Bad luck: ಶಾಸ್ತ್ರ ಪ್ರಕಾರ ಈ ವಸ್ತುಗಳು ಕೆಳಗೆ ಬಿದ್ದರೆ ನಿಮಗೆ ದುರಾದೃಷ್ಟ ಕಾಡಲಿದೆ! ಎಚ್ಚರ

According to Shastra it is bad luck if these objects fall down

Bad Luck In Shastra: ಕೆಲಸದ ಅವಸರದಲ್ಲಿ ಕೈಯಿಂದ ಕೆಲವೊಂದು ವಸ್ತುಗಳು ಜಾರಿ ಬೀಳುವುದುಂಟು. ಅನೇಕ ಬಾರಿ ನಾವು ಇಂತಹ ಘಟನೆಗಳನ್ನು ಅಶುಭವೆಂದು ಪರಿಗಣಿಸುತ್ತೇವೆ. ಹೌದು, ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳು ನಮ್ಮ ಕೈತಪ್ಪಿ ಕೆಳಗೆ ಬೀಳಬಾರದು ಎಂದು ಹೇಳಲಾಗಿದೆ. ಈ ವಸ್ತುಗಳು ಕೈತಪ್ಪಿ ಬೀಳುವುದು ನಮ್ಮ ಜೀವನದ ಅಶುಭ (Bad Luck In Shastra) ಘಟನೆಗಳನ್ನು ಸೂಚಿಸುತ್ತದೆ.

ಕೆಲವು ವಸ್ತುಗಳು ಬೀಳುವುದು ಮುಂಬರುವ ಆರ್ಥಿಕ ಬಿಕ್ಕಟ್ಟನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಯಾವೆಲ್ಲಾ ವಸ್ತುಗಳು ನಮ್ಮ ಕೈತಪ್ಪಿ ಕೆಳಗೆ ಬೀಳಬಾರದು ಎಂದು ನೋಡೋಣ ಬನ್ನಿ.

ಮನೆಯಲ್ಲಿ ಅಡುಗೆಗೆ ಬಳಸುವ ಪಾತ್ರೆಗಳು ನಿಮ್ಮ ಕೈಯಿಂದ ಪದೇ ಪದೇ ಬಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ವಾಸ್ತು ದೋಷಗಳು ಉಂಟಾಗುತ್ತವೆ. ಅಲ್ಲದೆ, ವ್ಯಕ್ತಿಯ ಜೀವನದಲ್ಲಿ ಅನೇಕ ತೊಂದರೆಗಳು ಉಂಟಾಗಬಹುದು. ಇದರಿಂದ ಲಕ್ಷ್ಮಿ ದೇವಿಯೂ ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು.

ವಿಶೇಷವಾಗಿ ಸಾಸಿವೆ ಎಣ್ಣೆ, ಶನಿ ದೇವನೊಂದಿಗೆ ಸಂಬಂಧವನ್ನು ಹೊಂದಿದೆ. ಆದ್ದರಿಂದ ಶನಿದೇವನು ಸಾಸಿವೆ ಎಣ್ಣೆಯನ್ನು ಹಾಳು ಮಾಡುವುದರಿಂದ ಅಥವಾ ಚೆಲ್ಲುವುದರಿಂದ ಕೋಪಗೊಳ್ಳಬಹುದು. ಅದಕ್ಕಾಗಿಯೇ ಎಣ್ಣೆಯನ್ನು ಎಚ್ಚರಿಕೆಯಿಂದ ಬಳಸಬೇಕು.

ಇನ್ನು ಅನೇಕ ಬಾರಿ ಗ್ಯಾಸ್ ಮೇಲೆ ಇಟ್ಟ ಹಾಲು ಕುದಿಯುತ್ತಿರುವಾಗ ನಾವು ಅಲ್ಲೇ ಇದ್ದರೂ ಕೆಲವೊಮ್ಮೆ ಉಕ್ಕಿ ಕೆಳಗೆ ಚೆಲ್ಲಿ ಹೋಗುತ್ತದೆ. ಇದನ್ನು ಅಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇನ್ನು ಆಹಾರವನ್ನು ಬಡಿಸುವಾಗ ಅಥವಾ ಆಹಾರವನ್ನು ಸೇವಿಸುವಾಗ, ಆಹಾರವು ನೆಲದ ಮೇಲೆ ಬೀಳಬಾರದು ಎಂಬುದನ್ನು ನೆನಪಿನಲ್ಲಿಡಿ. ಇದು ಲಕ್ಷ್ಮಿ ದೇವಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುವುದು. ಅಲ್ಲದೆ ಇದರಿಂದ ನೀವು ಅನೇಕ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮುಖ್ಯವಾಗಿ ಉಪ್ಪು ಆಕಸ್ಮಿಕವಾಗಿ ಕೈಯಿಂದ ಬಿದ್ದರೆ, ಜೀವನದಲ್ಲಿ ಅನೇಕ ಸಮಸ್ಯೆಗಳು ಬರಲಿವೆ ಎಂದರ್ಥ ಎಂದು ಶಾಸ್ತ್ರ ಹೇಳುತ್ತದೆ. ಉಪ್ಪನ್ನು ನೀವು ಕೆಳಗೆ ಬೀಳಿಸುವುದರಿಂದ ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಬಡತನ ತಲೆದೂರುತ್ತದೆ.

ಇನ್ನು ಕರಿಮೆಣಸನ್ನು ಕೈಯಿಂದ ಕೆಳಗೆ ಬೀಳಿಸುವುದು ಸಹ ಅಮಂಗಳಕರವೆಂದು ಹೇಳಲಾಗುತ್ತದೆ. ಅದೇ ರೀತಿ ಗಾಜುಗಳು ನಮ್ಮ ಕೈಯಿಂದ ಬಿದ್ದು ಒಡೆಯುವುದು ಸಹ ಅಮಂಗಳಕರವಾಗಿದೆ. ಯಾವುದೊ ಅಮೂಲ್ಯವಾದುದು ನಮ್ಮ ಕೈ ಜಾರಲಿರುವ ಸೂಚನೆ ಆಗಿರುತ್ತದೆ.

ಇನ್ನು ಸಿಂಧೂರ ಪೆಟ್ಟಿಗೆ ಬೀಳುವುದು ಎಂದರೆ ಪತಿ ತೊಂದರೆಯಲ್ಲಿದ್ದಾರೆ ಎಂಬುದರ ಮುನ್ಸೂಚನೆಯನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಸಿಂಧೂರ ಬಿದ್ದಾಗ ಅದನ್ನು ಪೊರಕೆಯಿಂದ ಗುಡಿಸಿ ಹಾಕದೆ, ಒಂದು ಬಟ್ಟೆಯಿಂದ ಎತ್ತಿಕೊಂಡು ನೀರಿನಲ್ಲಿ ಹರಿಯಲು ಬಿಡಬೇಕು.

 

ಇದನ್ನು ಓದಿ: Vehicle parking issue: ವಾಹನ ಪಾರ್ಕಿಂಗ್‌ ವಿಚಾರಕ್ಕೆ ಮಾರಾಮಾರಿ : ವ್ಯಕ್ತಿ ಮೇಲೆ ಕೊಡಲಿಯಿಂದ ಹಲ್ಲೆ 

Leave A Reply

Your email address will not be published.