Bengaluru: ಸರ್ಕಾರ ರಜೆ ಘೋಷಿಸಿದರೂ ಬೆಂಗಳೂರು ಜನ ಮತದಾನ ಮಾಡಿಲ್ಲ: ಶೋಭಾ ಕರಂದ್ಲಾಜೆ

Shobha Karandlaje said that the people of Bangalore did not vote

Shobha Karandlaje: ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಪ್ರಕ್ರಿಯೆ ಮುಕ್ತಾಯ ಆಗಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, (Shobha Karandlaje) ಬೆಂಗಳೂರಿನಲ್ಲಿ ಶೇ. 53 ರಷ್ಟು ಮಾತ್ರ ಮತದಾನವಾಗಿರುವುದು ಬೇಸರದ ಸಂಗತಿ. ಮುಖ್ಯವಾಗಿ ಚುನಾವಣೆ ಪ್ರಯುಕ್ತ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದ್ದರೂ ಸಹ ಜನ ಮತ ಹಾಕಿಲ್ಲ. ಮುಂದೆ ಆದರೂ ಬೆಂಗಳೂರಿನ (Bengaluru) ಜನ‌ ಮತ ಹಾಕಲು ಬರಲಿ ಎಂದಿದ್ದಾರೆ.

ಅದೇ ಸಂದರ್ಭದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ಅವರು, ನಮ್ಮ ವರದಿ ಪ್ರಕಾರ ಬಿಜೆಪಿಗೆ 120-125 ಸ್ಥಾನ ಬರುತ್ತದೆ ಎಂದು ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತಿಬಾರಿಯಂತೆ ಈ ಬಾರಿಯೂ ರಾಜಧಾನಿಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿದೆ. ಸ್ವಂತ ಬಲದಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ . ಈಗಲೂ ನನಗೆ ಅದೇ ವಿಶ್ವಾಸವಿದೆ. ಬಿ.ಎಸ್​.ಯಡಿಯೂರಪ್ಪನವರ ವರದಿ ಯಾವತ್ತೂ ಸುಳ್ಳಾಗಿಲ್ಲ ಎಂದರು.

 

ಇದನ್ನು ಓದಿ: Actress Niharika Konidela: ‘ರೋಷನ್ ಬೆಡ್ ಮೇಲೆ, ಭಾರ್ಗವ್ ಮನಸ್ಸಿನಲ್ಲಿ’ ; ನಿಹಾರಿಕಾ ಕೊನಿಡೆಲಾ ಮಾತಿಗೆ ನೆಟ್ಟಿಗರು ಕಿಡಿ!! 

Leave A Reply

Your email address will not be published.