West Bengal: ಅಕ್ರಮ ಪಟಾಕಿ ಘಟಕದಲ್ಲಿ ತೀವ್ರ ಸ್ಫೋಟ! ಐವರು ಸಾವು, ಏಳು ಮಂದಿ ಗಂಭೀರ

5 killed and 7 injured in explosion at illegal Firecracker unit in bengal

Illegal Firecracker unit: ಅಕ್ರಮ ಪಟಾಕಿ ಘಟಕದಲ್ಲಿ ( Illegal Firecracker unit) ಮಂಗಳವಾರ ಭಾರೀ ಸ್ಫೋಟ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಎಗ್ರಾದಲ್ಲಿ ನಡೆದಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ವಸತಿ ಕಟ್ಟಡದಲ್ಲಿ ನಡೆಯುತ್ತಿದ್ದ ಈ ಕಾರ್ಖಾನೆಯ, ಸ್ಫೋಟದ ತೀವ್ರತೆಗೆ ವಸತಿ ಕಟ್ಟಡವೇ ಕುಸಿದು ಬಿದ್ದಿದೆ ಎಂದು ಪೊಲೀಸ್‌ ವರದಿ ತಿಳಿಸಿದೆ.

ಬಿಜೆಪಿಯ ಹಿರಿಯ ನಾಯಕ ಸುವೇಂದು ಅವರು ಈ ಘಟನೆಯ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ದೇಹದ ಭಾಗಗಳು ಮತ್ತು ಅವಶೇಷಗಳು ಸೇರಿದಂತೆ ಸುತ್ತಲೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದರಿಂದ ಇಡೀ ಮನೆ ಯುದ್ಧ ವಲಯದಂತೆ ಕಾಣುತ್ತದೆ ಎಂದು ಗ್ರಾಮಸ್ಥರು ಪಿಟಿಐಗೆ ತಿಳಿಸಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಅವರು ಈ ಘಟನೆ ಬಗ್ಗೆ ಮಾತನಾಡುತ್ತಾ,” ಪಶ್ಚಿಮ ಬಂಗಾಳ-ಒಡಿಶಾ ಗಡಿ ಸಮೀಪ ಈ ಘಟನೆ ನಡೆದಿದೆ. ಹಳ್ಳಿಯೊಂದರ ಮನೆಯಲ್ಲಿ ಅಕ್ರಮ ಪಟಾಕಿ ಘಟಕ ಕಾರ್ಯನಿರ್ವಹಿಸುತ್ತಿದ್ದು, ಈ ಭೀಕರ ಸ್ಫೋಟದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಈ ಬಗ್ಗೆ ತನಿಖೆ ನಡೆಯುತ್ತಿದೆ” ಎಂಬ ಮಾತನ್ನು ಹೇಳಿದ್ದಾರೆ. ಮೃತರ ಬಂಧುಗಳಿಗೆ ತಲಾ 2.25ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಿದೆ, ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ:ಪ್ರಿಯತಮೆಯನ್ನು ವಸತಿಗೃಹದಲ್ಲಿ ಬರ್ಬರವಾಗಿ ಹತ್ಯೆಗೈದ ಪ್ರಿಯಕರ, ನಂತರ ಪೊಲೀಸರಿಗೆ ಶರಣು!!!

Leave A Reply

Your email address will not be published.