Gas cylinder: ವಾಟ್ಸಾಪ್‌ನೊಂದಿಗೆ ಗ್ಯಾಸ್ ಸಿಲಿಂಡರ್ ಬುಕ್ ಜಸ್ಟ್ ಒಂದು ಚಿಟಿಕೆಯಲ್ಲಿ ಮಾಡಿ! ಹೇಗೆ? ಇಲ್ಲಿದೆ ವಿವರ
How to book gas cylinder in Whatsapp
Book Gas cylinder : ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಎಲ್ಲಾ ಕೆಲಸಗಳನ್ನು ಫೋನ್ ಮೂಲಕ ಮಾಡುತ್ತಾರೆ. ಆನ್‌ಲೈನ್ ಶಾಪಿಂಗ್ ಇರಲಿ, ಪಾವತಿ ವಿಧಾನ, ಮೊಬೈಲ್ ಇಂಟರ್‌ನೆಟ್‌ಗೆ ಸಂಬಂಧಿಸಿದ ವಿಷಯದ ಕೆಲಸವಾಗಲಿ,ಯಾವುದೇ ಇರಲಿ, ಎಲ್ಲದಕ್ಕೂ ಮೊಬೈಲ್ ಎಂಬ ಸಾಧನದಿಂದ ಆಗುತ್ತದೆ. ಅಂದಹಾಗೆ ಈ ಇಂಟರ್‌ನೆಟ್ ಮತ್ತು ಮೊಬೈಲ್ ನಮ್ಮ ಸಾಕಷ್ಟು ಸಮಯವನ್ನು ಉಳಿಸಿದೆ ಎಂದರೆ ತಪ್ಪಿಲ್ಲ. ನಾವು ಯಾವುದೇ ಕೆಲಸಕ್ಕೆ ಹೊರಗೆ ಹೋಗದಂತೆ ಮಾಡಿ ಬಿಟ್ಟಿದೆ ಮೊಬೈಲ್.
ಈಗ ನಿರತ ಅಥವಾ ಉದ್ಯೋಗಸ್ಥ ಮಹಿಳೆಯರ ದೊಡ್ಡ ಸಮಸ್ಯೆಯೊಂದು ಪರಿಹಾರವಾಗಿದೆ. ಅಂದರೆ, ಈಗ ಅವರು ಯಾರೊಂದಿಗೂ ಮಾತನಾಡಬೇಕಾಗಿಲ್ಲ ಅಥವಾ ಗ್ಯಾಸ್ ಸಿಲಿಂಡರ್ಗಳನ್ನು ಬುಕ್ ಮಾಡಲು ಪ್ರತ್ಯೇಕವಾಗಿ ಸಮಯ ತೆಗೆದುಕೊಳ್ಳಬೇಕಾಗಿಲ್ಲ. ಈಗ ಗ್ಯಾಸ್ ಸಿಲಿಂಡರ್ ಅನ್ನು ನಿಮ್ಮ ಮನೆಗೆ ವಾಟ್ಸಾಪ್ ಸಂದೇಶದೊಂದಿಗೆ ತಲುಪಿಸಲಾಗುತ್ತದೆ. ನಿಮ್ಮ ಕೆಲಸವನ್ನು ನೀವು ಹೇಗೆ ಸುಲಭಗೊಳಿಸಬಹುದು ಎಂಬುದನ್ನು ಇಂದು ನಾವು ಇಲ್ಲಿ ಹೇಳುತ್ತೇವೆ.
ಗ್ರಾಹಕರ ಸಮಯವನ್ನು ಉಳಿಸಲು, ಗ್ಯಾಸ್ ಏಜೆನ್ಸಿಗಳು ಈಗ ವಾಟ್ಸಾಪ್‌ನಲ್ಲಿಯೂ ತಮ್ಮ ಸೇವೆಗಳನ್ನು ಪ್ರಾರಂಭಿಸಿವೆ. ಅಂದರೆ, ಈಗ ನೀವು WhatsApp ನಲ್ಲಿ ಗ್ಯಾಸ್ ಬುಕ್ಕಿಂಗ್ (Book Gas cylinder)!ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಸಂಪೂರ್ಣ ಪ್ರಕ್ರಿಯೆಯನ್ನು ನಾವು ಇಲ್ಲಿ ಹೇಳುತ್ತೇವೆ. ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ನಿಮ್ಮ ಸಮಯವನ್ನು ನೀವು ಬಹಳಷ್ಟು ಉಳಿಸಬಹುದು.
ಭಾರತ್ ಗ್ಯಾಸ್ ಬುಕಿಂಗ್‌ಗಾಗಿ ಈ ಪ್ರಕ್ರಿಯೆ;
ಮೊದಲನೆಯದು 1800224344 ಸಂಖ್ಯೆಯನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇವ್ ಮಾಡಿಡಿ.
ಇದರ ನಂತರ ಈ ಸಂಖ್ಯೆ WhatsAppನಲ್ಲಿ ನಿಮಗೆ ಚಾಟ್‌ನಲ್ಲಿ ತೋರಿಸಲ್ಪಡುತ್ತದೆ.
ಚಾಟ್ ತೆರೆಯಿರಿ ಮತ್ತು ಹಾಯ್ ಸಂದೇಶವನ್ನು ಟೈಪ್ ಮಾಡಿ ಮತ್ತು ಅದನ್ನು ಕಳುಹಿಸಿ.
ಈ ಸಂದೇಶಕ್ಕೆ ಪ್ರತ್ಯುತ್ತರವಾಗಿ, ನೀವು ಭಾಷೆಯನ್ನು ಆಯ್ಕೆ ಮಾಡಲು ಕೇಳುವ ಸಂದೇಶ ಬರುತ್ತದೆ.
ಇದರಲ್ಲಿ ಪ್ರತಿ ಭಾಷೆಯ ಮುಂದೆ ಒಂದು ಸಂಖ್ಯೆ ಇರುತ್ತದೆ.
ಇದನ್ನು ಆಯ್ಕೆ ಮಾಡಿದ ನಂತರ, ನೀವು ಇನ್ನೊಂದು ಸಂದೇಶವನ್ನು ಪಡೆಯುತ್ತೀರಿ.
ಅದರಲ್ಲಿ ನಿಮ್ಮ ಅಗತ್ಯವನ್ನು ಹಲವು ಆಯ್ಕೆಗಳಿಂದ ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.
ಇಲ್ಲಿಂದ ನೀವು ಗ್ಯಾಸ್ ಬುಕ್ಕಿಂಗ್ ಆಯ್ಕೆಯನ್ನು ಆರಿಸುವ ಮೂಲಕ ಗ್ಯಾಸ್ ಬುಕ್ ಮಾಡಬಹುದು.