ಪುತ್ತೂರಿನಲ್ಲಿ ಮೊದಲ ಬಾರಿ ಬಿಜೆಪಿಯ ಆಶಾ ಗೌಡ ಮುನ್ನಡೆ
ಎರಡನೇ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದು ಕಾಂಗ್ರೆಸ್ ಸರಳ ಬಹುಮತದತ್ತ ಸಾಗುತ್ತಿದೆ. ಒಟ್ಟು 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಎರಡನೆಯ ಸುತ್ತು ಬಹುತೇಕ ಮುಗಿದಿದೆ.
ಬಿಜೆಪಿ: 83 ಮುನ್ನಡೆ
ಕಾಂಗ್ರೆಸ್: 114 ಮುನ್ನಡೆ
ಜೆಡಿಎಸ್: 25 ಮುನ್ನಡೆ
ಇತರ: 4 ಮುನ್ನಡೆ
ಈ ಮೂಲಕ ಕಾಂಗ್ರೆಸ್ ಸರಳ ಬಹುಮತದ 113 ಸಂಖ್ಯೆಯನ್ನು ದಾಟಿ ಮುನ್ನುಗ್ಗಿದೆ. ಕಾಂಗ್ರೇಸ್ ನಾಗಾಲೋಟ ಮುಂದುವರೆಸಿದೆ. ಒಮ್ಮೆ121 ಸ್ಥಾನಗಳಲ್ಲಿ ಮುನ್ನಡೆ ಇದ್ದ ಕಾಂಗ್ರೆಸ್ ಈಗ ಸಣ್ಣ ಹಿನ್ನಡೆ ಬಂದು ಈಗ 114 ಸ್ಥಾನಗಳಲ್ಲಿ ಮುನ್ನಡೆಯಎಲ್ಲಿದೆ.
ಹೊಸ ಪಕ್ಷ ಕಟ್ಟಿದ ಬಳ್ಳಾರಿಯ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಮತ್ತು ಪಕ್ಕದಲ್ಲಿ ಆತನ ಪತ್ನಿ ಮುನ್ನಡೆಯಲ್ಲಿದ್ದಾರೆ. ಗಣಿಧಣಿ ಪತ್ನಿ ಎದುರು ಜನಾರ್ಧನ್ ರೆಡ್ಡಿಯ ತಮ್ಮ ಸೋಮಶೇಖರ್ ರೆಡ್ಡಿ ಹಿನ್ನಡೆ ಸಾಧಿಸಿದ್ದಾರೆ. ಬಿಟಿಎಂ ಲೇಔಟ್ ನಲ್ಲಿ ಕಾಂಗ್ರೆಸ್ ಮುನ್ನಡೆ. ಗೋವಿಂದರಾಜ ನಗರದಲ್ಲಿ ಕಾಂಗ್ರೆಸ್ ಮುನ್ನಡೆ ಇದೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆಗೆ ಹಿನ್ನೆಡೆ.
ಧಾರವಾಡ ಹುಬ್ಬಲ್ಲಿ ಸೆಂಟ್ರಲ್ ನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಹೋದ ಜಗದೀಶ್ ಶೆಟ್ಟರ್ ಅವರಿಗೆ ಹಿನ್ನಡೆಯಾಗಿದೆ. ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಹಿನ್ನಡೆಯಾಗಿದೆ. ಶಿಕಾರಿಪುರದಲ್ಲಿ ವಿಜಯೇಂದ್ರ ಮುನ್ನಡೆ ಸಾಧಿಸಿದ್ದಾರೆ.
ಚಿಕ್ಕನಾಯಕನ ಹಳ್ಳಿಯಲ್ಲಿ ಮಾಜಿ ಸಚಿವ ಮಾದು ಸ್ವಾಮಿ. ಮುನ್ನಡೆ. ಚಿಕ್ಕಬಳ್ಳಾಪುರದಲ್ಲಿ ಡಿ ಸುಧಾಕರ್ ಹಿನ್ನಡೆ. ಗಾಂಧೀ ನಗರದಲ್ಲಿ ದಿನೇಶ್ ಗುಂಡೂರಾವ್ ಹಿನ್ನಡೆ. ಮುಧೋಳದ ಬಿಜೆಪಿ ಅಭ್ಯರ್ಥಿ ಅರವಿಂದ ಕಾರಜೋಳ ಹಿನ್ನಡೆ.
