WATCH FUNNY VIDEO | ಮೊಬೈಲ್ ಎಂದು ಭಾವಿಸಿ ಯುವತಿಯ ನ್ಯಾಪ್ಕಿನ್ ಗೆ ಕೈ ಹಾಕಿ ಕಿತ್ಕೊಂಡು ಪರಾರಿಯಾದ ಕಳ್ಳರು !

Thieves have stolen a young woman napkin as a mobile

Thieves: ಕಳ್ಳರು ಮಾಡುವ ನಾನಾ ಆವಾಂತರಗಳು ಆಗಾಗ ಸಿಸಿಟಿವಿ ಯ ಮುಖಾಂತರ ನಮಗೆ ಆಗೀಗ್ಗೆ ಕಾಣ ಸಿಗುತ್ತಲೇ ಇರುತ್ತವೆ. ಮತ್ತು ಈ ಥರದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಇಂತದ್ದೇ ಒಂದು ವಿಡಿಯೋ ವೈರಲ್‌ ಆಗಿದ್ದು, ಕಳ್ಳರು ನಗೆಪಾಟಲಿಗೆ ಗುರಿಯಾಗಿದ್ದಾರೆ, ಜನ ಬಿದ್ದು ಬಿದ್ದು ನಕ್ಕಿದ್ದಾರೆ.

 

ಸ್ಕೂಟಿಯಲ್ಲಿ ಯುವತಿಯರಿಬ್ಬರು ಕುಳಿತಿದ್ದಾರೆ. ಸ್ಕೂಟಿಯ ಮುಂಭಾಗದಲ್ಲಿ ಕುಳಿತಿರುವ ಯುವತಿ ಶೀತದಿಂದ ಬಳಲುತ್ತಿದ್ದಳು. ತೀರಾ ಶೀತದಿಂದ ಆಕೆ ಜೋರಾಗಿ ತನ್ನ ನ್ಯಾಪ್ಕಿನ್‌ ತೆಗೆದು ಮೂಗಿನಿಂದ ಸಿಂಬಳ ತೆಗೆಯುತ್ತಿರುವಾಗ ಹಿಂದಿನಿಂದ ಬೈಕಿನ ಮೂಲಕ ಬಂದ ಕಳ್ಳರು ಏಕಾಏಕಿ ಕೈಹಾಕಿದ್ದಾರೆ. ಬಂದಷ್ಟೇ ವೇಗದಲ್ಲೇ ಕಳ್ಳರು (Thieves) ಆ ಹುಡುಗಿಯ ಹ್ಯಾಂಡ್‌ ಕರ್ಚೀಫ್‌ ಅನ್ನು ಕದ್ದೊಯ್ದಿದ್ದಾರೆ.

ವೀಡಿಯೋ ತುಂಬಾ ತಮಾಷೆಯಾಗಿದ್ದು ಕಳ್ಳರು ನ್ಯಾಪ್ಕಿನ್ ಜತೆ ಗೊನ್ನೆಯ ಸಮೇತ ಪರಾರಿಯಾಗಿದ್ದಾರೆ. ನ್ಯಾಪ್ಕಿನ್ ಕಸಿದುಕೊಂಡ ನಂತರ ಹುಡುಗಿಯ ಪ್ರತಿಕ್ರಿಯೆ ನಿಜವಾಗಿಯೂ ತಮಾಷೆಯಾಗಿದೆ. ಈ ವಿಡಿಯೋ ಕೇವಲ 8 ಸೆಕೆಂಡ್‌ಗಳದ್ದಾಗಿದ್ದರೂ ವೈರಲ್ ಆಗುವ ಮೂಲಕ ಎಲ್ಲರಿಗೂ ನಗು ತರಿಸಿದೆ.

ಸೆಕ್ಯುರಿಟಿ ಫೂಟೇಜ್ ಎಂಬ ಹೆಸರಿನ ಟ್ವಿಟರ್ ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹುಡುಗಿಯ ಕೈಯಿಂದ ನ್ಯಾಪ್ಕಿನ್ ಕಿತ್ತುಕೊಂಡ ಕಳ್ಳರು ಬಹುಶ ಮೊಬೈಲ್ ಕಳ್ಳರು ಅನ್ನಿಸುತ್ತದೆ. ಬಹುಶಃ ಬೆಲೆಬಾಳುವ ಮೊಬೈಲ್ ದೋಚುತ್ತಿದ್ದಾರೆ ಎಂದು ಕೊಂಡಿದ್ದಾರೋ ಏನೋ? ಸಕತ್ ಆಗಿ ಬೇಸ್ತು ಬಿದ್ದ ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

 

ಇದನ್ನು ಓದಿ: Road Romeo: ಸ್ಕೂಟರ್ ನಲ್ಲೇ ಪಪ್ಪಿ-ಜಪ್ಪಿ ಮಾಡಿಕೊಂಡ ಜೋಡಿ! ವೀಡಿಯೋ ವೈರಲ್ 

Leave A Reply

Your email address will not be published.