ದಕ್ಷಿಣ ಕನ್ನಡ: ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಮಾರಣಾಂತಿಕ ಹಲ್ಲೆ, ಕಟೀಲ್ ಮತ್ತು ಸದಾನಂದ ಗೌಡ ಬ್ಯಾನರ್ ಹಾಕಿದವರ ಸ್ಥಿತಿ ಗಂಭೀರ !

police beaten heavily on bjp members

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಡಿವಿ ಸದಾನಂದ ಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾಕಿ, ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಏಳು ಮಂದಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಈಗ ಇವರಲ್ಲಿ ಕೆಲವರಿಗೆ ‘ ಪೋಲಿ ‘ ಸರು ಕಾನೂನು ಕೈಯಲ್ಲಿ ತೆಗೆದುಕೊಂಡು ಬೆತ್ತ ಹಿಡಿದು ಬಾರಿಸಿ ಬೆನ್ನು ಪುಡಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಇವರಲ್ಲಿ ಹೆಚ್ಚಿನವರು ಬಿಜೆಪಿ ಕಾರ್ಯಕರ್ತರೇ ಆಗಿದ್ದು ಮೊನ್ನೆ ಬಿಜೆಪಿ ಪರವಾಗಿಯೇ ಚುನಾವಣೆಗೆ ದುಡಿದಿದ್ದರು. ಮೂವರು ಕಾರ್ಯಕರ್ತರು ಅರುಣ್ ಪುತ್ತಿಲ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಪುತ್ತೂರಿನಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಗಳಲ್ಲಿ ಅವರು ಅರುಣ್ ಪುತ್ತಿಲ ಕಡೆಗೆ ನು ನಿಂತಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಅರುಣ್ ಪುತ್ತಲ ಅವರ ಜನಪ್ರಿಯತೆ ಟ್ರೆಂಡ್ ಹೆಚ್ಚಾಗಿತ್ತು. ಅದರ ಜೊತೆಗೆ ವ್ಯಾಪಕ ಮಟ್ಟದ ಬೆಟ್ಟಿಂಗ್ ನಡೆದಿತ್ತು. ಆದರೂ ಕೆಲ ಬಿಜೆಪಿಯ ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಇನ್ನೂ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ ಎನ್ನುವವರ ವಿರುದ್ಧ ಬೆಟ್ ಕಟ್ಟಿದ್ದರು. ಆದರೆ ಮೇ 13 ನೇ ತಾರೀಕು ಫಲಿತಾಂಶ ಬಂದು ಬಿಜೆಪಿ ಮೂರನೇ ಸ್ಥಾನಕ್ಕೆ ನೂಕಲ್ಪಟ್ಟಿತ್ತು. ಅವತ್ತು ಸಾಮಾನ್ಯ ಬಿಜೆಪಿ ಕಾರ್ಯಕರ್ತರೇ ಸಾವಿರಾರು ರೂಪಾಯಿ ಬೆಟ್ಟಿಂಗ್ ನಲ್ಲಿ ಕಳೆದುಕೊಂಡಿದ್ದರು.

ಇದರಿಂದ ಕೋಪಗೊಂಡ ಕಾರ್ಯಕರ್ತರುಗಳು ಇದಕ್ಕೆ ಕಾರಣೀಭೂತರು ಎಂದು ಡಿವಿ ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಕೋರಿದ ಅಳವಡಿಸಿದ್ದರು. ಪುತ್ತೂರಿನಲ್ಲಿ ಹೀನಾಯ ಸೋಲಿಗೆ ಇವರಿಬ್ಬರೇ ಕಾರಣ ಎಂದು ಸಿಟ್ಟಿನಲ್ಲಿ ಕಾರ್ಯಕರ್ತರೇ ಸೇರಿಕೊಂಡು ಭಾನುವಾರ ರಾತ್ರಿ ಪುತ್ತೂರು ಬಸ್ ಸ್ಟ್ಯಾಂಡಿನ ಹತ್ತಿರ ಬ್ಯಾನರ್ ಹಾಕಿದ್ದರು. ಬ್ಯಾನರ್ ಫೋಟೋ ವೈರಲ್ ಆಗಿ ಬಿಜೆಪಿ ನಾಯಕರಿಗೆ ಇರಿಸು ಮುರಿಸು ಆಗುತ್ತಲೇ ಪೊಲೀಸರಿಗೆ ಒತ್ತಡ ಬಂದಿತ್ತು. ಆರೋಪಿಗಳನ್ನು ಕೂಡಲೇ ಬಂಧಿಸಿ, ಬೆಂಡೆತ್ತಬೇಕು ಎಂದು ಸ್ಥಳೀಯ ನಳಿನ್ / ಪರ ಇರುವವರು ಪೊಲೀಸರಿಗೆ ಸೂಚನೆ ನೀಡಿದ್ದರು. ಜತೆಗೆ ಡಿವಿ ಸದಾನಂದ ಗೌಡ ಅವರಿಗೆ ಅವಮಾನ ಮಾಡಿದ ಕಾರಣವಾದವರ ಬಗ್ಗೆ ಕಾಂಗ್ರೆಸ್ ನಾಯಕ ಕೂಡಾ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ.

ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮನಸೋ ಇಚ್ಛೆ ದನಕ್ಕೆ ಬಡಿಯೋ ಥರ ಬಡಿದಿದ್ದಾರೆ. ಎಷ್ಟು ಹೀನಾಯವಾಗಿ ಹೊಡೆದಿದ್ದಾರೆ ಎಂದರೆ, ಆರೋಪಿಗಳು ಸದ್ಯಕ್ಕೆ ರಿಕವರಿ ಆಗೋದು ಕಷ್ಟ. ಹಿರಿಯ ಪೊಲೀಸ್ ಅಧಿಕಾರಿಯೇ ಮುಂದೆ ನಿಂತು ಕೈಗೆ ಕಾನೂನು ತೆಗೆದುಕೊಂಡಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೆ ಸ್ಟೇಷನ್ ನಲ್ಲಿ ಕಾರ್ಯಕರ್ತರ ಹತ್ಯೆ ನಡೆದು ಹೋಗುತ್ತಿತ್ತು ! ಆ ಮಟ್ಟಿಗೆ ಹಿಂಸೆ ನಡೆದುಹೋಗಿದೆ.

ವಿಷಯ ತಿಳಿದ ಅರುಣ್ ಪುತ್ತಿಲ ಅವರು ಸೋಮವಾರ ರಾತ್ರಿ ಗಂಟೆ ವೇಳೆಗೆ ಠಾಣೆಗೆ ತೆರಳಿ ಏಳು ಮಂದಿಯನ್ನೂ ಬಿಡುಗಡೆ ಮಾಡಿಸಿದ್ದಾರೆ. ಆರೋಪಿಗಳನ್ನು ಮುಚ್ಚಳಿಕೆ ಬರೆಸಿ, ಪೊಲೀಸರು ಕಳಿಸಿ ಕೊಟ್ಟಿದ್ದಾರೆ.

ಇಲ್ಲಿ ಮುಖ್ಯವಾದ ಪ್ರಶ್ನೆ ಏನೆಂದರೆ, ಪೊಲೀಸರಿಗೆ ಈ ರೀತಿ ಹೊಡೆಯಲು, ಕಾನೂನು ಕೈಗೆ ತೆಗೆದುಕೊಳ್ಳಲು ಅಧಿಕಾರ ನೀಡಿದವರು ಯಾರು ? ಕಾರ್ಯಕರ್ತರು ತಪ್ಪು ಮಾಡಿದರೆ ಅದನ್ನು ಕಾನೂನಾತ್ಮಕವಾಗಿ ಶಿಕ್ಷಿಸಲು ಅವಕಾಶವಿದೆ. ಆದರೆ ಬಿಜೆಪಿ ಕಾರ್ಯಕರ್ತರನ್ನು ಬಡಿದು ಮಲಗಿಸಲಾಗಿದೆ. ಮರ್ಯಾದೆಗೆ ಅಂಜಿ ಆ ಎಲ್ಲಾ ಹುಡುಗರೂ ಮನೆಯಲ್ಲೇ ಕೂತಿದ್ದಾರೆ. ಅವರೆಲ್ಲರ ಆರೋಗ್ಯ ಕ್ಷೀಣಿಸುತ್ತಿದ್ದು, ಇದೀಗ ಆಸ್ಪತ್ರೆಗೆ ದಾಖಲಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯಾದ್ಯಂತ ಹಲ್ಲೆಗಳು ಮತ್ತು ಕೊಲೆಗಳು ನಡೆಯುತ್ತಿದ್ದು, ಇದೀಗ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ದೈಹಿಕ ಹಲ್ಲೆ ನಡೆದಿದೆ. ಇಂತಹ ಘಟನೆಗಳನ್ನು ಪ್ರತಿಭಟಿಸಿದರೆ ಹೋದರೆ ಮತ್ತಷ್ಟು ಅನಾಹುತಗಳಿಗೆ ಇಂಬು ಸಿಗುವುದಂತೂ ಸ್ಪಷ್ಟ.

Leave A Reply

Your email address will not be published.