Priyanka Gandhi: ಕರ್ನಾಟಕದಲ್ಲಿ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿಗೆ ಸಿಕ್ಕಿದ್ದಾನೆ ಹೊಸ ಬಾಯ್ ಫ್ರೆಂಡ್ !

Priyanka Gandhi got a new friend in Karnataka election campaign

Priyanka Gandhi: ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election) ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಯವರಿಗೆ ಒಂದು ಹೊಸ ಸ್ನೇಹಿತ ಸಿಕ್ಕಿದ್ದಾನೆ. ಪ್ರಚಾರದ ಸಂದರ್ಭ ತಮಗೆ ಹೊಸ ಗೆಳೆಯನ ಪರಿಚಯ ಆಗಿರುವುದಾಗಿ ಪ್ರಿಯಾಂಕ ತಿಳಿಸಿದ್ದಾರೆ.

 

ಪ್ರಿಯಾಂಕ ಗಾಂಧಿಯವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಹೊಸ ಗೆಳೆಯನ ಬಗ್ಗೆ ವಿಷಯ ಹಂಚಿಕೊಂಡಿದ್ದಾರೆ. ಆಕೆ ಆನೆಯೊಂದಿಗಿನ ಫೋಟೋವೊಂದನ್ನು ಹಂಚಿಕೊಂಡಿದ್ದು, ಕರ್ನಾಟಕ ಪ್ರಚಾರದ ಸಮಯದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ.

ಆ ಫೋಟೋದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ತಲೆಯ ಮೇಲೆ ಆನೆಯೊಂದು ತನ್ನ ಸೊಂಡಿಲನ್ನು ಇರಿಸಿ, ಆಶೀರ್ವದಿಸುತ್ತಿದೆ. ಈ ಫೋಟೋವನ್ನು ಹಂಚಿಕೊಂಡ ಒಂದು ಗಂಟೆಯಲ್ಲಿ 10,000 ಹೆಚ್ಚು ಮಂದಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದರ ಜತೆಗೇ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.

 

 

ಇದನ್ನು ಓದಿ: Karnataka CM?: ನಾಳೆ ಬೆಳಿಗ್ಗೆ ಸಿಎಂ ಆಯ್ಕೆ ಬಗ್ಗೆ ಫೈನಲ್ ಮೀಟಿಂಗ್: ಅದರ ಬೆನ್ನಲ್ಲೇ ಮುಖ್ಯಮಂತ್ರಿ ಹೆಸರು ಘೋಷಣೆ ! 

Leave A Reply

Your email address will not be published.