Cough Medicine: ಭಾರತದ ದೇಶದ ಕೆಮ್ಮಿನ ಔಷಧಿ ನೀತಿಯಲ್ಲಿ ಬದಲಾವಣೆ- ಕೇಂದ್ರ ಚಿಂತನೆ!

India considers policy change after cough medicine syrup deaths

Cough Medicine: ದೇಶದಲ್ಲಿ ತಯಾರಾದ ಕೆಮ್ಮಿನ ಔಷಧಿಗಳ (Cough Medicine) ಸೇವನೆಯಿಂದ ವಿದೇಶದಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆ ಔಷಧಿ ನೀತಿಯಲ್ಲಿ ಬದಲಾವಣೆ ಮಾಡಲು ಕೇಂದ್ರ ಚಿಂತನೆ ನಡೆಸಿದೆ. ಭಾರತವು (India) ತನ್ನ ಫಾರ್ಮಾಕ್ಯೂಟಿಕಲ್ ಕೈಗಾರಿಕಾ ನೀತಿಯನ್ನು ಬದಲಾಯಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ.

ಭಾರತವು ಜಾಗತಿಕ ಮಟ್ಟದಲ್ಲಿ ಜೆನೆರಿಕ್ ಔಷಧಿಗಳ ಅತಿ ದೊಡ್ಡ ಪೂರೈಕೆದಾರನಾಗಿದ್ದು, ಔಷಧ ನೀತಿಯಲ್ಲಿನ ಬದಲಾವಣೆಯ ಮೂಲಕ 41 ಶತಕೋಟಿ ಡಾಲರ್ ಮೊತ್ತದ ಫಾರ್ಮಾಕ್ಯೂಟಿಕಲ್ ಉದ್ಯಮದ ಮೇಲಿನ ನಿಗಾವಣೆಯನ್ನು ಹೆಚ್ಚಿಸಲಿದೆ. ಜೊತೆಗೆ ಕೆಮ್ಮಿನ ಔಷಧಿಗಳು ಹಾಗೂ ಔಷಧ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳ ಪರೀಕ್ಷೆಯನ್ನು ಹೆಚ್ಚಿಸುವ ಬಗ್ಗೆಯೂ ಪರಿಶೀಲಿಸಲಾಗುವುದೆಂದು ಮೂಲಗಳು ತಿಳಿಸಿವೆ.

ವಿದೇಶದಲ್ಲಿ ಮಕ್ಕಳ ಸಾವಿನಿಂದಾಗಿ ಕೆಮ್ಮಿನ ಔಷಧಿ ರಫ್ತು ಆಗುತ್ತಿಲ್ಲ. ಇದಕ್ಕೆ ಪರಿಹಾರ ಕಂಡುಹಿಡಿಯಲು ಹೈದರಾಬಾದಲ್ಲಿ ಚಿಂತನಾ ಶಿಬಿರವೊಂದನ್ನು ಆಯೋಜಿಸಲಾಗಿತ್ತು. ಭಾರತದ ಔಷಧಿ ನಿಯಂತ್ರಣ ಸಂಸ್ಥೆಯಾದ ಕೇಂದ್ರೀಯ ಔಷಧಿ ಮಾನದಂಡ ನಿಯಂತ್ರಣ ಸಂಸ್ಥೆಯು (ಸಿಡಿಎಸ್ಬಿಓ) ಕೆಮ್ಮಿನ ಸಿರಟ್ಗಳನ್ನು ರಫ್ತು ಮಾಡುವ ಮೊದಲು ಪರೀಕ್ಷೆಗೆ ಒಳಪಡಿಸುವ ಪ್ರಸ್ತಾವನೆಯನ್ನು ಇರಿಸಿತ್ತು. ಫೆಬ್ರವರಿಯಲ್ಲಿ ಹೈದರಾಬಾದಲ್ಲಿ ನಡೆದ ಚಿಂತನಾ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ, ಕೇಂದ್ರ ಹಾಗೂ ರಾಜ್ಯ ಸರಕಾರ ಮಟ್ಟದ ನಿಯಂತ್ರಣಾಧಿಕಾರಿಗಳು ಪಾಲ್ಗೊಂಡಿದ್ದರು.

ಭಾರತೀಯ ಔಷಧಿ ಉತ್ಪಾದಕ ಸಂಸ್ಥೆಯೊಂದು ತಯಾರಿಸಿದ ಕೆಮ್ಮಿನ ಸಿರಪ್ ಗಳಲ್ಲಿ ವಿಷಕಾರಿಯೆಂದು ಪರಿಗಣಿಸಲಾದ ಡಿಥಿಲೆನ್ ಸ್ಟೈಕೊಲ್ ಹಾಗೂ ಇಥೆಲಿನ್ ಗ್ಲಿಕೊಲ್ ಅಂಶಗಳು ಇದೆ. ಈ ಅಂಶ ಗಾಂಬಿಯಾ ದೇಶದಲ್ಲಿ 70ಕ್ಕೂ ಅಧಿಕ ಮಕ್ಕಳ ಸಾವಿಗೆ ಕಾರಣವಾಯಿತೆಂದು ವಿಶ್ವಸಂಸ್ಥೆ ಕಳೆದ ವರ್ಷ ವರದಿ ಮಾಡಿತ್ತು. ಆದರೆ, ಭಾರತವು ತನ್ನ ದೇಶದಲ್ಲಿ ಉತ್ಪಾದನೆಯಾದ ಕೆಮ್ಮಿನ ಔಷಧಿಗಳಿಗೂ, ಈ ಸಾವುಗಳಿಗೂ ಸಂಬಂಧವಿಲ್ಲ ಎಂದಿತ್ತು.

ಇದನ್ನೂ ಓದಿ:ನಾಳೆ ಸಿಇಟಿ ವಿದ್ಯಾರ್ಥಿಗಳಿಗೆ ತಟ್ಟಲಿದ್ಯಾ ಟ್ರಾಫಿಕ್‌ ಬಿಸಿ? ಪರೀಕ್ಷಾ ದಿನವೇ ಸಿದ್ದು-ಡಿಕೆಶಿ ಪ್ರಮಾಣ ವಚನ

Leave A Reply

Your email address will not be published.