7th Pay Commission: ನೌಕರರ ಬೇಡಿಕೆ ಪ್ರಸ್ತಾಪಿಸಲು ಆಯೋಗದಿಂದ ಮೇ 26ಕ್ಕೆ ಮತ್ತೊಮ್ಮೆ ಅವಕಾಶ!
7th Pay Commission latest updates
7th Pay Commission: ಕೆಲವು ದಿನಗಳ ಹಿಂದೆ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಉಮಾ ಕೆ. ಏಳನೇ ವೇತನ ಆಯೋಗಕ್ಕೆ ತನ್ನ ಕಾರ್ಯ ಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುವಂತೆ ಆಯೋಗದ ಕಾಲಾವಧಿಯನ್ನು ಮೇ 19ರಿಂದ 6 ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ್ದರು. ಈ ಆಯೋಗವನ್ನು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 2022ರ ನವೆಂಬರ್ 19 ರಂದು ರಚಿಸಲಾಗಿತ್ತು. ಈ ಅವಧಿಯು ಮೇ. 19 ರಂದು ಅಂತ್ಯಗೊಳ್ಳಲಿದ್ದ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಿಸಲಾಗಿದೆ.
ಸದ್ಯ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ (7th Pay Commission) ಅವಧಿಯನ್ನು ಆರು ತಿಂಗಳು ವಿಸ್ತರಿದ್ದು, ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಬೇಡಿಕೆ ಮಂಡಿಸಿರುವ ರಾಜ್ಯ ಸರ್ಕಾರಿ ನೌಕರರ ವಿವಿಧ ಸಂಘಟನೆಗಳಿಗೆ, ನೌಕರರಿಗೆ, ಸಾರ್ವಜನಿಕರಿಗೆ ಮತ್ತೊಮ್ಮೆ ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಲು ಅವಕಾಶ ನೀಡಿದೆ.
ನೌಕರರು ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಲು ಆಯೋಗವು ಮೇ. 26ರ ರಂದು ವಿಶೇಷ ಸಭೆ ಕರೆದಿದ್ದು, ಈ ಸಭೆಯು ವೇತನ ಆಯೋಗದ ಕಚೇರಿಯ ಸಭಾ ಕೊಠಡಿಯಲ್ಲಿಯೇ ನಡೆಯಲಿದ್ದು, ಪೂರ್ವ ಸಿದ್ಧತೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಆಯೋಗದ ಕಾರ್ಯದರ್ಶಿ ಹಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಆಸಕ್ತರು ಬೇಡಿಕೆಗಳ ಸೂಕ್ತ ಪಿಪಿಟಿಯೊಂದಿಗೆ ಸಭೆಗೆ ಆಗಮಿಸಿ ತಮ್ಮ ವಾದವನ್ನು ಮಂಡಿಸಬೇಕೆಂದು ಆಯೋಗವು ತಿಳಿಸಿದೆ.
ಮುಖ್ಯವಾಗಿ ಬೇಡಿಕೆಗಳು ಮತ್ತು ಇತರೆ ವಿಷಯಗಳ ಸಂಕ್ಷಿಪ್ತ ಮಾಹಿತಿ ಇರಬೇಕು. ಮಾಹಿತಿಯು ನಿರ್ದಿಷ್ಟವಾಗಿರಬೇಕು ಮತ್ತು ಹತ್ತು ಸ್ಲೈಡ್‌ಗಳಿಗೆ ಸಮೀಪವಾಗಿರಬೇಕು. ಮಾಹಿತಿಯು ಸ್ಲೈಡ್‌ಗಳಲ್ಲಿ ಪುನರಾವರ್ತನೆಯಾಗಬಾರದು ಎಂದು ಸೂಚಿಸಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರವಾಗಿ ಶೇ.17 ರಷ್ಟು ವೇತನ ಹೆಚ್ಚಳವನ್ನು ಕಳೆದ ಏಪ್ರಿಲ್ 1 ರಿಂದಲೇ ಜಾರಿಗೆ ತಂದಿದೆ. ಸದ್ಯ ಏಳನೇ ವೇತನ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ:Monika Shergill: ಭಾರತದಲ್ಲಿ ನೆಟ್‌ಫ್ಲಿಕ್ಸ್‌ನ ಯಶಸ್ವಿ ಗೆ ಇವರೇ ನೋಡಿ ಕಾರಣ! ಇಲ್ಲಿದೆ ಮಾಹಿತಿ