SHOCKING NEWS: ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿದ ಬಳಿಕ ತನ್ನ ಪ್ರೇಯಸಿಯನ್ನೇ ಅತ್ಯಾಚಾರಗೈದ ಪ್ರಿಯಕರ ; ಮುಂದೇನಾಯ್ತು?!
After fight over the Kerala Story woman accuses boyfriend

The Kerala Story: ದೇಶಾದ್ಯಂತ ವಿವಾದದ ಕಿಡಿಯಿಂದಲೇ ಸದ್ದು ಮಾಡಿದ ‘ಲವ್ ಜಿಹಾದ್’ (love jihad) ಕಥೆಯಾಧಾರಿತ ಹಿಂದಿ ಸಿನಿಮಾ ‘ದಿ ಕೇರಳ ಸ್ಟೋರಿ’ (The Kerala Story) ನೋಡಲು ಜನರು ಧಾವಿಸುತ್ತಿದ್ದಾರೆ. ಅದರಲ್ಲೂ ಹಿಂದೂ ಹೆಣ್ಣುಮಕ್ಕಳು ನೋಡಲೇಬೇಕಾದ ಸಿನಿಮಾ ಎಂದು ಸಾಕಷ್ಟು ಧ್ವನಿ ಕೇಳಿಬರುತ್ತಿದೆ. ಈ ಮಧ್ಯೆ ಇಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಕೇರಳ ಸ್ಟೋರಿ ಸಿನಿಮಾ ನೋಡಿದ ಬಳಿಕ ಅಂತರ್‌ಧರ್ಮೀಯ ಪ್ರೇಮಿಗಳ ಮಧ್ಯೆ ವಾಗ್ವಾದ ಶುರುವಾಗಿ ಯುವಕ ತನ್ನ ಪ್ರೇಯಸಿಯನ್ನೇ ಅತ್ಯಾಚಾರಗೈದಿರುವ (rape) ಘಟನೆ ಮಧ್ಯಪ್ರದೇಶದ (Madhya pradesh) ಇಂಧೋರ್‌ನಲ್ಲಿ ನಡೆದಿದೆ.

ಯುವಕ 12ನೇ ತರಗತಿವರೆಗೆ ಓದಿದ್ದು, ನಿರುದ್ಯೋಗಿಯಾಗಿದ್ದಾನೆ. ಯುವತಿ ಉನ್ನತ ಶಿಕ್ಷಣ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವರಿಬ್ಬರಿಗೆ ನಾಲ್ಕು ವರ್ಷಗಳ ಹಿಂದೆ ಕೋಚಿಂಗ್ ಸೆಂಟರ್‌ನಲ್ಲಿ (coaching center) ಪರಿಚಯವಾಗಿದ್ದು, ನಂತರ ಪ್ರೇಮಾಂಕುರವಾಗಿತ್ತು. ಇತ್ತೀಚೆಗೆ ಈ ಪ್ರೇಮಿಗಳು ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ನೋಡಿದ ನಂತರ ಯುವತಿ ತನ್ನ ಮುಸ್ಲಿಂ ಪ್ರಿಯಕರನ ಜೊತೆ ಚರ್ಚೆಗೆ ತೊಡಗಿದ್ದಾಳೆ. ಚರ್ಚೆ ಜಗಳವಾಗಿ ಮಾರ್ಪಟ್ಟು, ಕೋಪಗೊಂಡ ಆತ ಆಕೆಯ ಮೇಲೆ ಹಲ್ಲೆ ಮಾಡಿದ್ದು, ಜೊತೆಗೆ ಅತ್ಯಾಚಾರ ಎಸಗಿ ಆಕೆಯನ್ನು ಬಿಟ್ಟು ತೆರಳಿದ್ದಾನೆ.
ಈ ಬಗ್ಗೆ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ‘ ಪ್ರೀತಿಸಿ, ಮದುವೆಯಾಗುತ್ತೀನಿ ಎಂದು ನಂಬಿಸಿದ ಅಂತರ್‌ಧರ್ಮೀಯ ಯುವಕ ಕಳೆದ ಕೆಲ ಸಮಯದಿಂದ ತನ್ನ ಒಟ್ಟಿಗೆ ವಾಸಿಸುತ್ತಿದ್ದ. ನಂತರ ಮದುವೆಯಾಗಬೇಕಾದರೆ ನೀನು ಇಸ್ಲಾಂಗೆ ಮತಾಂತರವಾಗಬೇಕು ಎಂದು ಆಕೆಗೆ ಪದೇ ಪದೇ ಮಾನಸಿಕವಾಗಿ ಪೀಡಿಸುತ್ತಿದ್ದ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು 23 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.