Home Education Primary-secondary school holidays: ಪ್ರಾಥಮಿಕ ಮತ್ತು ಪ್ರೌಢ ಶಾಲಾ ರಜಾದಿನಗಳು ಮತ್ತೊಂದು ವಾರಕ್ಕೆ ವಿಸ್ತರಣೆ, ಆದರೆ...

Primary-secondary school holidays: ಪ್ರಾಥಮಿಕ ಮತ್ತು ಪ್ರೌಢ ಶಾಲಾ ರಜಾದಿನಗಳು ಮತ್ತೊಂದು ವಾರಕ್ಕೆ ವಿಸ್ತರಣೆ, ಆದರೆ ಶಾಲಾ ಸಿಬ್ಬಂದಿಗೆ 2 ದಿನ ರಜೆ ಕಡಿತ !

Primary-secondary school holidays
Image source: Kannada news - News 18

Hindu neighbor gifts plot of land

Hindu neighbour gifts land to Muslim journalist

Primary-secondary school holidays: ಇನ್ನೇನು ರಜಾ ದಿನಗಳು ಮುಗಿಯುತ್ತ ಬಂದಿವೆ. ತಿಂಗಳುಗಳ ಕಾಲ ರಜಾದ ಮಜಾ ಅನುಭವಿಸಿದ ಚಿಣ್ಣರುಗಳು ಮತ್ತೆ ಮನಸ್ಸಿಲ್ಲದಿದ್ದರೂ ಕಡ್ಡಾಯವಾಗಿ ಶಾಲೆಯ ಕಡೆಗೆ ಮುಖ ಮಾಡಲೇಬೇಕಾಗಿದೆ. ಈಗಾಗಲೇ ತಿಳಿಸಿರುವಂತೆ ಶಾಲೆಗಳು ನಾಳಿದ್ದು 25 ನೇ ತಾರೀಕಿಗೆ ಪ್ರಾರಂಭವಾಗಬೇಕಿತ್ತು, ಆದರೆ ಇದೀಗ ರಜಾ ದಿನಗಳು (Primary-secondary school holidays) ಒಂದಷ್ಟು ದಿನಗಳ ಮಟ್ಟಿಗೆ ಮುಂದೆ ಹೋಗಿದ್ದು ಶಾಲಾ ಮಕ್ಕಳು ಖುಷಿಯಾಗಿದ್ದಾರೆ. ಮತ್ತೆ ಮಕ್ಕಳು ಆಟಕ್ಕೆ ಮರಳಿದ್ದಾರೆ.

ಹೌದು, ಶಾಲೆಗಳು ಇನ್ನೊಂದು ವಾರ ಮುಚ್ಚಿರಲಿವೆ. ಪ್ರೌಢಶಾಲಾ ಶಿಕ್ಷಕ ಇಲಾಖೆ ತಿಳಿಸಿರುವಂತೆ ಮೇ 31 ರವರೆಗೆ ಶಾಲಾ ರಜಾ ದಿನ ವಿಸ್ತರಣೆಯಾಗಿದ್ದು ಜೂನ್ ಒಂದಕ್ಕೆ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗಲಿವೆ. ಆದರೆ ಮೇ 29 ನೇ ತಾರೀಕು ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಬೇಕಾಗಿದೆ. ಮಕ್ಕಳ ಶಾಲಾ ದಿನಗಳು ಪ್ರಾರಂಭವಾಗುವ ಎರಡು ದಿನ ಮೊದಲು ಶಿಕ್ಷಕರು ಕರ್ತವ್ಯಕ್ಕೆ ಹಾಜರಿದ್ದು, ಶಾಲಾ ಪ್ರಾರಂಭಕ್ಕೆ ಬೇಕಾದ ಸ್ವಚ್ಛತೆ ಮತ್ತು ಇತರ ಅಗತ್ಯಗಳನ್ನು ಪೂರೈಸಲು ಕೋರಲಾಗಿದೆ.

ಹಾಗಾಗಿ ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಜೂನ್ ಒಂದನೇ ತಾರೀಕಿನಂದು ಪ್ರಾರಂಭವಾಗಲಿದೆ. ಆದರೆ ಈಗಾಗಲೇ ತಿಳಿಸಿದಂತೆ ಶಾಲಾ ಸಿಬ್ಬಂದಿ ವರ್ಗ 29 ನೆಯ ತಾರೀಕು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಹಾಜರಿ ಹಾಕಬೇಕಿದೆ.

ಇದನ್ನೂ ಓದಿ: Letiesha Jones : ತನ್ನ ಎಂಜಲನ್ನೇ ಮಾರಿ ಪ್ರತೀ ತಿಂಗಳು ಲಕ್ಷ ಲಕ್ಷ ಗಳಿಸುತ್ತಾಳೆ ಈ ಪುಣ್ಯಾತ್ಗಿತ್ತಿ!! ಈಕೆಯ ಐಷಾರಾಮಿ ಜೀವನದ ಬಗ್ಗೆ ಕೇಳಿದ್ರೆ ನೀವೇ ಬೇರಗಾಗ್ತಿರಾ!!