Chiyan Vikram: ರಜನಿಕಾಂತ್​ ಎದುರು ಅಬ್ಬರಿಸಲಿರುವ ಚಿಯಾನ್ ವಿಕ್ರಮ್ ; ವಿಲನ್ ರೋಲ್’ಗೆ ವಿಕ್ರಮ್’ಗೆ ಸಿಕ್ತು ಭರ್ಜರಿ ಸಂಭಾವನೆ!

Chiyan vikram is the villain for super star rajinikanth next movie

Chiyan Vikram: ಪೊನ್ನಿಯನ್ ಸೆಲ್ವನ್ 2′ (Ponniyin Selvan 2) ಸಿನಿಮಾ ಸಕ್ಸಸ್ ನಂತರ ಚಿಯಾನ್ ವಿಕ್ರಮ್‌ಗೆ (Chiyan Vikram) ಬೇಡಿಕೆ ಹೆಚ್ಚಾಗಿದೆ. ಇದೀಗ ವಿಕ್ರಮ್‌ಗೆ ಮತ್ತೊಂದು ಬಂಪರ್ ಅವಕಾಶವೊಂದು ಸಿಕ್ಕಿದೆ. ನಟ ರಜನಿಕಾಂತ್‌ (Rajanikanth) ಮುಂದೆ ಚಿಯಾನ್ ವಿಕ್ರಮ್ ನಟಿಸುವ ಅವಕಾಶ ಬಂದೊದಗಿದೆ. ಅದಕ್ಕಾಗಿ ಭರ್ಜರಿ ಸಂಭಾವನೆ ಕೂಡ ಪಡೆದುಕೊಂಡಿದ್ದಾರೆ.

 

ರಜನಿಕಾಂತ್ (Rajinikanth) ನಟನೆಯ 170ನೇ ಸಿನಿಮಾಗೆ ವಿಲನ್ ಆಗಿ ಚಿಯಾನ್ ವಿಕ್ರಮ್ (Chiyan Vikram) ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ತಲೈವರ್ 170’ನೇ ಸಿನಿಮಾಗೆ ವಿಕ್ರಮ್’ಗೆ ಭರ್ಜರಿ ಸಂಭಾವನೆ ಸಿಗ್ತಿದೆ. ಹೌದು, ಚಿಯಾನ್ ವಿಲನ್ ಪಾತ್ರಕ್ಕೆ ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

‘ತಲೈವರ್ 170’ನೇ (Thalaivar 170) ಚಿತ್ರಕ್ಕೆ ಜೈ ಭೀಮ್ ಖ್ಯಾತಿಯ ಟಿಜಿ ಜ್ಞಾನವೇಲ್ ನಿರ್ದೇಶನ ಮಾಡುತ್ತಿದ್ದಾರೆ. ಅನಿರುದ್ಧ್ ಸಂಗೀತ ನೀಡಲಿದ್ದಾರೆ. ಈ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ಲೈಕಾ ತಮಿಳುನಾಡಿನಲ್ಲಿ ಹಲವು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಕ್ರಮ್ ಕಳೆದ 30 ವರ್ಷಗಳಿಂದ ತಮಿಳು, ತೆಲುಗು, ಮಲಯಾಳಂ ಭಾಷೆಗಳ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಿತಾಮಗನ್, ಐ, ದಿಲ್, ಜೆಮಿನಿ, ಅರುಲ್, ಸಾಮಿ, ಆನಿಯನ್, ರಾವಣ್, ಕಿಂಗ್, ಧೂಳ್, ಕಾಸಿ, ಕಾಂತಾ, ತಿರುಮಗಲ್ ಮೊದಲಾದ ಸಿನೆಮಾಗಳನ್ನು ಮಾಡಿದ್ದಾರೆ. ನಟನಿಗೆ ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳು, ಮೂರು ಬಾರಿ ರಾಜ್ಯಪ್ರಶಸ್ತಿ, ಪಿತಾಮಗನ್ ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ, ತಮಿಳುನಾಡಿನಲ್ಲಿ ಮಹಾನ್ ಕಲಾವಿದರಿಗೆ ಮಾತ್ರ ನೀಡುವ ಕಲೈಮಾಮಣಿ ಪ್ರಶಸ್ತಿಯನ್ನು ವಿಕ್ರಮ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:Rajanikanth: ಸಿನಿ ರಂಗಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಗುಡ್ ಬೈ? ನಟನೆಯಿಂದ ನಿವೃತ್ತಿ ಪಡೆಯಲಿದ್ದಾರಾ ತಲೈವಾ?

Leave A Reply

Your email address will not be published.