Sudha Murty: ಆಗಿನ ಕಾಲಕ್ಕೆ ಸುಧಾ ಮೂರ್ತಿ ಅವರ ವೇತನ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಇನ್ಫೋಸಿಸ್ ಸಂಸ್ಥಾಪಕಿಯ ಜೀವನದ ಸಂಗತಿಗಳು!!

How much Sudha Murthy salary was for that time

Sudha Murty: ತಮ್ಮ ಸರಳ ವ್ಯಕ್ತಿತ್ವ, ಅದೇ ರೀತಿಯ ನಡೆ-ನುಡಿಗಳಿಂದ ಕನ್ನಡಿಗರ ಜನಮನದಲ್ಲಿ ಉಳಿದಿರುವ, ತಮ್ಮ ಮಾನವೀಯ ಕಾರ್ಯಗಳಿಂದಾಗಿ ದೇಶಾದ್ಯಂತ ತಮ್ಮದೇ ಆದಂತಹ ಅಭಿಮಾನಿ ವರ್ಗವನ್ನು ಹೊಂದಿರುವ ಇನ್‌ಫೋಸಿಸ್ (Infosys Company) ಪ್ರತಿಷ್ಠಾನದ ಸುಧಾಮೂರ್ತಿ (Sudha Murty) ಅವರು ಎಲ್ಲರಿಗೂ ತಿಳಿದಿದ್ದಾರೆ. ಆದರೆ, ಅವರ ಬಗ್ಗೆ ತಿಳಿದಿದೆಯಾ? ಇನ್‌ಫೋಸಿಸ್ ಕಂಪನಿಯ ಸಂಸ್ಥಾಪಕಿ ಸುಧಾಮೂರ್ತಿ ಅವರು ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಅವರ ಮೊದಲ ವೇತನ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಸುಧಾಮೂರ್ತಿ ಅವರ ಎಲ್ಲಾ ಮಾತುಗಳು ಅರ್ಥಪೂರ್ಣ ಆಗಿರುತ್ತದೆ. ಎಷ್ಟೇ ದೊಡ್ಡ ಶ್ರೀಮಂತಿಕೆ ಇದ್ದರೂ ಸಾಮಾನ್ಯರಂತೆ ಇರುತ್ತಾರೆ. ಸಾಮಾನ್ಯರೊಡನೆ ತಾವು ಬೆರೆಯುತ್ತಾರೆ. ಒಟ್ಟಾರೆ ಸರಳತೆಗೆ ಇನ್ನೊಂದು ಹೆಸರು ಸುಧಾಮೂರ್ತಿ ಅವರು ಎಂದರೆ ತಪ್ಪಾಗಲಾರದು. ಸುಧಾಮೂರ್ತಿ ಅವರು ಕನ್ನಡದ ಜನಪ್ರಿಯ ಶೋ ‘ವಿಕೆಂಡ್ ವಿತ್ ರಮೇಶ್’ ಗೆ (Weekend with Ramesh) ಆಗಮಿಸಿ ತಮ್ಮ ಜೀವನದ ಕಥೆಯನ್ನು ಬಿಚ್ಚಿಟ್ಟಿದ್ದರು. ಇದೀಗ ಹಿಂದಿ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ದಿ ಕಪಿಲ್ ಶರ್ಮಾ ಶೋ’ನಲ್ಲಿ (the Kapil Sharma show) ಲೇಖಕಿ, ಸಮಾಜ ಸೇವಕಿ, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಅವರು ಭಾಗವಹಿಸಿ, ಜೀವನದ ಕುರಿತು ಹಂಚಿಕೊಂಡಿದ್ದಾರೆ.

ಮಹಿಳಾ ಸಾಧಕಿಯರ ಕುರಿತಾದ ವಿಶೇಷ ಸಂಚಿಕೆಯಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ (Ravina tandan), ಆಸ್ಕರ್ ಪ್ರಶಸ್ತಿ ವಿಜೇತೆ ಗುನೀತ್ ಮೊಂಗಾ ಜೊತೆಗೆ ಸುಧಾ ಮೂರ್ತಿ ಕೂಡ ಮುಖ್ಯ ಅತಿಥಿಯಾಗಿ ‘ದಿ ಕಪಿಲ್ ಶರ್ಮಾ ಶೋ’ ಗೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ತಮ್ಮ ಮೊದಲ ಸಂಬಳ ಮತ್ತು ಪತಿ ನಾರಾಯಣ ಮೂರ್ತಿ (Narayana Murthy) ಸ್ಥಾಪಿಸಿದ ‘ಇನ್ಫೋಸಿಸ್’ ಕಂಪನಿಗೆ ನೀಡಿದ ಬಂಡವಾಳದ ಬಗ್ಗೆ ಸುಧಾ ಮೂರ್ತಿ ಅವರು ಹೇಳಿದರು.

