Liquor sale: ಗಮನಿಸಿ ಎಣ್ಣೆ ಪ್ರಿಯರೇ, ಚುನಾವಣಾ ಮತ ಎಣಿಕೆ ಪ್ರಯುಕ್ತ ಮದ್ಯದಂಗಡಿ ಬಂದ್!!!

Liquor sale ban two days in Karnataka

Liquor sale: ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಇನ್ನೇನು ನಾಳೆ ಫಲಿತಾಂಶ ಹೊರಬೀಳಲಿದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ಎರಡು ದಿನ ಮದ್ಯದಂಗಡಿಗಳು (Liquor sale) ಮುಚ್ಚಿವೆ.

ಪ್ರತಿದಿನ 60-70ಕೋಟಿ ಆದಾಯ ತರುತ್ತಿದ್ದ ಮದ್ಯ ಮಾರಾಟದಿಂದ ಬರುತ್ತಿದ್ದು, ಆದರೆ ಎರಡು ದಿನ ಮದ್ಯದಂಗಡಿಗಳು ಮುಚ್ಚಿರುವುದರಿಂದ ಸರಕಾರಕ್ಕೆ ಸುಮಾರು ಅಂದಾಜು 150 ಕೋಟಿ ನಷ್ಟವಾಗಿದೆ ಎನ್ನಬಹುದು.

ಮೇ.8 ರ ಸಂಜೆಯಿಂದ ಮದ್ಯ ಮಾರಾಟ ಬಂದ್ ಆಗಿದ್ದು, ಮೇ. 11 ರ ಬೆಳಗ್ಗೆ 11 ಗಂಟೆಯವರೆಗೆ ಚುನಾವಣಾ ಆಯೋಗ ಮದ್ಯ ಮಾರಾಟ ಮಾಡುವಂತೆ ಆದೇಶ ನೀಡಿತ್ತು. ಹೀಗಾಗಿ ರಾಜ್ಯಾದ್ಯಂತ ಮದ್ಯ ಮಾರಾಟ ಇರಲಿಲ್ಲ.

ಇನ್ನು ಶನಿವಾರ ಮತ ಎಣಿಕೆ ನಡೆಯಲಿರುವುದರಿಂದ ಮೇ. 13 ರ ಬೆಳಗ್ಗೆ 6 ಗಂಟೆಯಿಂದ 14 ರ ಮುಂಜಾನೆ 6 ಗಂಟೆಯವರೆಗೆ ಮದ್ಯದಂಗಡಿಗಳು ಬಂದ್ ಇರಲಿದೆ.

ಇದನ್ನೂ ಓದಿ:ಪತ್ನಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ನವವಿವಾಹಿತ ವ್ಯಕ್ತಿಗೆ ಸಿಡಿಲು ಬಡಿದು ಸಾವು!

Leave A Reply

Your email address will not be published.