DK Shivakumar & Siddaramaiah: ಕುರ್ಚಿಗಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹಗ್ಗ ಜಗ್ಗಾಟ: ಕೆಲವೇ ಗಂಟೆಗಳಲ್ಲಿ ದೆಹಲಿಯಿಂದ ಕರ್ನಾಟಕಕ್ಕೆ ಹೊಸ ಸಿಎಂ !

DK Sivakumar and Siddaramaiah fight for CM seat

DK Shivakumar & Siddaramaiah: ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಎಲ್ಲ ಶಾಸಕರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಸೆ ಪಡಲಿ. ನಾವು ಈಗಾಗಲೇ ಒಂದು ಸಾಲಿನ ನಿರ್ಣಯ ಮಾಡಿದ್ದೇವೆ. ನನ್ನ ಜೊತೆಗೆ ಈಗ 135 ಶಾಸಕರಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ.

ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ಬೆಂಗಳೂರಿನ ಸದಾಶಿವ ನಗರದಲ್ಲಿ ತಮ್ಮ ಫಾರ್ಮ್‌ಹೌಸ್‌ಗೆ ಹೋಗುವಾಗ ಮಾಧ್ಯಮಗಳೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ‘ ಶಾಸಕರು ಎಲ್ಲರೂ ಆಸೆ ಪಡ್ಲಿ. ನಾವು ಒಂದ್ ಲೈನ್ ರೆಸಲ್ಯೂಷನ್ ಮಾಡಿದ್ದೇವೆ. ನನಗೆ ಯಾವ ಶಾಸಕರು ಏನ್ ಮಾಡಿದ್ದಾರೆ ಎಂದು ಗೊತ್ತಿಲ್ಲ. ನನ್ನ ಜೊತೆಗೆ 135 ಶಾಸಕರು ಇದ್ದಾರೆ ‘ ಎಂದು ಅವರು ಹೇಳಿದ್ದಾರೆ.

” ನಾನು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿ 135 ಶಾಸಕರನ್ನು ಸೋನಿಯಾ ಗಾಂಧಿಗೆ ಅರ್ಪಿಸಿದ್ದೇನೆ. ನನ್ನ ಹತ್ತಿರ ಈಗ ಯಾರು ಇಲ್ಲ, ಕಾಂಗ್ರೆಸ್ ಪಾರ್ಟಿಯಲ್ಲಿ 135 ಜನ ಇದಾರೆ. ನನ್ನ ಸೇರಿಸಿ 135 ಶಾಸಕರು ಕಾಂಗ್ರೆಸ್ ನಲ್ಲಿ ಇದ್ದಾರೆ. ಯಾವುದೇ ತೀರ್ಮಾನವೂ ಶೀಘ್ರ ಹೊರಗೆ ಬರಬಹುದು” ಎಂದು ಅವರು ಹೇಳಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ (DK Shivakumar & Siddaramaiah) ಅವರು ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಹುದ್ದೆ ತಮಗೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ನಿನ್ನೆ ತಡರಾತ್ರಿವರೆಗೆ ವೀಕ್ಷಕರು ಎಲ್ಲ ಕಾಂಗ್ರೆಸ್ ಶಾಸಕರ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದಾರೆ. ಎಐಸಿಸಿ ವೀಕ್ಷಕರು ಈ ವರದಿಯನ್ನು ದೆಹಲಿಗೆ ತಲುಪಿಸಲು ಹೋಗಿದ್ದಾರೆ. ನಿನ್ನೆ ಸಿದ್ದರಾಮಯ್ಯ ತಮ್ಮ ಆಪ್ತ ಬೆಂಬಲಿಗರ ಜತೆ ಗುಪ್ತ್ ಸಭೆ ನಡೆಸಿದ್ದಾರೆ. ನಂತರ ಇಂದು ಮಧ್ಯಾಹ್ನ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಶಾಸಕರು ಒಮ್ಮತದ ನಿರ್ಣಯಕ್ಕೆ ಬರದ ಹಿನ್ನೆಲೆಯಲ್ಲಿ “ಎಲ್ಲ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್‌ ಆಯ್ಕೆ ಮಾಡುವ ಮುಖ್ಯಮಂತ್ರಿಗೆ ನಮ್ಮ ಬೆಂಬಲವಿದೆ” ಎಂದು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿತ್ತು. ಕೇಂದ್ರದ ಎಐಸಿಸಿ ಮುಖಂಡ ಸುಶೀಲ್‌ ಕುಮಾರ್‌ ಸಿಂಧೆ, ರಾಜ್ಯ ಕಾಂಗ್ರಸ್‌ ಉಸ್ತುವಾರಿ ವೇಣುಗೋಪಾಲ್‌ ಹಾಗೂ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೇರಿ ಎಲ್ಲ ಶಾಸಕರ ಮೌಖಿಕ ಅಭಿಪ್ರಾಯ ಪಡೆಯುತ್ತಿತ್ತು. ಆದರೆ ಈ ಮೌಕಿಕ ಅಭಿಪ್ರಾಯ ಸಂಗ್ರಹಕ್ಕೆ ಹಲವಾರು ಶಾಸಕರು ಅಸಮಾಧಾನ ಹಿನ್ನೆಲೆಯಲ್ಲಿ ಲಿಖಿತ ಬರಹ ಬರೆದುಕೊಂಡು ಅಭಿಪ್ರಾಯ ಸಂಗ್ರಹಣೆ ಮಾಡಿಕೊಳ್ಳಲಾಗಿದೆ.

ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಳ್ಳುತ್ತಿರುವ ಹೈಕಮಾಂಡ್‌ ನಾಯಕರು, ಇಬ್ಬರ ಮುಂದೆಯೂ ಶಾಸಕರ ಮತದಾನದ ಚೀಟಿಯನ್ನು ತೆರೆದು ಮತಗಳ ಎಣಿಕೆ ಮಾಡಲಿದ್ದಾರೆ. ಶಾಸಕರು ಮತದಾನ ಮಾಡಿರುವ ಚೀಟಿಯಲ್ಲಿ, ‘ಹೈಕಮಾಂಡ್‌ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ‘ ಎಂದು ಬರೆದವರ ಸಂಖ್ಯೆ ಸುಮಾರು 50 ಕ್ಕೂ ಅಧಿಕವಾಗಿದೆ ಎಂದು ತಿಳಿದುಬಂದಿದೆ. ಉಳಿದಂತೆ ಸಿದ್ದು ಪರ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಇದೆ ಎನ್ನಲಾಗಿದೆ.
ಒಟ್ಟಾರೆ ರಾತ್ರಿಯ ಒಳಗೆ ಯಾರು ಸಿಎಂ ಆಗಲಿದ್ದಾರೆ ಎಂಬ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ಈಗ ದೆಹಲಿಯಲ್ಲಿ ಸೋನಿಯಾ ನಿವಾಸದಲ್ಲಿ ಸಭೆ ಶುರುವಾಗಿದೆ. ಕರ್ನಾಟಕಕ್ಕೆ ಹೋದ ಮುಖ್ಯಮಂತ್ರಿಯ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ.

 

ಇದನ್ನು ಓದಿ:  Relationship After Marriage: ವೈವಾಹಿಕ ಜೀವನದ ಈ ಗುಟ್ಟನ್ನು ಗೆಳೆಯರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು!

Leave A Reply

Your email address will not be published.