1974 ರಲ್ಲಿ ಸುಧಾ ಮೂರ್ತಿ ಅವರು ಮೊದಲ ಸಂಬಳ ಪಡೆದಿದ್ದು, ಆಗಿನ ಕಾಲಕ್ಕೆ 1500 ರೂಪಾಯಿ ಪಡೆದಿದ್ದರಂತೆ. ಇಂದಿನ ದಿನದಲ್ಲಿ ಈ ವೇತನ ಏನೂ ಅಲ್ಲವಾಗಿದೆ. ಆದರೆ, ಅಂದಿನ ದಿನದಲ್ಲಿ ಅದೇ ದೊಡ್ಡ ಮೊತ್ತವಾಗಿತ್ತು. ಇನ್ನು ಪತಿ ನಾರಾಯಣ ಮೂರ್ತಿ ಆಗಿನ ಕಾಲದಲ್ಲಿ 1000 ರೂಪಾಯಿ ಸಂಬಳ ಪಡೆದುಕೊಳ್ಳುತ್ತಿದ್ದರಂತೆ.
ಸುಧಾ ಮೂರ್ತಿ ಅವರ ತಂದೆ ಪ್ರೊಫೆಸರ್ ಮತ್ತು ಡಾಕ್ಟರ್ ಆಗಿದ್ದರು. ಅವರಿಗೆ 500 ರೂಪಾಯಿ ಸಂಬಳ ಬರುತ್ತಿತ್ತು. ಇವೆಲ್ಲಾ ನೋಡಿದರೆ, ಕುಟುಂಬದಲ್ಲಿ ಸುಧಾ ಮೂರ್ತಿ ಅವರಿಗೆ ಹೆಚ್ಚು ಸಂಬಳ ಇತ್ತು.

ನಾರಾಯಣ ಮೂರ್ತಿ ಅವರನ್ನು ಸುಧಾ ಮೂರ್ತಿ ಅವರು ಭೇಟಿಯಾದ ಕಥೆ ಇಂಟೆರೆಸ್ಟಿಂಗ್ ಆಗಿದೆ. ಸುಧಾ ಮೂರ್ತಿ ಅವರು ಕೆಲಸಕ್ಕೆ ಬಸ್ ನಲ್ಲಿ ಹೋಗಬೇಕಾದರೆ ಅವರ ಫ್ರೆಂಡ್‌ ತರುತ್ತಿದ್ದ ಪುಸ್ತಕದಲ್ಲಿ ನಾರಾಯಣ ಮೂರ್ತಿ ಅವರ ಹೆಸರು ಬರೆದಿತ್ತಂತೆ. ಅದನ್ನು ಕಂಡು ಸುಧಾ ಅವರು ಮೂರ್ತಿ ಅವರನ್ನು ಬಸ್ ಕಂಡಕ್ಟರ್ ಎಂದು ಕೊಂಡಿದ್ದರಂತೆ. ನಂತರದಲ್ಲಿ ಮೂರ್ತಿ ಅವರ ಬಗ್ಗೆ ತಿಳಿದಾಗ ಯುವಕ ಹ್ಯಾಂಡ್ಸಮ್ ಆಗಿ ನೋಡಲು ಸುಂದರವಾಗಿ ಇರಬಹುದು ಎಂಬ ಇಮ್ಯಾಜಿನೇಷನ್ ಇತ್ತಂತೆ. ಇದರೆ, ನಾರಾಯಣ ಮೂರ್ತಿ ಅವರನ್ನು ಸುಧಾ ಮೂರ್ತಿ ಅವರು ಭೇಟಿಯಾದಾಗ ಚಿಕ್ಕ ಹುಡುಗನಂತೆ ಕಾಣಿಸಿದರು ಎಂದರು. ಮದುವೆಯಾದಾಗ ಅವರ ತೂಕ ಎಷ್ಟಿತ್ತೋ, ಈಗಲೂ ತೂಕ ಅಷ್ಟೇ ಇದೆ. ಯಾಕಂದ್ರೆ, ನಾನು ಚೆನ್ನಾಗಿ ಅಡುಗೆ ಮಾಡಲ್ಲ ಎಂದು ಸುಧಾ ಮೂರ್ತಿ ಹಾಸ್ಯವಾಗಿ ನುಡಿದರು.

