

Rahul Gandhi: ಈ ಹಿಂದೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಮ್’ನಲ್ಲಿ ಆರ್‌ಸಿಬಿ (RCB) ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವು ಸಾಧಿಸಿದ ಸಂದರ್ಭದಲ್ಲಿ ಗೌತಮ್ ಗಂಭೀರ್,(Gowtham Gambir) ಆರ್‌ಸಿಬಿ ಆರ್‌ಸಿಬಿ ಎಂದು ಕೂಗುತ್ತಿದ್ದ ಅಭಿಮಾನಿಗಳಿಗೆ ಶಟ್‌ಅಪ್ ಎನ್ನುವ ರೀತಿಯಲ್ಲಿ ಸನ್ನೆ ಮಾಡಿದ್ದರು. ಈ ವಿಚಾರ ಸಾಕಷ್ಟು ವೈರಲ್ ಕೂಡ ಆಗಿದ್ದು, ನಂತರದಲ್ಲಿ ಗೌತಮ್ ಗಂಭೀರ್ ವಿರುದ್ಧ ವಿರಾಟ್ ಕೊಹ್ಲಿ ಲಕ್ನೋದಲ್ಲಿ ಸೇಡು ತೀರಿಸಿಕೊಂಡಿದ್ದರು.
ಈ ಹಳೇ ವಿಚಾರ ಈಗ ಯಾಕಪ್ಪಾ ಅಂದ್ರೆ, ಇದೀಗ ಗಂಭೀರ್ ರೀತಿ ಶಟ್ ಅಪ್ ಎಂದು ರಾಹುಲ್ ಗಾಂಧಿ (Rahul Gandhi) ಸನ್ನೆ ಮಾಡಿದ್ದು, ಸದ್ಯ ರಾಹುಲ್ ಗಾಂಧಿ ಫೋಟೋ ಸಖತ್ ವೈರಲ್ ಆಗಿದೆ. ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾನಗಳಿಸಿದ್ದು, ಈ ಹಿನ್ನೆಲೆ ರಾಹುಲ್ ಗಾಂಧಿ ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ ಕೂಗುತ್ತಿದ್ದ ತಮ್ಮ ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಇದೇ ರೀತಿಯಲ್ಲಿ ಶಟ್‌ಅಪ್ ಎಂದು ಸನ್ನೆ ಮಾಡಿದ್ದಾರೆ.
ಇದೀಗ ರಾಹುಲ್’ಗಾಂಧಿ ಫೋಟೋದ ಜೊತೆಗೆ ಗಂಭೀರ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನೆಟ್ಟಿಗರು ವಿಭಿನ್ನ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು” ವಿರಾಟ್ ಕೊಹ್ಲಿ (Virat Kohli) ತೆಗೆದುಕೊಳ್ಳಬೇಕಾಗಿದ್ದ ರಿವೇಂಜ್ ಅನ್ನು ಈಗ ರಾಹುಲ್ ಗಾಂಧಿ ಕೂಡ ತೆಗೆದುಕೊಂಡಿದ್ದಾರೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:Director Kaviraj Post: ಬಿಜೆಪಿ ಸೋಲಿಗೆ ನಿರ್ದೇಶಕ, ಚಿತ್ರಸಾಹಿತಿ ಕವಿರಾಜ್ ಪೋಸ್ಟ್ ; ಸಖತ್ ವೈರಲ್ ಆಯ್ತು!!













