Amitabh Bachchan: ಅಪರಿಚಿತನ ಬೈಕ್‌ ಏರಿ ಶೂಟಿಂಗ್‌ ಹೊರಟ ಅಮಿತಾಬ್‌ ಬಚ್ಚನ್‌, ಪೊಲೀಸರಿಗೆ ದೂರು ನೀಡಿದ ಸೋಷಿಯಲ್ಸ್ !!!

Bollywood actor Amitabh Bachchan gets ride on stranger's bike to reach work on time

Amitabh Bachchan: ಬಾಲಿವುಡ್‌ ಖ್ಯಾತ ನಟ ಅಮಿತಾಬ್‌ ಬಚ್ಚನ್‌ 80 ರ ವಯಸ್ಸಿನಲ್ಲೂ ಸದಾ ಹುರುಪಿನ ದಿನಾ ದುಡಿಯುವ ಯುವಕ. ಇಂದಿಗೂ ಜಾಹೀರಾತು, ಸಿನಿಮಾಗಳಲ್ಲಿ ಬಿಡುವೆಂಬುದೇ ಇಲ್ಲದಂತೆ ನಟಿಸುತ್ತಲೇ ಇದ್ದಾರೆ. ಹಿರಿಯ ಅಮಿತಾಬ್‌ ಬಚ್ಚನ್‌ (Amitabh Bachchan) ಹಿರಿಯ ನಟ ಅಮಿತಾಬ್‌ ಇತ್ತೀಚೆಗೆ ಅವರು ಶೂಟಿಂಗ್‌ ಹೋಗುವಾಗ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಅತ್ತ ಶೂಟಿಂಗ್‌ಗೆ ತಡವಾಗುತ್ತಿದೆ, ಈ ಕಡೆ ಟ್ರಾಫಿಕ್‌ ಕ್ಲಿಯರ್‌ ಆಗುತ್ತಲೇ ಇಲ್ಲ. ಹಾಗಾಗಿ ಕಾದು ಕಾದು ಸುಸ್ತಾದ ಬಿಗ್ ಬಿ ಅಮಿತಾಬ್‌ ಬಚ್ಚನ್‌ ಕಾರಿಳಿದು ಅಲ್ಲಿಯೇ ಸಾಗುತ್ತಿದ್ದ ಬೈಕ್‌ ಹತ್ತಿದ್ದಾರೆ. ಆ ಸವಾರನ ಹಿಂದೆ ಕೂತು ಹೋಗಬೇಕಾದ ಸ್ಥಳಕ್ಕೆ ತಲುಪಿದ್ದಾರೆ.

 

ಬಿಗ್ ಬಿ ಹಾಗೆ ಸಾಮಾನ್ಯರ ತರ ಬೈಕಿನಲ್ಲಿ ಹೊರಟರೆ ಪಬ್ಲಿಕ್ ಸುಮ್ಮನೆ ಬಿಡುತ್ತಾರೆ ಪಬ್ಲಿಕ್ ಸುಮ್ಮನೆ ಬಿಡ್ತಾರಾ? ಬೈಕ್‌ ಹಿಂಬದಿಯಲ್ಲಿ ಹೋಗುವಾಗ ಸ್ಥಳದಲ್ಲಿ ಇದ್ದವರು ಫೋಟೋ ಕ್ಲಿಕ್‌ ಮಾಡಿದ್ದಾರೆ. ಇದನ್ನು ಅಮಿತಾಬ್‌ ಬಚ್ಚನ್ ಅವರು ಸ್ವತಃ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ತಮಗೆ ಸಹಾಯ ಮಾಡಿದ ವ್ಯಕ್ತಿಗೆ ಧನ್ಯವಾದ ಅರ್ಪಿಸಿದ್ದಾರೆ.

