7th pay commission: ಸರ್ಕಾರಿ ನೌಕರರಿಗೆ ಸಿಹಿಸುದ್ದಿ ; ತುಟ್ಟಿಭತ್ಯೆ ಹೆಚ್ಚಳಕ್ಕೆ ಘೋಷಣೆ!!

7th pay commission allowance increase announcement

7th pay commission: ದಿನ ಕಳೆದಂತೆ ಅಗತ್ಯವಸ್ತುಗಳ ಬೆಲೆ ಏರುತ್ತಲೇ ಇದೆ. ಹಾಗಾಗಿ ಜೀವನ ವೆಚ್ಚವೂ ಸಹಜವಾಗಿ ಏರುತ್ತದೆ. ಹಣದುಬ್ಬರವನ್ನು ಸರಿದೂಗಿಸಲು ನೌಕರರ ಸಂಬಳಕ್ಕೆ ತುಟ್ಟಿಭತ್ಯೆಯನ್ನು ಸೇರಿಸಿ ಕೊಡಬೇಕೆಂದು 7ನೇ ವೇತನ ಆಯೋಗ (7th pay commission) ಕಡ್ಡಾಯಪಡಿಸುತ್ತದೆ. ಡಿಎ ಇದೀಗ ಸೇವೆಯಲ್ಲಿರುವ ಸರ್ಕಾರಿ ನೌಕರರಿಗೆ ಅನ್ವಯವಾಗುತ್ತದೆ. ಸದ್ಯ ರಾಜ್ಯ ಸರ್ಕಾರಿ ನೌಕರರಿಗೆ (state government employees) ಸಿಹಿಸುದ್ದಿ ಇಲ್ಲಿದೆ.

ಹೌದು, ಉತ್ತರ ಪ್ರದೇಶ (uttar pradesh) ಸರ್ಕಾರದಿಂದ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಹಾಗೇ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೌಕರರ ತುಟ್ಟಿಭತ್ಯೆಯನ್ನು (ಡಿಎ) ನಾಲ್ಕು ಪ್ರತಿಶತದಷ್ಟು ಹೆಚ್ಚಿಸಲು ಅನುಮೋದನೆ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ 16 ಲಕ್ಷ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರು, ಕುಟುಂಬ ಪಿಂಚಣಿದಾರರಿಗೂ ಅನುಕೂಲವಾಗಲಿದೆ. ಆದರೆ, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 2,366.82 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

ಈ ಹಿಂದೆ ತಮಿಳುನಾಡಿನಲ್ಲಿ (tamilnadu) ಸರ್ಕಾರಿ ನೌಕರರ ಡಿಎ ಶೇ.38ರಷ್ಟಿದ್ದು, ಇದೀಗ ಏರಿಕೆ ನಂತರ ಇದು ಶೇ.42 ಆಗಿದೆ. ಸದ್ಯ ತಮಿಳುನಾಡಿನ ಸರ್ಕಾರಿ ನೌಕರರ ಕನಿಷ್ಠ ವೇತನ 15,700 ರೂ. ಆಗಿದೆ. ಶೇ.4ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾದ ನಂತರ ನೌಕರರ ವೇತನ ತಿಂಗಳಿಗೆ 628 ರೂಪಾಯಿ ಏರಿಕೆಯಾಗಲಿದೆ. ವಾರ್ಷಿಕವಾಗಿ 7,536 ರೂ.ಗಳಷ್ಟು ಹೆಚ್ಚಳವಾಗುತ್ತದೆ.

ಇದಕ್ಕೂ ಮುನ್ನ ಉತ್ತರ ಪ್ರದೇಶದ ಯೋಗಿ (Yogi) ಸರ್ಕಾರ ಕೂಡಾ ಉದ್ಯೋಗಿಗಳ ಡಿಎಯನ್ನು ಶೇ.4ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಯುಪಿಯಲ್ಲಿ ಡಿಎ ಮತ್ತು ಡಿಆರ್ ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರದ ಕ್ರಮಗಳ ಪ್ರಕಾರ ರಾಜ್ಯ ಸರ್ಕಾರವೂ ಡಿಎ ಹೆಚ್ಚಿಸಲಿದೆ ಎಂದು ಹೇಳಲಾಗಿದೆ.

ಜುಲೈ 1ರಿಂದ ಡಿಎ ಹೆಚ್ಚಳವಾಗುತ್ತದೆ ಎಂದು ಕೇಂದ್ರ ನೌಕರರು (central government employees) ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಸರ್ಕಾರ ಡಿಎ ಹೆಚ್ಚಳವನ್ನು ಘೋಷಿಸುವ ಸಾಧ್ಯತೆ ಇದೆ. ಆದರೆ ಈ ಹೆಚ್ಚಳ ಜುಲೈ 1 ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಈ ಬಾರಿಯೂ ಶೇ.4ರಷ್ಟು ಡಿಎ ಹೆಚ್ಚಳವಾಗುವ ನಿರೀಕ್ಷೆ ಇದೆ.

 

ಇದನ್ನು ಓದಿ: D K Shivkumar: ತಡರಾತ್ರಿ ಬಂದ ಆ ಫೋನ್ ಕಾಲ್ ಗೆ ಕರಗಿ, ಸಿಎಂ ಪಟ್ಟು ಬಿಟ್ಟ ಡಿಕೆಶಿ! ಹಾಗಾದ್ರೆ ಆ ಕರೆ ಯಾರದ್ದು? ಕರೆಮಾಡಿದವರು ಹೇಳಿದ್ದೇನು? 

Leave A Reply

Your email address will not be published.