Cooker blast: ಚುನಾವಣೆ ವೇಳೆ ಹಂಚಿದ ಕುಕ್ಕರ್ ಸ್ಫೋಟ, ಬಾಲಕಿಗೆ ಗಂಭೀರ ಗಾಯ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ

Girl is seriously injured when a cooker blast

Share the Article

Cooker blast: ಚುನಾವಣೆಯ ವೇಳೆ ಹಂಚಲಾದ ಕುಕ್ಕರ್ ಎನ್ನಲಾದ ಕುಕ್ಕರೊಂದು ಸ್ಫೋಟಗೊಂಡ ಘಟನೆ ನಡೆದಿದೆ. ಈ ಘಟನೆಯಲ್ಲಿ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ.

ರಾಮನಗರದ ಕೂನ ಮುದ್ದನಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಹುಡುಗಿಯೊಬ್ಬಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಹೀಗೆ ಹಂಚಲಾದ ಕುಕ್ಕರ್ (Cooker blast) ವಿಷಯವನ್ನು ಹೆಚ್ಚಿದ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ಕರೆದು ವಿವರಿಸಿದ್ದಾರೆ. ಈ ರೀತಿಯಾಗಿ ಗಿಫ್ಟ್ ಹಂಚಿದ ಕಾರಣಕ್ಕೆ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ರಾಮನಗರದಲ್ಲಿ ಸೋಲಿಸಲಾಗಿದೆ ಎನ್ನುವ ಆರೋಪವನ್ನು ಹೆಚ್ ಡಿ ಕುಮಾರಸ್ವಾಮಿ ಅವರು ಮಾಡಿದ್ದಾರೆ.

ರಾಮನಗರ ಮತ್ತು ಇತರ ಕ್ಷೇತ್ರಗಳಲ್ಲಿ ಚುನಾವಣೆಗೆ ಕೆಲವೇ ದಿನಗಳು ಇರುವಾಗ ದೊಡ್ಡ ಪ್ರಮಾಣದಲ್ಲಿ ಹಣ ಮತ್ತು ಉಡುಗೊರೆಗಳನ್ನು ಹಂಚಲಾಗಿತ್ತು ಎನ್ನುವ ಆರೋಪ ಈ ಹಿಂದೆಯೇ ಕೇಳಿಬಂದಿತ್ತು. ಈಗ ಹಾಗೆ ಹಂಚಲಾಗಿರುವ ಕುಕ್ಕರ್ ಅಡುಗೆ ಮಾಡುವಾಗ ಸ್ಪೋಟಗೊಂಡಿದ್ದು ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇಂತಹ ಕಡಿಮೆ ಕ್ವಾಲಿಟಿ ಕುಕ್ಕರ್ ಹಂಚಿ ಜನರನ್ನು ಮರಳು ಮಾಡಿ ಜೆಡಿಎಸ್ ಅನ್ನು ರಾಮನಗರದಲ್ಲಿ ಸೋಲಿಸಲಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

 

ಇದನ್ನು ಓದಿ: Gujarat: ಗೋಮಾಂಸದ ಸಮೋಸ ಮಾರಿದ ವ್ಯಕ್ತಿ ; ಪೊಲೀಸ್ ದಾಳಿ: ಆರೋಪಿ ಬಂಧನ!! 

Leave A Reply