”ನೀವು ಯಾರು ಎಂದು ನನಗೆ ಗೊತ್ತಿಲ್ಲ, ನನ್ನನ್ನು ಹೋಗಬೇಕಾದ ಸ್ಥಳಕ್ಕೆ ಸರಿಯಾಗಿ ತಲುಪಿಸಿದ್ದೀರಿ. ವೇಗವಾಗಿ ಮತ್ತು ಪರಿಹರಿಸಲಾಗದ ಟ್ರಾಫಿಕ್ ಜಾಮ್‌ನಿಂದ ನನ್ನನ್ನು ತಪ್ಪಿಸಿದ್ದೀರಿ. ಕ್ಯಾಪ್‌, ಶಾರ್ಟ್ಸ್‌ ಹಳದಿ ಟೀ ಶರ್ಟ್‌ ಧರಿಸಿದ್ದ ಓನರ್‌ಗೆ ಧನ್ಯವಾದಗಳು” ಎಂದು ಅಮಿತಾಬ್‌ ಬಚ್ಚನ್‌ ಬರೆದುಕೊಂಡಿದ್ದಾರೆ. ಆದರೆ ಈ ಪೋಸ್ಟ್ ಗೆ ಸಹಜವಾಗಿ ಹೊಗಳಿಕೆ ತೆಗಳಿಕೆ ಬಂದಿದೆ.

“ಅಭಿಮಾನಿಯೊಬ್ಬರ ಬೈಕ್‌ ಏರಿ ನೀವು ಸರಳತೆ ಮೆರೆದಿದ್ದೀರಿ. ನೀವು ಯಾವಾಗಲೂ ನಮಗೆ ಸ್ಫೂರ್ತಿ ” ಎಂದು ಹೃತ್ತಿಕ್ ರೋಷನ್ ಅಪ್ಪ ರಾಕೇಶ್‌ ರೋಷನ್‌ ಕಾಮೆಂಟ್‌ ಮಾಡಿದ್ದಾರೆ. ಆದರೆ ಕೆಲವರು ಮಾತ್ರ ” ಮುಂಬೈ ನಗರದಲ್ಲಿ ಹಿಂಬದಿ ಸವರಾರಿಗೂ ಹೆಲ್ಮೆಟ್ ಕಡ್ಡಾಯ. ನಿಮ್ಮ ಹೆಲ್ಮೆಟ್‌ ಎಲ್ಲಿ ?”ಎಂದು ಪ್ರಶ್ನಿಸುತ್ತಿದ್ದಾರೆ. ಇಬ್ಬರೂ ಹೆಲ್ಮೆಟ್‌ ಧರಿಸದೆ ನಿಯಮ ಉಲ್ಲಂಘಿಸಿದ್ದೀರಿ ಎಂದಿರುವುದಲ್ಲದೆ ಮುಂಬೈ ಪೊಲೀಸರಿಗೆ ಈ ಫೋಟೋವನ್ನು ಟ್ಯಾಗ್‌ ಮಾಡಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದರಿಂದ ಅಮಿತಾಬ್‌ ಬಚ್ಚನ್‌ ಪೇಚಿಗೆ ಸಿಲುಕಿದ್ದಾರೆ.

ಅಮಿತಾಬ್‌ ಬಚ್ಚನ್‌ ಅವರು ಗಣಪತ್, ಘೂಮರ್‌, ದಿ ಉಮೇಶ್‌ ಕ್ರಾನಿಕಲ್ಸ್‌, ಪ್ರಾಜೆಕ್ಟ್‌ ಕೆ, ಬಟರ್‌ ಫ್ಲೈ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಅಮಿತಾಬ್‌ ಬಚ್ಚನ್‌ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ಅನುಪಮ್‌ ಖೇರ್‌, ಬೊಮ್ಮನ್‌ ಇರಾನಿ ಜೊತೆ ನಟಿಸಿದ್ದ ಊಂಚೈ ಸಿನಿಮಾ ಕಳೆದ ವರ್ಷದ ಕೊನೆಯಲ್ಲಿ ತೆರೆ ಕಂಡಿತ್ತು. ಸದ್ಯಕ್ಕೆ 80 ರ ಇಳಿಯ ಹರೆಯದಲ್ಲೂ ಅಮಿತಾ ಬಚ್ಚನ್ ಬ್ಯುಸಿ ಆಗಿದ್ದಾರೆ. ಬಿಜಿ ಮಾತ್ರವಲ್ಲ ಸಮಯಪ್ರಜ್ಞೆ ಇವತ್ತಿಗೂ ಮರೆಯದ ದಿಗ್ಗಜ ನಟನಾಗಿ ಅವರು ಮಾದರಿ ಸಿನಿ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ:Marriage: ಅಬ್ಬಬ್ಬಾ..!! ಸಹೋದರಿಯರನ್ನು ವರಿಸಿದ ಯುವಕ; ಕಾರಣವೇನು? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ವಿಚಾರ

Leave A Reply

Your email address will not be published.