಟ್ಟು ಕಳುಹಿಸಿ ಎಂದು ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುಜುನ ಖರ್ಗೆ ಹಾಗೂ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಬಿಕೆ ಹರಿಪ್ರಸಾದ್ ನೇರವಾಗಿ ಲಿದ್ದಾರೆ ಹೇಳಿದ್ದಾರಂತೆ.

 

ಇದನ್ನು ಓದಿ: Kaadhal Sandhya: ಆಪ್ತರಕ್ಷಕ ನಟಿಯ ರೆಸಾರ್ಟ್‌ನಲ್ಲಿ ನಗ್ನ ವಿಡಿಯೋ ಚಿತ್ರೀಕರಣ, ರೂಮ್‌ ಬಾಯ್ ಬಿಚ್ಚಿಟ್ಟ ಸ್ಫೋಟಕ ರಹಸ್ಯ ! 

Leave A Reply

Your email address will not be published.