Rainy Season: ಮಳೆ ಜೋರಾಗಿ ಬರುವಾಗ ಈ ಕೆಲಸ ಖಂಡಿತ ಮಾಡಬೇಡಿ!!!

Don't do this work when it is raining heavily

Rainy Season: ಈಗಾಗಲೇ ವರುಣನ ಆರ್ಭಟ ಶುರುವಾಗಿದೆ. ಇನ್ನೇನು ಜೂನ್ ಆರಂಭದಲ್ಲಿ ಮಂಗಾರು ಶುರುವಾಗಲಿದೆ. ಹಾಗಾಗಿ ಮಳೆಯ ಬಗೆಗೆ ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಮಳೆಗಾಲ (Rainy Season) ಆರಂಭವಾಗುತ್ತಿದ್ದಂತೆ ಎಲ್ಲರ ಜೀವನ ಶೈಲಿಯೂ ಬದಲಾಗುತ್ತದೆ. ಹೊರಗಡೆ ಹೋಗುವಾಗ ಬ್ಯಾಗ್​ನಲ್ಲಿ ಛತ್ರಿ, ರೇನ್ ಕೋಟ್, ಬ್ಯಾಗ್ ಕವರ್​ಗಳು ಅನಿವಾರ್ಯವಾಗುತ್ತದೆ.

ಆದರೆ ನೆನಪಿರಲಿ ಹೊರಗೆ ಎಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತವೆಯೋ ಮನೆಯೊಳಗೂ ಸಹ ಅಷ್ಟೇ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಳೆಗಾಲ ಅಂದರೆ ಮನೆ ಸುತ್ತಮುತ್ತಲೂ ನೀರು ನಿಲ್ಲುತ್ತವೆ. ಆದ್ದರಿಂದ ಮನೆ ಮುಂಭಾಗದ ಮೆಟ್ಟಿಲುಗಳು ಮಳೆ ನೀರು ನಿಂತಾಗ ಅದನ್ನು ಸ್ವಚ್ಛಗೊಳಿಸುತ್ತಿರಬೇಕು. ಇಲ್ಲವಾದಲ್ಲಿ ಕಾಲು ಜಾರಿ ಬೀಳುವ ಅಪಾಯ ಇರುತ್ತದೆ.

ಇನ್ನು ಮಳೆ ಬಂದಾಗ ಹೊರಗಿನಿಂದ ಬರೋರು ಒದ್ದೆ ಕಾಲಿನಿಂದ ಮನೆಯೊಳಗೆ ಬಂದಿರುತ್ತಾರೆ. ಇದರಿಂದ ಟೈಲ್ಸ್ ಮೇಲೆ ನೀರು ಬಿದ್ದಿರುತ್ತದೆ. ನೀರು ಕಾಣದೇ ಓಡಾಡುವಾಗ ಜಾರಿ ಬೀಳುವ ಅಪಾಯ ಇರುತ್ತದೆ.

ಮುಖ್ಯವಾಗಿ ಮಳೆಗಾಲದಲ್ಲಿ ಬಟ್ಟೆ ಒಣಗುವುದು ಕಷ್ಟ. ಆದರೂ ಸಹ ಆದಷ್ಟು ಶುಷ್ಕ ಬಟ್ಟೆಗಳನ್ನು ಧರಿಸುವ ಅಭ್ಯಾಸ ರೂಢಿಸಿಕೊಳ್ಳಿ. ಮಳೆಯಲ್ಲಿ ನೆನದ ಬಟ್ಟೆಗಳನ್ನು ತೊಳೆದು ಬಳಸಿ. ಹಾಗೆ ಒಣಗಿಸಿ ಬಳಕೆ ಮಾಡಿದ್ರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಮನೆ ಛಾವಣಿ ಸೋರುತ್ತಿದ್ದರೆ ಈಗಲೇ ಸರಿ ಮಾಡಿಕೊಳ್ಳಿ. ವಿದ್ಯುತ್ ಪಾಯಿಂಟ್​ಗಳಿರುವ ಗೋಡೆ ತೇವಾಂಶ ಹಿಡಿದುಕೊಳ್ಳುತ್ತಿದ್ರೆ ಎಲೆಕ್ಟ್ರಿಷಿಯನ್ಸ್​ಗಳನ್ನು ಪರಿಶೀಲಿಸಿಕೊಳ್ಳಿ.

ಇದರ ಹೊರತು ಮಳೆಗಾಲದಲ್ಲಿ ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸುವುದು ಸೂಕ್ತ. ಇದರಿಂದ ಶೀತ ಜ್ವರ ಕೆಮ್ಮು ಮುಂತಾದ ಸೋಂಕು ತಗಲುವುದನ್ನು ತಪ್ಪಿಸಬಹುದಾಗಿದೆ. ಇನ್ನು ಮಕ್ಕಳನ್ನು ಮನೆ ಹೊರಗಡೆ ಮಳೆಯಲ್ಲಿ ಆಟವಾಡುವುದನ್ನು ಕಂಟ್ರೋಲ್ ಮಾಡುವುದು ಮರೆಯಬೇಡಿ.

ಅದಲ್ಲದೆ ಮನೆ ಸುತ್ತ ಮುತ್ತಲೂ ನೀರು ಶೇಕರಣೆ ಆಗದಂತೆ ಗಮನ ವಹಿಸಿ. ಯಾಕೆಂದರೆ ನಿಂತ ನೀರಿನಲ್ಲಿ ಕ್ರಿಮಿ ಕೀಟ ಉತ್ಪತ್ತಿ ಆಗಿ ರೋಗವನ್ನು ಹರಡುತ್ತವೆ.

ಇದನ್ನೂ ಓದಿ: BSNL 5G: ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ! ಶೀಘ್ರದಲ್ಲಿ BSNL 5G ನೆಟ್ವರ್ಕ್!

Leave A Reply

Your email address will not be published.