‘ ಬಸ್ಸಿನಲ್ಲಿ ಮಹಿಳೆಯರ ತೊಂದರೆ ತಡೆಯಲಿಕ್ಕೆ ಆಗುತ್ತಿಲ್ಲ ‘- ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಬಗ್ಗೆ KSRTC ನೌಕರರ ಸಂಘದಿಂದ ಸಿಎಂಗೆ ಪತ್ರ
letter from KSRTC employees union to CM regarding guarantee of free bus travel
KSRTC Free bus travel: ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಘೋಷಿಸಿದ ವಿಚಾರವಾಗಿ ಇದೀಗ KSRTC ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ರವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಈಗ ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ನಮ್ಮ ಸಿಬ್ಬಂದಿಗಳಿಗೆ ಮಹಿಳಾ ಪ್ರಯಾಣಿಕರಿಂದ ತೀವ್ರ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಬೇಗನೇ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿ ಈ ಪತ್ರ ಬರೆಯಲಾಗಿದೆ. ಪತ್ರದಲ್ಲಿ ಗ್ಯಾರಂಟಿ ಕೊಟ್ಟ ನಿರ್ಧಾರದ ಬಗ್ಗೆ ಈಗ ಬಸ್ಸಿನಲ್ಲಿ ಮಹಿಳೆಯರು ಕೊಡುತ್ತಿರುವ ತೊಂದರೆಯ ಬಗ್ಗೆ ವಿವರಿಸಲಾಗಿದೆ.
ಹೀಗಾಗಿ ಶೀಘ್ರದಲ್ಲೇ ಸರ್ಕಾರ ಯೋಜನೆ ಜಾರಿಗೆ ತರಬೇಕು, ಮಹಿಳೆಯರಿಗೆ ಉಚಿತ ಪ್ರಯಾಣ (KSRTC Free bus travel) ಘೋಷಿಸಬೇಕು ಎಂದು ಸಿಎಂಗೆ ಸಾರಿಗೆ ಯೂನಿಯನ್ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಪತ್ರ ಬರೆದಿದ್ದಾರೆ. ಜತೆಗೆ ಈ ಯೋಜನೆ ಜಾರಿಯಿಂದ KSRTC ನಿಗಮಕ್ಕೆ ಆಗುವ ಹೊರೆಯನ್ನು ಸರ್ಕಾರ ಮುಂಗಡವಾಗೇ ಹಣ ಬಿಡುಗಡೆ ಮಾಡಿ ಭರಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಪತ್ರವನ್ನು ಪೂರ್ತಿ ಓದಿ:
” ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸಿರುವುದಕ್ಕೆ ತಮ್ಮನ್ನು ಹಾರ್ದಿಕವಾಗಿ ಅಭಿನಂದಿಸುತ್ತೇವೆ. ತಾವು ಚುನಾವಣಾ ಸಂಧರ್ಭದಲ್ಲಿ ಕೊಟ್ಟಿರುವ ಚುನಾವಣಾ ಪ್ರಣಾಳಿಕೆ ಮತ್ತು ಭರವಸೆಗಳು ಜನಮಾನಸವನ್ನು ಹೊಕ್ಕಿ ರಾಜ್ಯದ ಜನತೆಯೂ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಪಕ್ಷಕ್ಕೆ ನಿಚ್ಚಳ ಬಹುಮತವನ್ನು ಕೊಟ್ಟು 5 ವರ್ಷಗಳ ಕಾಲ ಅಧಿಕಾರ ನಡೆಸಲು ಆರ್ಶೀವದಿಸಿದೆ. ಎಂದು ನಾವು ಭಾವಿಸುತ್ತೇವೆ. ಯಾವುದೇ ಸರ್ಕಾರ ಬಂದ ತಕ್ಷಣ ಅದು ಎಲ್ಲ ಭರವಸೆಗಳನ್ನು ತಕ್ಷಣ ಜಾರಿ ಮಾಡಲು ಸಾಧ್ಯವಿಲ್ಲವೆಂಬುದು ನಮಗೂ ತಿಳಿದ ವಿಷಯವಾಗಿದೆ. ಆದರೂ ಕೂಡ ಕೆಲವು ಭರವಸೆಗಳನ್ನು ಹೆಚ್ಚು ವಿಳಂಬವಿಲ್ಲದೆ ಜಾರಿ ಮಾಡುವುದು ಬಹು ಅವಶ್ಯಕವಾಗಿದೆ. ಉದಾಹರಣೆಗೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಾಹನಗಳಲ್ಲಿ ಉಚಿತ ವಾಹನ ಸೇವೆಯನ್ನು ಕಲಿಸುವ ಒಂದು ಅಂಶವಿದೆ. ಸಹಜವಾಗಿಯೇ ಮಹಿಳೆಯರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಕೂಡಲೇ ಈ ಸೌಲಭ್ಯವನ್ನು ಬಯಸುತ್ತಾರೆ. ನಮಗೆ ತಳಮಟ್ಟದಿಂದ ಬಂದಿರುವ ಮಾಹಿತಿಯಂತೆ, ಅನೇಕ ಕಡೆ ಮಹಿಳಾಪ್ರಯಾಣಿಕರು ಹಣ ಕೊಡದೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕೆಂದು ನಿರ್ವಾಹಕರ ಮೇಲೆ ಒತ್ತಡ ಹೀಗಾಗಿ ಬಸ್ಸು ಪ್ರಯಾಣದ ಸಂದರ್ಭದಲ್ಲಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆಯುತ್ತಿದೆ. ಇದು ಒಳ್ಳೆ ಸೂಚನೆಯಲ್ಲ.”
” ಆದ್ದರಿಂದ ತಾವು ಶೀಘ್ರದಲ್ಲಿಯೇ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡುವ ವ್ಯವಸ್ಥೆಯನ್ನು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ. ಈ ಮೇಲ್ಕಂಡ ತೀರ್ಮಾನವನ್ನು ಜಾರಿ ಮಾಡಲು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆಗುವ ಆರ್ಥಿಕ ಹೊರೆಯನ್ನು ಸೂಕ್ತ ಅಂದಾಜು ಮಾಡಿ ನಿಗಮಗಳಿಗೆ ವೆಚ್ಚದ ಮುಂಗಡವನ್ನು ಮಂಜೂರು ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.” ಎನ್ನುವ ಪತ್ರವನ್ನು KSRTC ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ರವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿದ್ದಾರೆ.
ಇದನ್ನೂ ಓದಿ:Rishab Shetty: ಹೊಸ ಉದ್ಯಮಕ್ಕೆ ರಿಷಬ್ ಎಂಟ್ರಿ ; ಹುಟ್ಟೂರಿನ ಹೆಸರಲ್ಲಿ ಹೊಸ ಸಂಸ್ಥೆ ಕಟ್ಟಿದ ಶೆಟ್ರು!!