ಆಶ್ಚರ್ಯ ಬೆಳವಣಿಗೆಯಲ್ಲಿ ನಾಗಮಂಗಲದಲ್ಲಿ ಚೆಲುವರಾಯಸ್ವಾಮಿ ಹಿನ್ನಡೆ ಅನುಭವಿಸಿದ್ದಾರೆ ಅದೇ ರೀತಿ ಕೆ ಆರ್ ಪೇಟೆಯಲ್ಲಿ ನಾರಾಯಣಗೌಡ ಹಿನ್ನಡೆ ಕಂಡುಕೊಂಡಿದ್ದಾರೆ. ಅಥಣಿಯಲ್ಲಿ ಲಕ್ಷ್ಮಣ ಸವದಿ ಮುನ್ನಡೆ ಸಾಗಿಸಿದ್ದಾರೆ.
ಗೋಕಾಕ್ ನಲ್ಲಿ ಅಚ್ಚರಿಯಾಗಿ ಸತತ ನಾಲ್ಕನೆಯ ಸುತ್ತಿನಲ್ಲಿ ಕೂಡಾ ಹಿನ್ನಡೆ
ಇದೀಗ ಬಂದ ಸುದ್ದಿ ಪುತ್ತೂರಿನಲ್ಲಿ ಅಶೋಕ್ ರೈ ಮತ್ತು ಅರುಣ್ ಪುತ್ತಿಲ ಅವರಿಗೆ ಹಿನ್ನಡೆ. ಬಿಜೆಪಿ ಆಶಾ ತಿಮ್ಮಪ್ಪ ಗೌಡ ಮೊದಲ ಬಾರಿ ಮುನ್ನಡೆ ಸಾಧಿಸಿದ್ದಾರೆ ಪುತ್ತೂರಿನಲ್ಲಿ.
ಹೆಚ್ ಡಿ ಕುಮಾರಸ್ವಾಮಿ ಮುನ್ನಡೆ, ಎಂಟಿ ನಾಗರಾಜ್ ಹೊಸಕೋಟೆಯಲ್ಲಿ ಹಿನ್ನಡೆ, ಬೆಂಗಳೂರಿನ ಆರ್ ಆರ್ ನಗರದಲ್ಲಿ ಮುನಿರತ್ನ ಮುನ್ನಡೆ. ಪ್ರತಿಷ್ಟಿತ ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ ಎದುರು ಮಹೇಶ್ ತೆಂಗಿನ ಕಾಯಿ ಅವರಿಗೆ 4,000 ಮತಗಳ ಮುನ್ನಡೆ.
ಎರಡನೇ ಸುತ್ತಿನ ಅಂತ್ಯ ಆಗಿದೆ. ಮೂರರಿಂದ 6 ನೆ ಸುತ್ತು ನಡೆಯುತ್ತಿದೆ.
ಬೀಳಗಿಯಲ್ಲಿ 4ನೆ ಸುತ್ತಿನಲ್ಲೂ ಮುರುಗೇಶ್ ನಿರಾಣಿ ಮುನ್ನಡೆ. ಸುಳ್ಯದಲ್ಲಿ ಭಾಗೀರಥಿ ಮೂರುಲ್ಯ ಮುನ್ನಡೆ. ಕಾರವಾರದಲ್ಲಿ ರೂಪಾಲಿ ಮುನ್ನಡೆ, ಹಿರೇಕೆರೂರಿನಲ್ಲಿ ಬಿಸಿ ಪಾಟೀಲ್ ಮತ್ತೆ ಹಿನ್ನಡೆ ಹೊಳಲ್ಕೆರೆಯಲ್ಲಿ ಎಸ್ ಆಂಜನೇಯ ಹಿನ್ನಡೆ, ಶೃಂಗೇರಿಯಲ್ಲಿ ಬಿಜೆಪಿಗೆ ಹಿನ್ನೆಡೆ, ಬೆಂಗಳೂರಿನಲ್ಲಿ ಯಶವಂತಪುರ ಕ್ಷೇತ್ರದಲ್ಲಿ ನಿರಂತರ ಐದನೇ ಸುತ್ತಿನಲ್ಲೂ ಎಸ್ ಟಿ ಸೋಮಶೇಖರ್ ಅವರಿಗೆ ಹಿನ್ನಡೆ ಆಗಿದೆ. ಶಾಂತಿನಗರದಲ್ಲಿ ಕಾಂಗ್ರೆಸ್ ನ ಹ್ಯಾರಿಸ್ ಅವರಿಗೆ ಹಿನ್ನಡೆಯಾಗಿದೆ.