Home Breaking Entertainment News Kannada Naresh – Pavitra Lokesh: ನರೇಶ್ ಅದೊಂದು ವಿಷಯದಲ್ಲಿ ತುಂಬಾ ಜಾಲಿ ಎಂದ ಪವಿತ್ರಾ ಲೋಕೇಶ್,...

Naresh – Pavitra Lokesh: ನರೇಶ್ ಅದೊಂದು ವಿಷಯದಲ್ಲಿ ತುಂಬಾ ಜಾಲಿ ಎಂದ ಪವಿತ್ರಾ ಲೋಕೇಶ್, ಏನದು ಗೊತ್ತೇ ?

Naresh - Pavitra Lokesh

Hindu neighbor gifts plot of land

Hindu neighbour gifts land to Muslim journalist

Naresh – Pavitra Lokesh: ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ ವಿಜಯ ಕೃಷ್ಣ (Naresh) ಅವರು ಕನ್ನಡ ನಟಿ ಪವಿತ್ರಾ ಲೋಕೇಶ್ (Naresh – Pavitra Lokesh) ಅವರೊಂದಿಗೆ ಈಗಾಗಲೇ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಆಪ್ತರು, ಸ್ನೇಹಿತರು, ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಈ ಮದುವೆಯ ವಿಡಿಯೋವನ್ನು ನರೇಶ್ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಕೂಡಾ ಆಗಿತ್ತು. ಅಂದಹಾಗೆ, ನರೇಶ್ ಅವರಿಗೆ ನಾಲ್ಕನೇ ವಿವಾಹವಾಗಿದೆ.

ಇದೀಗ ಇವರಿಬ್ಬರೂ ಈಗಾಗಲೇ ಮುಂಬರುವ ತೆಲುಗು ಚಿತ್ರ ಮಳ್ಳಿ ಪೆಳ್ಳಿ ಚಿತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇದೇ ಚಿತ್ರದ ಬಗ್ಗೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ನಟಿ ಪವಿತ್ರಾ ಲೋಕೇಶ್ ತಮ್ಮನ್ನು ನರೇಶ್ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ, ನನ್ನನ್ನು ಅವರ ಕುಟುಂಬದಲ್ಲೊಬ್ಬಳು ಎಂದು ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ.

ಒಂದು ಸಮಯ ನಾನು ಮನೆಯಲ್ಲೇ ಕುಳಿತುಬಿಟ್ಟಿದ್ದೆ. ಇಂದು ನಾನು ಹೊರಗೆ ಬರಲು ನರೇಶ್ ಕಾರಣ. ಅವರೇ ನನ್ನ ಜೊತೆ ಬಲವಾಗಿ ನಿಂತು ಬೆನ್ನು ತಟ್ಟಿದರು ಎಂದು ಪವಿತ್ರಾ ಹೇಳಿರುವುದು ಗಮನಾರ್ಹ. ಅದಲ್ಲದೆ ಯಾರನ್ನೂ ಗುರಿಯಾಗಿಸಿಕೊಂಡು ಈ ಸಿನಿಮಾ ಮಾಡಿಲ್ಲ ಎಂದು ಪವಿತ್ರಾ ಲೋಕೇಶ್ ಸ್ಪಷ್ಟಪಡಿಸಿದ್ದಾರೆ.

ಅದಲ್ಲದೆ ಪವಿತ್ರಾ ಅವರು ಈ ಹಿಂದೆ ನರೇಶ್ ಅವರ ದಿವಂಗತ ತಾಯಿ ವಿಜಯ ನಿರ್ಮಲಾ ಅವರನ್ನು ಭೇಟಿಯಾಗಿದ್ದನ್ನ ಆ ಭೇಟಿ ನನಗೆ ಖುಷಿ ನೀಡಿದೆ. ಇನ್ನು ಮಹೇಶ್ ಬಾಬು ಮತ್ತು ನಮೃತ ಅವರನ್ನು ಕೂಡಾ ಭೇಟಿಯಾಗಿರುವುದಾಗಿಯೂ ಹೇಳಿದರು. ಒಟ್ಟಿನಲ್ಲಿ ಎಲ್ಲರೂ ನನ್ನನ್ನು ಅವರ ಕುಟುಂಬದವರಲ್ಲಿ ಒಬ್ಬಳೆಂಬಂತೆ ಸ್ವಾಗತಿಸಿರುವ ಜೊತೆಗೆ ನಮ್ಮ ನಿರ್ಧಾರಕ್ಕೆ ನಮ್ಮ ಕುಟುಂಬಗಳು ಬೆಂಬಲ ನೀಡಿವೆ ಎಂದು ಹೇಳಿದರು.

