SpiceJet: ಸ್ಪೈಸ್‌ಜೆಟ್ ಪೈಲೆಟ್ ಗಳ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರ, ಪೈಲಟ್‌ಗಳ ಸಂಬಳವನ್ನು ತಿಂಗಳಿಗೆ ₹ 7.5 ಲಕ್ಷಕ್ಕೆ ಹೆಚ್ಚಿಸಿದ ವಿಮಾನಯಾನ ಸಂಸ್ಥೆ

SpiceJet Hikes Salaries For Pilots To Rs 7.5 Lakh Per Month

SpiceJet: ಅತ್ಯಂತ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯಗಳನ್ನು ಒದಗಿಸುವ ಸ್ಪೈಸ್‌ಜೆಟ್ (SpiceJet) ಸಂಸ್ಥೆಯು ಮಂಗಳವಾರ ತನ್ನ ಕ್ಯಾಪ್ಟನ್‌ಗಳ ವೇತನವನ್ನು 75 ಗಂಟೆಗಳ ಹಾರಾಟಕ್ಕೆ ತಿಂಗಳಿಗೆ ₹ 7.5 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ.

ಇನ್ನೂ ಹೆಚ್ಚುವರಿಯಾಗಿ, ಏರ್‌ಲೈನ್ ತನ್ನ ಕ್ಯಾಪ್ಟನ್‌ಗಳಿಗೆ ತಿಂಗಳಿಗೆ ₹ 1,00,000 ವರೆಗಿನ ಹಾರಾಟದ ಅವಧಿಯ ಆಧಾರದ ಮೇಲೆ ಮಾಸಿಕ ಲಾಯಲ್ಟಿ ಬಹುಮಾನವನ್ನು ಘೋಷಿಸಿದ್ದು, ಅದು ಅವರ ಮಾಸಿಕ ಸಂಭಾವನೆಗಿಂತ ಹೆಚ್ಚಾಗಿರುತ್ತದೆ ಎನ್ನುವುದು ವಿಶೇಷ.

ಈ ಘೋಷಣೆಯು ತನ್ನ18 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ಹೊರಬಂದಿದ್ದು, ಗುರುಗ್ರಾಮ ಮೂಲದ ಈ ವಿಮಾನಯಾನ ಸಂಸ್ಥೆಯು ಈ ಹೆಚ್ಚಳವು 2023ರ ಮೇ 16 ರಿಂದ ಅನ್ವಯವಾಗಲಿದೆ ಎಂದು ತಿಳಿಸಿದೆ. ಈ ಮಧ್ಯೆ, ತರಬೇತುದಾರರ (ಡಿಇ, ಟಿಆರ್‌ಐ) ಮತ್ತು ಮೊದಲ ಹಂತದ ಅಧಿಕಾರಿಗಳ ವೇತನವನ್ನು ಸಹ ಅನುಗುಣವಾಗಿ ಹೆಚ್ಚಿಸಲಾಗಿದೆ.

ಈ ಹಿಂದೆ 2022 ರ ನವೆಂಬರ್‌ನಲ್ಲಿ ಸ್ಪೈಸ್ ಸಂಸ್ಥೆಯು ತನ್ನ ಪೈಲಟ್‌ಗಳಿಗೆ ವೇತನವನ್ನು ಪರಿಷ್ಕರಿಸಿತ್ತು. ಇದರಲ್ಲಿ ಕ್ಯಾಪ್ಟನ್‌ಗಳ ವೇತನವನ್ನು 80 ಗಂಟೆಗಳ ಹಾರಾಟಕ್ಕಾಗಿ ತಿಂಗಳಿಗೆ ₹ 7 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಈಗ ಮತ್ತೆ ಹೆಚ್ಚಿಸಲಾಗಿದೆ.

ಸಂಸ್ಥೆಯ ಅಧ್ಯಕ್ಷ ಅಜಯ್ ಸಿಂಗ್ಇಸಿಎಲ್‌ಜಿಎಸ್ ಯೋಜನೆಯಿಂದ ಮತ್ತು ಅದರ ಆಂತರಿಕ ನಗದು ಸಂಚಯದಿಂದ ಪಡೆದ 50 ಮಿಲಿಯನ್ ಡಾಲರ್ ನಿಧಿಯಿಂದ ಸ್ಪೈಸ್‌ಜೆಟ್ ತನ್ನ ಗ್ರೌಂಡ್ಡ್ ವಿಮಾನಗಳನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ತನ್ನ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಮುಂಬರುವ ಹೆಚ್ಚು ಉತ್ತೇಜಕ ವರ್ಷಗಳನ್ನು ಎದುರು ನೋಡುತ್ತಿರುವುದರಿಂದ ಅತ್ಯುನ್ನತ ಗುಣಮಟ್ಟದ ಸೇವೆಗಳನ್ನು ಕಾಯ್ದುಕೊಳ್ಳಲು ಬದ್ಧರಾಗಿರಲು ಸಿಂಗ್ ಅವರು ಉದ್ಯೋಗಿಗಳಿಗೆ ತಿಳಿಸಿದರು.

ಈಗ ಸ್ಪೈಸ್‌ಜೆಟ್ ಭಾರತದೊಳಗಿನ ಮತ್ತು ಅಂತರರಾಷ್ಟ್ರೀಯ ಸ್ಥಳಗಳಿಗೆ ಒಟ್ಟು 48 ಸ್ಥಳಗಳಿಗೆ ತನ್ನ ಸುಮಾರು 250 ದೈನಂದಿನ ವಿಮಾನಗಳನ್ನು ಹಾರಾಟ ನಡೆಸುತ್ತಿದೆ. ಫ್ಲೀಟ್ ಬೋಯಿಂಗ್ 737 ಮ್ಯಾಕ್ಸ್, ಬೋಯಿಂಗ್ 700 ಮತ್ತು ಕ್ಯೂ 400 ಸೇರಿದಂತೆ ಹಲವು ವಿಮಾನಗಳನ್ನು ಸ್ಪೈಸ್ ಜೆಟ್ ಕಾರ್ಯಾಚರಿಸುತ್ತದೆ.

ಇದನ್ನೂ ಓದಿ: ಪ್ರಾಥಮಿಕ ಮತ್ತು ಪ್ರೌಢ ಶಾಲಾ ರಜಾದಿನಗಳು ಮತ್ತೊಂದು ವಾರಕ್ಕೆ ವಿಸ್ತರಣೆ, ಆದರೆ ಶಾಲಾ ಸಿಬ್ಬಂದಿಗೆ 2 ದಿನ ರಜೆ ಕಡಿತ !

Leave A Reply

Your email address will not be published.