Karnataka Assembly elections 2023: ಈ ಸಲದ ಕರ್ನಾಟಕದ ಶಾಸಕರಲ್ಲಿ 14 ಮಂದಿ ವೃತ್ತಿಯಲ್ಲಿ ಡಾಕ್ಟರ್’ರು, ಯಾವ ಪಕ್ಷದಲ್ಲಿ, ಎಷ್ಟೆಷ್ಟು ವೈದ್ಯ ಶಾಸಕರು, ಎಲ್ಲೆಲ್ಲಿ ಇದ್ದಾರೆ ಗೊತ್ತೇ ?

Karnataka Assembly elections 2023 14 MLAs are doctors

Karnataka Assembly elections 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19 ಮತ್ತು ನಾಲ್ವರು ಇತರರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ, ಈ ಸಂಬಂಧ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ನೂತನವಾಗಿ ಆಯ್ಕೆಯಾಗಿರುವ 224 ಶಾಸಕರಲ್ಲಿ ಹದಿನಾಲ್ಕು ಶಾಸಕರುಗಳ ಕ್ವಾಲಿಫಿಕೇಷನ್ ಅಚ್ಚರಿ ಮೂಡಿಸಿದೆ.

ಹಿಂದೆಯೆಲ್ಲ ರಾಜಕಾರಣಿಗಳು ಅಂದರೆ ಹೆಬ್ಬೆಟ್ಟುಗಳು, ಓದು ಬಾರದವರು, ಆನ್ ಎಜುಕೇಟೆಡ್ ಎನ್ನುವ ಭಾವನೆ ಇತ್ತು. ಇದೀಗ ಗ್ರಾಜುಯೇಟ್ ಅಲ್ಲ, ಡಬಲ್ ಗ್ರಾಜುಯೇಟ್ ಕೂಡಾ.ಅಲ್ಲ, ಮುಂದುವರಿದು ಪ್ರೊಫೆಷನಲ್ ಓದು ಓದಿಕೊಂಡ ಜನರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಲ ಕರ್ನಾಟಕದ ವಿಧಾನಸಭೆಗೆ (Karnataka Assembly elections 2023) ಎಂಟ್ರಿ ಕೊಟ್ಟವರಲ್ಲಿ 14 ಜನ ತಮ್ಮ ಹೆಸರಿನ ಮುಂದೆ ಡಾ. ಎಂದು ಬರೆಸಿಕೊಂಡವರು !ಹೌದು, ಒಟ್ಟು 14 ಮಂದಿ ವೈದ್ಯರುಗಳು ಈ ಸಲ ಶಾಸಕರಾಗಿ ಜನಸೇವೆಗೆ ಇಳಿದಿದ್ದಾರೆ.

ಈ 14 ಮಂದಿಯಲ್ಲಿ ಹನ್ನೆರಡು ಶಾಸಕರು ಎಂಬಿಬಿಎಸ್ ಪದವೀಧರರು ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ. ಮಂಗಳೂರಿನ ಒಬ್ಬರು ದಂತ ವೈದ್ಯರು ಎರಡನೇ ಬಾರಿ ಎಂಟ್ರಿ ಕೊಡುತ್ತಿದ್ದಾರೆ (ಡಾ. ಭರತ್. ಶೆಟ್ಟಿ). ಮಗದೊಬ್ಬರು ಹೋಮಿಯೋಪಥಿ ವೈದ್ಯರಾಗಿದ್ದಾರೆ. ಹಾಗೆ ಒಟ್ಟು ಹದಿನಾಲ್ಕು ಡಾಕ್ಟರ್ ಕಮ್ ಶಾಸಕರು ಜನಸೇವೆಗೆ ಇಳಿದಿದ್ದಾರೆ.

1 ಜೇವರ್ಗಿ: ಡಾ. ಅಜಯ್ ಸಿಂಗ್- ಕಾಂಗ್ರೆಸ್
2 ಕುಣಿಗಲ್: ಡಾ.ಎಚ್.ಡಿ.ರಂಗನಾಥ್ – ಕಾಂಗ್ರೆಸ್
3 ಮಂಗಳೂರು ಉತ್ತರ: ಡಾ. ವೈ ಭರತ್ ಶೆಟ್ಟಿ – ಬಿಜೆಪಿ
4 ಮಡಿಕೇರಿ : ಡಾ.ಮಂಥರ್ ಗೌಡ- ಕಾಂಗ್ರೆಸ್
5 ಕೂಡ್ಲಿಗಿ: ಡಾ.ಎನ್.ಟಿ.ಶ್ರೀನಿವಾಸ್- ಕಾಂಗ್ರೆಸ್
6 ಸೇಡಂ: ಡಾ.ಶರಣಪ್ರಕಾಶ್ ಪಾಟೀಲ್ – ಕಾಂಗ್ರೆಸ್
7 ತಿ.ನರಸೀಪುರ: ಡಾ.ಎಚ್.ಸಿ.ಮಹದೇವಪ್ಪ- ಕಾಂಗ್ರೆಸ್
8 ಬೀದರ್ ದಕ್ಷಿಣ: ಡಾ.ಶೈಲೇಂದ್ರ ಬೆಲ್ದಾಳೆ- ಬಿಜೆಪಿ
9 ಶಿರಹಟ್ಟಿ: ಡಾ.ಚಂದ್ರು ಲಮಾಣಿ- ಬಿಜೆಪಿ
10 ಚಿಂತಾಮಣಿ: ಡಾ.ಎಂ.ಸಿ.ಸುಧಾಕರ್ – ಕಾಂಗ್ರೆಸ್
11 ಮಲ್ಲೇಶ್ವರ: ಡಾ.ಸಿ.ಎನ್.ಅಶ್ವಥ್ ನಾರಾಯಣ- ಬಿಜೆಪಿ
12 ರಾಯಚೂರು ನಗರ: ಡಾ.ಎಸ್.ಶಿವರಾಜ್ ಪಾಟೀಲ್- ಬಿಜೆಪಿ
13 ಚಿಂಚೋಳಿ ಮೀಸಲು : ಡಾ.ಅವಿನಾಶ್ ಜಾಧವ್- ಬಿಜೆಪಿ
14 ಹುಮ್ನಾಬಾದ್: ಡಾ.ಸಿದ್ದು ಪಾಟೀಲ- ಬಿಜೆಪಿ
ಈ ಎಲ್ಲ ಮೇಲಿನ 14 ಶಾಸಕರಲ್ಲಿ ತಲಾ 7 ಮಂದಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಆಗಿ ಶಾಸನ ಸಭೆಗೆ ಪ್ರವೇಶ ಪಡೆಯುತ್ತಿದ್ದಾರೆ. ಓದು ಬಾರದ ವರ್ಗ ಎಂದು ಕರೆಯಲಾಗುತ್ತಿದ್ದ ರಾಜಕಾರಣದಲ್ಲಿ ಈ ಬಾರಿ, 6.25 % ಜನರು ವೈದ್ಯರು ಇರುವುದು ಸೋಜಿಗದ ಸಂಗತಿ.

 

ಇದನ್ನು ಓದಿ: Vivek Agnihotri: ಮೆಟ್ರೋ ರೈಲಿನ ಪ್ರಯಾಣಿಕರ ಮೇಲೆ ಪೊಲೀಸ್​ ಕಣ್ಗಾವಲು; ವಿವೇಕ್​ ಅಗ್ನಿಹೋತ್ರಿ ಟ್ವೀಟ್‌ ವೈರಲ್‌

Leave A Reply

Your email address will not be published.