ಇನ್ಫೋಸಿಸ್ ಕಂಪನಿ ಕಟ್ಟಲು ಪತಿ ನಾರಾಯಣ ಮೂರ್ತಿಗೆ ಸುಧಾ ಮೂರ್ತಿ 10 ಸಾವಿರ ರೂಪಾಯಿ ಬಂಡವಾಳ ನೀಡಿದ್ದರಂತೆ. ಸುಧಾ ಮೂರ್ತಿ ಅವರು ಈಗ ಶ್ರೀಮಂತರಾದರೂ ಆಗ ಮಧ್ಯಮ ವರ್ಗದ ಜನ. ‘ಸಾಫ್ಟ್‌ ವೇರ್ ಕಂಪನಿ ಶುರು ಮಾಡುತ್ತೇನೆ’ ನನಗೆ ಹಣ ನೀಡು ಎಂದು ಮೂರ್ತಿ ಅವರು ಕೇಳಿದ್ದು, ಸುಧಾ ಅವರು ಕೂಡಿಟ್ಟಿದ್ದ 10250 ರೂಪಾಯಿಯಲ್ಲಿ ಅವರಿಗೆ 10 ಸಾವಿರ ರೂಪಾಯಿ ಕೊಟ್ಟು 250 ರೂಪಾಯಿಯನ್ನು ಎಮರ್ಜೆನ್ಸಿಗೆ ಅಂತ ಇಟ್ಟುಕೊಂಡರು. ಅಲ್ಲದೆ, ಸುಧಾ ಅವರು ತಮ್ಮನ್ನು ಇಂಡಿಯಾದ ಬೆಸ್ಟ್ ಇನ್ವೆಸ್ಟರ್ ಎನ್ನುತ್ತಾರೆ. ಯಾಕಂದ್ರೆ, ಆಗ 10 ಸಾವಿರ ರೂಪಾಯಿ ಅಂದ್ರೆ, ನನಗೆ ಈಗ ಬಿಲಿಯನ್ಸ್ ಇದ್ದ ಹಾಗೆ ಎಂದು ಹೇಳಿದರು. ಸದ್ಯ ಈ ಇನ್ಫೋಸಿಸ್ ಕಂಪನಿಯಲ್ಲಿ ಲಕ್ಷಾಂತರ ಜನರು ಉದ್ಯೋಗ ಕಂಡುಕೊಂಡಿದ್ದಾರೆ. ಕಂಪನಿ ಸಾಕಷ್ಟು ಯುವಜನರಿಗೆ ಬದುಕು ಕೊಟ್ಟಿದೆ ಎಂದರೆ ತಪ್ಪಾಗಲಾರದು.

‘’ನಾನು ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ದೇವರು ನಮ್ಮನ್ನ ಚೆನ್ನಾಗಿ ಇಟ್ಟಿದ್ದಾನೆ. ನಾನು ನಾರಾಯಣ ಮೂರ್ತಿ ಅವರನ್ನ ಮದುವೆಯಾದಾಗ, ಅವರಿಗೆ ಕೆಲಸ ಇರಲಿಲ್ಲ. ‘ಏನು ಕೆಲಸ ಮಾಡುತ್ತಾರೆ ಅಂತ ಯಾರಾದರೂ ಕೇಳಿದರೆ ಏನು ಹೇಳೋದು’ ಅಂತ ಅಪ್ಪ ನನ್ನನ್ನ ಕೇಳಿದ್ದರು. ‘ಸುಧಾ ಪತಿ ಅಂತಷ್ಟೇ ಹೇಳಿ’ ಅಂತ ನಾನು ಹೇಳಿದ್ದೆ. ಇವತ್ತು ನಾವು ಚೆನ್ನಾಗಿದ್ದೇವೆ’’ ಎಂದೂ ಸುಧಾ ಮೂರ್ತಿ ಹೇಳಿದರು. ಹಾಗೇ ಸುಧಾ ಮೂರ್ತಿ ಅವರು ಸಿನಿಮಾ ನೋಡುತ್ತಾರಂತೆ. ಅವರ ಫೇವರಿಟ್ ಹೀರೋ ದಿಲೀಪ್ ಕುಮಾರ್ ಎಂದು ಹೇಳಿದರು.

 

ಇದನ್ನು ಓದಿ: Mangalore: ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳನ,ಶಾಂತಿ ಕದಡುವ ಬೆಳವಣಿಗೆ : ಪೊಲೀಸ್ ಇಲಾಖೆ ಹದ್ದಿನ ಕಣ್ಣು

Leave A Reply

Your email address will not be published.