Congress: ಕಾಂಗ್ರೆಸ್ ಸರ್ಕಾರ ಬಂದಿದೆ, ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಬೆಸ್ಕಾಂ ಬಿಲ್ ಕಲೆಕ್ಟರ್ ಮುಂದೆ ಪಟ್ಟು ಹಿಡಿದು ಕೂತ ಗ್ರಾಮಸ್ಥರು !

Congress government has come, the electricity bill will not be paid

Congress government: ಕಾಂಗ್ರೆಸ್ ಸರ್ಕಾರ ಬಂದಿದೆ, ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಬೆಸ್ಕಾಂ ಬಿಲ್ ಕಲೆಕ್ಟರ್ ಮುಂದೆ ಪಟ್ಟು ಹಿಡಿದು ಕೂತ ಗ್ರಾಮಸ್ಥರು !

ಚಿತ್ರದುರ್ಗ: ಉಚಿತ ಕೊಡುಗೆಗಳಿಗೆ ಮತ್ತು ಭಾಗ್ಯಗಳಿಗೆ ಜನರು ಅದೆಷ್ಟು ಹಪಾಹಪಿ ಪಡುತ್ತಿದ್ದಾರೆ ಎನ್ನುವುದಕ್ಕೆ ಒಂದು ಲೇಟೆಸ್ಟ್ ಉದಾಹರಣೆ ಇಲ್ಲಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 5 ‘ ಗ್ಯಾರಂಟಿ ‘ ಗಳನ್ನು ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ಘೋಷಿಸಿತ್ತು. ಅವುಗಳಲ್ಲಿ ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೂಡ ಒಂದು. ಈಗ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ. ಹಾಗಾಗಿ, ‘ ಕಾಂಗ್ರೆಸ್ ಅಧಿಕಾರಕ್ಕೆ (Congress government) ಬರುತ್ತಿದೆ, ಹೀಗಾಗಿ ನಾವು ಕರೆಂಟ್ ಬಿಲ್ ಕಟ್ಟಲ್ಲ ‘ ಎಂದು ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮಸ್ಥರು, ‘ ಕಾಂಗ್ರೆಸ್ ಸರ್ಕಾರ ಬಂದಿದೆ. ಕರೆಂಟ್ ಬಿಲ್ ಸರ್ಕಾರವೇ ಕಟ್ಟುತ್ತೆ, ನಾವು ಇನ್ನು ಕಟ್ಟಬೇಕಿಲ್ಲ ‘ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಪಟ್ಟಾಗಿ ಕುಳಿತಿದ್ದಾರೆ.

‘ ನೋಡಿ ಸ್ವಾಮಿ, ಈಗ ತಾನೇ ಸರ್ಕಾರ ಬಂದಿದೆ. ಇನ್ನು ಮುಖ್ಯಮಂತ್ರಿ ಆಯ್ಕೆ ನಡೆದಿಲ್ಲ. ಸರ್ಕಾರದ ಆದೇಶ ಆಮೇಲೆ ಬರಬೇಕಷ್ಟೆ, ಅಲ್ಲಿಯವರೆಗೆ ಕಟ್ಟಬೇಕಾಗುತ್ತದೆ ‘ ಎಂದು ಬೆಸ್ಕಾಂ ಸಿಬ್ಬಂದಿ ಹೇಳುತ್ತಿದ್ದರೂ ಗ್ರಾಮಸ್ಥರು ಕೇಳುವ ಸ್ಥಿತಿಯಲ್ಲಿಲ್ಲ. ‘ ಇಲ್ಲ ನಾವು ಕಟ್ಟಲ್ಲ, ಬೇಕಾದ್ರೆ ಸರ್ಕಾರದವರನ್ನೇ ಕೇಳಿ ಹೋಗಿ ‘ ಎಂದು ಗ್ರಾಮಸ್ಥರು ಬಿಲ್ ಕಟ್ಟದೆ ಕುಳಿತಿರುವ ವಿಷಯ ಈಗ ಬಹಿರಂಗವಾಗಿದೆ.

 

 

ಇದನ್ನು ಓದಿ: Difference between EPF-VPF-PPF: EPF, VPF ಮತ್ತು PPF ನಡುವಿನ ವ್ಯತ್ಯಾಸವೇನು? 

Leave A Reply

Your email address will not be published.