Free Flight Tickets: ನಿಮಗಿದು ಗೊತ್ತೇ? ವಿಮಾನಯಾನಕ್ಕೆ ಉಚಿತ ಟಿಕೆಟ್‌ ಪಡೆಯುವುದು ಹೇಗೆ?

How to get free flight tickets

Free Flight Tickets: ಬೇಸಿಗೆ ವೇಳೆ ಜನರು ತಂಪಾಗಿರುವ ಪ್ರದೇಶಕ್ಕೆ ಪ್ರವಾಸ ಮಾಡುವುದು ಸಾಮಾನ್ಯವಾಗಿದೆ. ಹೆಚ್ಚಾಗಿ ಸಮ್ಮರ್ ಸೀಸನ್‌ನಲ್ಲಿ ದೂರದ ಪ್ರಯಾಣ ಮಾಡುತ್ತಾರೆ. ಈ ಬೇಸಿಗೆ ಸೀಸನ್‌ನಲ್ಲಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಳವಾಗುತ್ತದೆ. ಅದಲ್ಲದೆ ಬಸ್ಸು, ರೈಲು, ವಿಮಾನಗಳ ಟಿಕೆಟ್‌ಗೆ ಬೇಡಿಕೆಯು ಕೂಡಾ ಹೆಚ್ಚಾಗುತ್ತದೆ.
ಬೇಡಿಕೆ ಹೆಚ್ಚಾದಂತೆ ವಿಮಾನ ಟಿಕೆಟ್ ದರವು ಕೂಡಾ ಹೆಚ್ಚಳವಾಗಿದೆ.

ಸದ್ಯ ಬಜೆಟ್ ಕಾರಣದಿಂದಾಗಿ ವಿಮಾನದಲ್ಲಿ ಪ್ರಯಾಣ ಮಾಡುವುದನ್ನೇ ಕ್ಯಾನ್ಸಲ್ ಮಾಡಿದ್ದರೆ ಮೊದಲು ನೀವು ಈ ಸುದ್ದಿಯನ್ನು ತಿಳಿಯಿರಿ. ಹೌದು, ನೀವು ಏರ್‌ಲೈನ್ ರಿವಾರ್ಡ್ ಪಾಯಿಂಟ್ ಮೂಲಕ ಉಚಿತ ವಿಮಾನ ಟಿಕೆಟ್ ಅನ್ನು (Free Flight Tickets) ಪಡೆಯಬಹುದಾಗಿದೆ.

ನೀವು ವಿಮಾನದಲ್ಲಿ ಪ್ರಯಾಣ ಮಾಡುವಾಗ ನಿಮಗೆ ರಿವಾರ್ಡ್ ಪಾಯಿಂಟ್ ಲಭ್ಯವಾಗುತ್ತದೆ. ಈ ರಿವಾರ್ಡ್ ಪಾಯಿಂಟ್ಸ್ ಅನ್ನು ನೀವು ರಿಡೀಮ್ ಮಾಡಿಕೊಂಡು, ಇನ್ನೊಂದು ಬಾರಿ ವಿಮಾನ ಟಿಕೆಟ್ ಬುಕ್ ಮಾಡುವಾಗ ಬಳಕೆ ಮಾಡಬಹುದಾಗಿದೆ.

ನೀವು ರಿವಾರ್ಡ್ ಪಾಯಿಂಟ್ಸ್ /ಏರ್‌ ಮೈಲ್ಸ್‌ಗಳನ್ನು ಪಡೆಯಲು ಒಟ್ಟಾಗಿ ಮೂರು ವಿಧಾನಗಳಿದೆ. ಮೊದಲನೆಯದಾಗಿ ನೀವು ಏರ್‌ಲೈನ್ಸ್ ಲೋಯಲ್ಟಿ ಪ್ರೋಗ್ರಾಂಗೆ ಸೈನ್‌ ಅಪ್ ಮಾಡಿಕೊಂಡು ನಿಮ್ಮ ಟಿಕೆಟ್ ಬುಕ್ಕಿಂಗ್‌ಗೆ ರಿವಾರ್ಡ್ ಪಾಯಿಂಟ್ ಅನ್ನು ಪಡೆಯಬಹುದಾಗಿದೆ.