ಆದರೆ ಮಳ್ಳಿ ಪೆಳ್ಳಿ ಚಿತ್ರವನ್ನು ನಿಮ್ಮ ಜೀವನದ ಬಯೋಪಿಕ್ ಎಂದು ಕರೆಯಬಹುದೇ ಎಂದು ಕೇಳಿದಾಗ, ಈ ಮಾತು ತುಂಬಾ ದೊಡ್ಡದು ಮತ್ತು ಚಿತ್ರದ ಕಥಾವಸ್ತುವು ಅನೇಕ ನಿಜ ಜೀವನದ ಜೋಡಿಗಳನ್ನು ನೆನಪಿಸುತ್ತದೆ. ಒಟ್ಟಿನಲ್ಲಿ ಜೀವನದ ಘಟನೆಗಳನ್ನು ವಿವರಿಸಲು ಸಾಧ್ಯವೇ ಎಂದು ಹೇಳಿದರು.

ಇನ್ನು ನರೇಶ್ ಅವರ ಬಗ್ಗೆ ನಿಮಗೆ ಏನು ಇಷ್ಟ ಎಂದು ಕೇಳಿದಾಗ, ನನ್ನನ್ನು ಅವರು ನಡೆಸಿಕೊಳ್ಳುವ ರೀತಿ ನನಗೆ ಇಷ್ಟವಾಯಿತು ಎಂದು ಪವಿತ್ರಾ ಹಂಚಿಕೊಂಡರು. ನರೇಶ್ ಯಾವಾಗಲೂ ಈ ದಿನದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಇವತ್ತು ಏನಿದೆಯೋ ಅದರಲ್ಲೇ ಖುಷಿಯಾಗಬೇಕು ಎಂಬುದು ಅವರ ತತ್ವ. ಈ ಗುಣವನ್ನು ನಾನು ಅವರಿಂದ ಕಲಿತಿದ್ದೇನೆ. ಈ ವಿಚಾರದಲ್ಲಿ ನನಗೆ ತುಂಬಾ ಖುಷಿಯಾಗಿದೆ ಎಂದು ಪವಿತ್ರಾ ಹೇಳಿದ್ದಾರೆ.

ಮುಖ್ಯವಾಗಿ ನಮ್ಮ ಸಂಬಂಧವನ್ನು ತಪ್ಪಾಗಿ ಬಿಂಬಿಸಿ ಕೆಲವರು ಅಪಪ್ರಚಾರ ಮಾಡಿದ್ದಾರೆ ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ. ನರೇಶ್ ಅವರ ವ್ಯಕ್ತಿತ್ವವನ್ನು ನಾಶಪಡಿಸಿ ಸಿನಿ ಕೆರಿಯರ್​ಗೆ ಕಪ್ಪು ಚುಕ್ಕೆ ಹಾಕಲು ಯತ್ನಿಸಿದರು. ಅಲ್ಲದೆ ಒಂಟಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವಂತೆ ಅಪಪ್ರಚಾರ ಮಾಡಿದ್ದರು. ಇದಕ್ಕೆಲ್ಲಾ ಈಗ ಉತ್ತರ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: Yashaswini Scheme: ಖಾಸಗಿ ಆಸ್ಪತ್ರೆಗಳಿಂದ ಯಶಸ್ವಿನಿ ಯೋಜನೆ ದರ ಹೆಚ್ಚಳ ; ಸಂಪೂರ್ಣ ಮಾಹಿತಿ ಇಲ್ಲಿದೆ