Vivek Agnihotri: ಮೆಟ್ರೋ ರೈಲಿನ ಪ್ರಯಾಣಿಕರ ಮೇಲೆ ಪೊಲೀಸ್​ ಕಣ್ಗಾವಲು; ವಿವೇಕ್​ ಅಗ್ನಿಹೋತ್ರಿ ಟ್ವೀಟ್‌ ವೈರಲ್‌

Vivek Agnihotri tweet about police surveillance of metro train

Vivek Agnihotri: ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ (Delhi Metro) ಪ್ರಯಾಣಿಕರಿಂದ ಆಕ್ಷೇಪಾರ್ಹ ವರ್ತನೆ ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ದೆಹಲಿ ಮೆಟ್ರೋದಲ್ಲಿ ಪೊಲೀಸರು ಗಸ್ತು ತಿರುಗುವ ನಿಯಮವೊಂದು ಬಂದಿದೆ. ಈ ಬಗ್ಗೆ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ (Vivek Agnihotri) ಅವರು ತಮ್ಮ ಅನಿಸಿಕೆಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಇದೀಗ ಅಗ್ನಿಹೋತ್ರಿ ಅವರ ಟ್ವೀಟ್‌ ಸಖತ್‌ ವೈರಲ್‌ ಆಗಿದೆ.

ʼಇದು ತುಂಬಾ ಮೂರ್ಖತನʼ ಎಂದು ದೆಹಲಿ ಮೆಟ್ರೋ ನಿಗಮದ ಈ ನಿರ್ಧಾರದ ಕುರಿತು ವಿವೇಕ್‌ ಅಗ್ನಿಹೋತ್ರಿ ತಮ್ಮ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಪ್ರಯಾಣಿಕರಿಂದ ಯಾವುದೇ ಆಕ್ಷೇಪಾರ್ಹ ನಡವಳಿಕೆ ಇರಬಾರದು ಎಂಬ ಉದ್ದೇಶದಿಂದ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಇತ್ತೀಚೆಗೆ ತೆಗೆದುಕೊಂಡ ನಿರ್ಧಾರ ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ಅದನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ ಅವರು ಈ ರೀತಿ ಪೋಸ್ಟ್ ಮಾಡಿದ್ದಾರೆ.

ದೆಹಲಿ ಮೆಟ್ರೋದಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರು ಹಸ್ತಮೈಥುನ ಮಾಡಿಕೊಂಡಂತಹ ಒಂದು ವೀಡಿಯೋ ಸಖತ್‌ ವೈರಲ್‌ ಆಗಿತ್ತು. ಅನಂತರ ಸಾರ್ವಜನಿಕರಿಂದ ಸಾರಿಗೆಯ ಶಿಷ್ಟಾಚಾರದ ಬಗ್ಗೆ ಹಲವರು ಪ್ರಶ್ನೆ ಮಾಡಿದ್ದರು. ಅನಂತರ ಪ್ರಯಾಣಿಕರ ಆಕ್ಷೇಪಾರ್ಹ ವರ್ತನೆಗೆ ಸಂಬಂಧಿಸಿದಂತೆ ದೆಹಲಿ ಮೆಟ್ರೋ ಈ ನಿರ್ಧಾರ ತೆಗೆದುಕೊಂಡಿದೆ.

ದೆಹಲಿ ಮೆಟ್ರೋ ಕೋಚ್‌ಗಳಲ್ಲಿ ಸಮವಸ್ತ್ರ ಮತ್ತು ನಾಗರಿಕ ಉಡುಪುಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗೂ ಆಕ್ಷೇಪಾರ್ಜ ನಡವಳಿಕೆಯನ್ನು ಗುರುತಿಸಲು ಮೆಟ್ರೋ ಕೋಚ್‌ಗಳಲ್ಲಿ ಹಾಕಿರುವಂತಹ ಸಿಸಿಟಿವಿ ಕ್ಯಾಮೆರಾಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

 

ಇದನ್ನು ಓದಿ:  DK Shivakumar & Siddaramaiah: ಕುರ್ಚಿಗಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹಗ್ಗ ಜಗ್ಗಾಟ: ಕೆಲವೇ ಗಂಟೆಗಳಲ್ಲಿ ದೆಹಲಿಯಿಂದ ಕರ್ನಾಟಕಕ್ಕೆ ಹೊಸ ಸಿಎಂ !

Leave A Reply

Your email address will not be published.