Home Breaking Entertainment News Kannada Aamir Khan 3rd Marriage: ನಟಿ ಫಾತಿಮಾ ಜತೆ ಆಮಿರ್​ ಖಾನ್​ ಮೂರನೇ ಮದುವೆ ;...

Aamir Khan 3rd Marriage: ನಟಿ ಫಾತಿಮಾ ಜತೆ ಆಮಿರ್​ ಖಾನ್​ ಮೂರನೇ ಮದುವೆ ; ಟ್ವೀಟ್ ಮಾಡಿ ಸನ್ಸೇಷನ್ ಸೃಷ್ಟಿಸಿದ ಕಮಾಲ್!!

Aamir Khan 3rd Marriage
Image source: vistara news

Hindu neighbor gifts plot of land

Hindu neighbour gifts land to Muslim journalist

Aamir Khan 3rd Marriage: ಸಿನಿಮಾದಲ್ಲಿ ತಂದೆ-ಮಗಳ ಪಾತ್ರದಲ್ಲಿ ನಟಿಸಿದ್ದ ಆಮಿರ್​ ಖಾನ್​ – ಫಾತಿಮಾ ಸನಾ ಶೇಖ್​​ ಮದುವೆ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರಿಬ್ಬರು ‘ದಂಗಲ್​’ ಸಿನಿಮಾದ ಕಾಲದಿಂದಲೂ ಡೇಟಿಂಗ್​ ಮಾಡುತ್ತಿದ್ದಾರೆ. ಮಗಳ ವಯಸ್ಸಿನ ಫಾತಿಮಾ ಜತೆ ಆಮಿರ್​ ಖಾನ್ (Aamir Khan 3rd Marriage) ಮದುವೆ ಆಗುತ್ತಾರೆ ಎಂದು ಕಮಾಲ್​ ಆರ್​. ಖಾನ್​ (Kamaal R Khan) ಟ್ವೀಟ್​ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಕಿಡಿ ಹಚ್ಚಿದ್ದಾರೆ. ಇದೀಗ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.

ಈ ಮಧ್ಯೆ ಆಮೀರ್ ಖಾನ್ (Aamir Khan) ಮತ್ತು ಫಾತಿಮಾ ಸನಾ ಶೇಖ್ (Fatima Sana Sheikh) ಪಿಕಲ್‌ಬಾಲ್‌ (Pickleball) ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‌ಹಾಗಾಗಿ ಸೋಷಿಯಲ್ಸ್’ಗಳಲ್ಲಿ ಗಾಸಿಪ್ ಕಿಡಿ ಇನ್ನಷ್ಟು ಬಲವಾಗಿದೆ. ಈ ವಿಡಿಯೋಗೆ ನೆಟ್ಟಿಗರು ‘ಪ್ರೇಮ ಪಕ್ಷಿಗಳು’ ಎಂದು ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರೂ ಮದುವೆ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ.

ಆಮೀರ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರಿಗೆ ಇರಾ ಮತ್ತು ಜುನೈದ್ ಖಾನ್ ಎಂಬ ಮಗನಿದ್ದಾನೆ. ಆಮೀರ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಅವರ ಮಗ ಆಜಾದ್. ಆಮಿರ್ ಖಾನ್​ ಕಿರಣ್​ ರಾವ್​ ಜೊತೆಗಿನ ದಾಂಪತ್ಯಕ್ಕೆ 2021ರಲ್ಲಿ ಅಂತ್ಯ ಹಾಡಿದರು. ಡಿವೊರ್ಸ್ ಬಳಿಕ ಆಮಿರ್​ ಖಾನ್ ನಟಿ ಫಾತಿಮಾ ಸಹಾ ಶೇಖ್​​ ಜೊತೆ ಹೆಚ್ಚು ಆಪ್ತವಾಗಿದ್ದಾರೆ. ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಸೇರಿದಂತೆ ಹಲವು ವರ್ಷಗಳಿಂದ ಫಾತಿಮಾ ಅಮೀರ್​ ಖಾನ್​ ಕುಟುಂಬಕ್ಕೆ ಹತ್ತಿರವಾಗಿದ್ದಾರೆ.

ದಂಗಲ್ ಮತ್ತು ಥಗ್ಸ್ ಆಫ್ ಹಿಂದೂಸ್ತಾನ್‌ನಂತಹ ಚಿತ್ರಗಳಲ್ಲಿ ಅಮೀರ್ ಜೊತೆಗೆ ಫಾತಿಮಾ ಸನಾ ಶೇಖ್ ನಟಿಸಿದ್ದಾರೆ. ಫಾತಿಮಾ ಕೊನೆಯದಾಗಿ ಅನಿಲ್ ಕಪೂರ್ ಮತ್ತು ಹರ್ಷವರ್ಧನ್ ಕಪೂರ್ ನಾಯಕತ್ವದ ‘ಥಾರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ದಿಯಾ ಮಿರ್ಜಾ, ರತ್ನ ಪಾಠಕ್ ಶಾ ಮತ್ತು ಸಂಜನಾ ಸಂಘಿ ಜೊತೆಗೆ ‘ಧಕ್ ಧಕ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಮೇಘನಾ ಗುಲ್ಜಾರ್ ನಿರ್ದೇಶನದ ‘ಸ್ಯಾಮ್ ಬಹದ್ದೂರ್’ ನಲ್ಲಿ ವಿಕ್ಕಿ ಕೌಶಲ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ‘ಸ್ಯಾಮ್ ಬಹದ್ದೂರ್’ ಚಿತ್ರದಲ್ಲಿ ಫಾತಿಮಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೀರ್ ಖಾನ್ ಕೊನೆಯದಾಗಿ ಕರೀನಾ ಕಪೂರ್ ಖಾನ್ ಜೊತೆಗೆ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: E-permit For Transportation of Cow: ಗೋ ಸಾಗಾಣೆಗೆ ಇ – ಪರವಾನಗಿ ಕಡ್ಡಾಯ; ಲೈಸೆನ್ಸ್ ಪಡೆಯಲು ಇಲ್ಲಿದೆ ಮಾಹಿತಿ!