ಎರಡನೆಯದಾಗಿ, ವಿಮಾನಯಾನ ಸಂಸ್ಥೆಯೊಂದಿಗೆ ಸಹಯೋಗ ಹೊಂದಿರುವ ಅಥವಾ ವಿಮಾನ ಪ್ರಯಾಣಕ್ಕೆ ಆಫರ್ ನೀಡುವ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಪ್ರತಿ ವಹಿವಾಟಿಗೂ ರಿವಾರ್ಡ್ ಪಾಯಿಂಟ್ ಪಡೆಯಬಹುದು. ಈ ರಿವಾರ್ಡ್ ಪಾಯಿಂಟ್‌ಗಳನ್ನು ನೀವು ವಿಮಾನ ಟಿಕೆಟ್ ಬುಕ್ ಮಾಡುವ ವೇಳೆ ಬಳಕೆ ಮಾಡಬಹುದಾಗಿದೆ.

ಇನ್ನು ಮೂರನೇಯದಾಗಿ, ಹೊಟೇಲ್, ಕಾರು ಬಾಡಿಗೆ, ಮೊದಲಾದವುಗಳು ಸೇರಿದಂತೆ ನೀವು ವಿಮಾನಯಾನ ಸಂಸ್ಥೆಯ ಪಾಲುದಾರ ಬ್ರ್ಯಾಂಡ್‌ ಮೂಲಕ ಬುಕ್ಕಿಂಗ್ ಮಾಡಬಹುದು.

ಇನ್ನು ಕ್ರೆಡಿಟ್ ಕಾರ್ಡ್‌ಗಳಲ್ಲಿಯೂ ಕೆಲವು ಆಫರ್ ಪಾಯಿಂಟ್‌ಗಳು ಇರುತ್ತದೆ. ಈ ಮೂಲಕ ನೀವು ಕಡಿಮೆ ದರಕ್ಕೆ ಅಥವಾ ಯಾವುದೇ ವೆಚ್ಚವಿಲ್ಲದೆ, ಉಚಿತ ವಿಮಾನ ಟಿಕೆಟ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಮೇಲಿನಂತೆ ಏರ್‌ ಮೈಲ್ಸ್ ರಿಡೀಲ್ ಮಾಡಿ ವಿಮಾನಯಾನ ಸಂಸ್ಥೆಯು ಈ ರಿವಾರ್ಡ್ ಪಾಯಿಂಟ್ಸ್ ಅಥವಾ ಏರ್‌ ಮೈಲ್ಸ್‌ಗಳನ್ನು ಭಾರತೀಯ ಕರೆನ್ಸಿಗೆ ವರ್ಗಾವಣೆ ಮಾಡಿದರೆ, ಅದನ್ನು ನಾವು ವಿಮಾನ ಟಿಕೆಟ್ ಬುಕ್ಕಿಂಗ್‌ ಮತ್ತು ಸೇವೆಗಾಗಿ ಬಳಕೆ ಮಾಡಬಹುದಾಗಿದೆ.

ಈ ರಿವಾರ್ಡ್ ಪಾಯಿಂಟ್ ಅನ್ನು ನಾವು ಕ್ಯಾಷ್ ಬ್ಯಾಕ್ ಆಫರ್ ಆಗಿಯೂ ಪರಿಗಣನೆ ಮಾಡಬಹುದಾಗಿದೆ. ಉದಾಹರಣೆಗೆ, ನೀವು 5000 ರೂಪಾಯಿಗೆ ಸ್ಪೇಸ್‌ಜೆಟ್ ವಿಮಾನದ ಟಿಕೆಟ್ ಅನ್ನು ಬುಕ್ ಮಾಡಿದರೆ ನೀವು 10 ಸಾವಿರ ಪಾಯಿಂಟ್‌ಗಳನ್ನು ಪಡೆಯುತ್ತೀರಿ. ಭಾರತದ ಕರೆನ್ಸಿ ಪ್ರಕಾರ ರಿವಾರ್ಡ್ ಪಾಯಿಂಟ್ಸ್ ಅನ್ನು ಏರ್ ಮೈಲ್ಸ್ ಎಂದು ಪರಿಗಣಿಸಲಾಗುತ್ತದೆ. ಒಂದು ರಿವಾರ್ಡ್ ಪಾಯಿಂಟ್‌ಗೆ ಸ್ಪೇಸ್‌ಜೆಟ್‌ 50 ಪೈಸೆಯ ಆಫರ್ ನ್ನು ನಿಮಗೆ ನೀಡುತ್ತದೆ.

 

ಇದನ್ನು ಓದಿ: C.S.Puttaraju: ಒಂದೇ ಅವಧಿಯಲ್ಲಿ ಒಬ್ಬ 2 ಅಸೆಂಬ್ಲಿ, 2 ಎಂಪಿ ಚುನಾವಣೆ ಎದುರಿಸಿದ ಗಂಡು ಇದ್ರೆ ಅದು ನಾನೊಬ್ಬನೇ: ಮೇಲುಕೋಟೆ ಪುಟ್ಟರಾಜು ! 

Leave A Reply

Your email address will not be published.