CBSE Compartment Exam 2023: 12 ನೇ ತರಗತಿಯ CBSE ಪೂರಕ ಪರೀಕ್ಷೆ ದಿನಾಂಕ ಪ್ರಕಟ!

CBSE Compartment Exam 2023

CBSE Compartment Exam 2023: 10, 12 ನೇ ತರಗತಿಯ CBSE ಕಂಪಾರ್ಟ್‌ಮೆಂಟ್ ಪರೀಕ್ಷೆ 2023 (CBSE Compartment Exam 2023) ಅನ್ನು ಜುಲೈ 2023 ರಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಲಾಗಿದೆ. CBSE ಕಂಪಾರ್ಟ್‌ಮೆಂಟ್ ಪರೀಕ್ಷೆಯನ್ನು ಬರೆಯಲು ಮುಂದಾಗಿದ್ದೀರೋ ಅವರೆಲ್ಲರೂ ಸಹ ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳುವುದು ಉತ್ತಮ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಜುಲೈ 2023 ರಲ್ಲಿ CBSE ಕಂಪಾರ್ಟ್‌ಮೆಂಟ್ ಪರೀಕ್ಷೆ 2023 ಅನ್ನು ನಡೆಸಲಿದ್ದು, ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸುಗಳನ್ನು ಪಡೆದ ನಂತರ ಮಂಡಳಿಯು ಕಂಪಾರ್ಟ್‌ಮೆಂಟ್ ಪರೀಕ್ಷೆಯ ನಾಮಕರಣವನ್ನು ಪೂರಕ ಪರೀಕ್ಷೆಗೆ ಬದಲಾಯಿಸಿದೆ. ಅದಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಈ ವರ್ಷ, 10 ನೇ ತರಗತಿಯ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ 2 ವಿಷಯಗಳಲ್ಲಿ ತಮ್ಮನ್ನು ಸುಧಾರಿಸಿ ಕೊಳ್ಳಲು ಅವಕಾಶ ನೀಡಲಾಗುತ್ತದೆ. 12 ನೇ ತರಗತಿಯ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ 1 ವಿಷಯದಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು​ ಅನುಮತಿಸಲಾಗುವುದು. ಪೂರಕ ಪರೀಕ್ಷೆಯು ಮುಖ್ಯ ಪರೀಕ್ಷೆ 2023 ರ ಪಠ್ಯಕ್ರಮವನ್ನೇ ಆಧರಿಸಿ ಇರುತ್ತದೆ.

ಸದ್ಯ CBSE 10 ನೇ ತರಗತಿ ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಮೇ 12, 2023 ರಂದು ಪ್ರಕಟಿಸಲಾಯಿತು. 10 ನೇ ತರಗತಿಯ ಉತ್ತೀರ್ಣ ಶೇಕಡಾ 93.12 ಮತ್ತು 12 ನೇ ತರಗತಿಗೆ ಇದು 87.33 ಶೇಕಡಾ. 10 ಮತ್ತು 12ನೇ ತರಗತಿ ಎರಡರಲ್ಲೂ ಬಾಲಕರಿಗಿಂತ ಬಾಲಕಿಯರು ಉತ್ತಮ ಸಾಧನೆ ಮಾಡಿದ್ದಾರೆ. 10 ನೇ ತರಗತಿಗೆ ಒಟ್ಟು ಶೇಕಡಾ 94.25 ರಷ್ಟು ಹುಡುಗಿಯರು ಮತ್ತು ಹುಡುಗರು ಶೇಕಡಾ 92.72 ರಷ್ಟು ಉತ್ತೀರ್ಣರಾಗಿದ್ದಾರೆ. 12 ನೇ ತರಗತಿಯಲ್ಲಿ ಒಟ್ಟು ಶೇಕಡಾ 90.68 ರಷ್ಟು ಹುಡುಗಿಯರು ಉತ್ತೀರ್ಣರಾಗಿದ್ದಾರೆ. ಇನ್ನು ಬಾಲಕರ ಶೇಕಡಾ 84.67 ಕ್ಕಿಂತ ಹೆಚ್ಚು ಜನ ಉತ್ತೀರ್ಣರಾಗಿದ್ದಾರೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಜುಲೈ 2023 ರಲ್ಲಿ CBSE ಕಂಪಾರ್ಟ್‌ಮೆಂಟ್ ಪರೀಕ್ಷೆ 2023 ಅನ್ನು ನಡೆಸುತ್ತದೆ. ಡೇಟ್‌ಶೀಟ್ ಅನ್ನು ಮಂಡಳಿಯು ಬಿಡುಗಡೆ ಮಾಡುತ್ತದೆ. cbse.gov.in ನಲ್ಲಿ CBSEಯ ಅಧಿಕೃತ ಸೈಟ್‌ನಲ್ಲಿ ಅಭ್ಯರ್ಥಿಗಳಿಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಿರುತ್ತದೆ.

ಇದನ್ನೂ ಓದಿ:Election Result: ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ನುಡಿದಿದ್ದ ಭವಿಷ್ಯವಾಣಿ! ʼಅಂಬಲಿ ಹಳಸಿತು ಕಂಬಲಿ ಬಿಸಿತಲೆ ಪರಾಕ್‌ʼ ನಿಜವಾಯಿತೇ ಭವಿಷ್ಯ!!!

Leave A Reply

Your email address will not be published.