Samantha Ruth Prabhu: ಸಮಂತಾ ಖರೀದಿಸಿದ ಬೃಹತ್‌ ಬಂಗ್ಲೆಯ ಬೆಲೆ ಎಷ್ಟು ಗೊತ್ತಾ? ಅಚ್ಚರಿಯಾಗುವುದು ಖಂಡಿತ!

Price of duplex apartment bought by Samantha

Samantha Ruth Prabhu: ಸಮಂತಾ ರುತ್ ಪ್ರಭು ದಕ್ಷಿಣ ಭಾರತದ ಚಲನಚಿತ್ರ ಜಗತ್ತಿನಲ್ಲಿ ಪ್ಯಾನ್ ಇಂಡಿಯಾ ಎಂದು ಜನಪ್ರಿಯರಾಗಿದ್ದಾರೆ. ಈಗಾಗಲೇ ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ರುತ್​ ಪ್ರಭು ಜೋಡಿ ದೂರವಾಗಿ ಮೂರು ವರ್ಷಗಳೇ ಕಳೆದು ಹೋಗಿದೆ. ಸದ್ಯ ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರೈಸ್ತ ರೀತಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

 

ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ರುತ್​ ಪ್ರಭು ಜೋಡಿಯು ಆರಂಭದಲ್ಲಿ ತಮ್ಮ ಖುಷಿಯ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇದ್ದರು. ಆದರೆ ಕೊನೆಗೆ ಸಾಮಾಜಿಕ ಜಾಲತಾಣದ (Social Media) ಮೂಲಕವೇ ವಿಚ್ಛೇದನ ಘೋಷಿಸಿದ್ದರು.

ವಿಚ್ಛೇದನ ಬಳಿಕ ಅನಾರೋಗ್ಯದ ಕಾರಣದಿಂದ ನಟಿ ಸಮಂತಾ (Samantha Ruth Prabhu) ಸುದ್ದಿಯಾಗಿದ್ದರು, ಇದೀಗ ದುಬಾರಿ ಬಂಗಲೆ ಖರೀದಿ ವಿಷಯದಲ್ಲಿ ಸುದ್ದಿಯಾಗಿದ್ದಾರೆ.

ಸಮಂತಾ ನಟನೆಯ ಸಂಪಾದನೆ ಜೊತೆಗೆ, ತನ್ನ ಸ್ನೇಹಿತರ ಜೊತೆಗೆ ಕೆಲವು ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಅವರು ಏಕಮ್ ಅರ್ಲಿ ಲರ್ನಿಂಗ್ ಸೆಂಟರ್ ಎಂಬ ಪ್ಲೇ ಸ್ಕೂಲ್ ಅನ್ನು ಹೊಂದಿದ್ದಾರೆ. ಬಟ್ಟೆ ಬ್ರ್ಯಾಂಡ್ ‘ಸಾಕಿ’ ನಡೆಸುತ್ತಿದ್ದಾರೆ. ಇವರು ಫ್ಯಾಷನ್ ಟ್ರೆಂಡ್ ಸೆಟ್ಟರ್ ಆಗಿದ್ದು ಸಾಕಿಗೆ ಸಾಕಷ್ಟು ಇನ್ಪುಟ್ ನೀಡುತ್ತಾರೆ. ಅಲ್ಲದೆ ಚಾರಿಟಿ ಫೌಂಡೇಶನ್ ಅನ್ನು ಹೊಂದಿದ್ದಾರೆ. ಅಲ್ಲಿ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ಮಕ್ಕಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ಹಣವನ್ನು ಸಹಾಯ ಮಾಡುತ್ತಾರೆ.

ಇದರ ನಡುವೆಯೂ, ನಟಿ ಹೈದರಾಬಾದ್​ನಲ್ಲಿ ಹೊಸದಾಗಿ ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​ ಖರೀದಿಸಿದ್ದಾರಂತೆ. ಹೌದು, ರಿಯಲ್ ಎಸ್ಟೇಟ್ ಡೇಟಾ ಅನಾಲಿಟಿಕ್ಸ್ ಸಂಸ್ಥೆಯಾದ ಸಿಆರ್‌ಇ ಮ್ಯಾಟ್ರಿಕ್ಸ್ ನ ವರದಿಯು ಸಮಂತಾ ರುತ್ ಪ್ರಭು ಅವರ ಐಷಾರಾಮಿ ಹೊಸ ಆಸ್ತಿಯ ಬಗ್ಗೆ ಬಹಿರಂಗಪಡಿಸಿದೆ.

ಜಯಭೇರಿ ಆರೆಂಜ್ ಕೌಂಟಿಯಲ್ಲಿ ಐಷಾರಾಮಿ 3 ಬಿಎಚ್‌ಕೆ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​ ನ್ನು 7.8 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. 13ನೇ ಮಹಡಿಯಲ್ಲಿ 3,920 ಚದರ ಅಡಿ ಮತ್ತು 14ನೇ ಮಹಡಿಯಲ್ಲಿ 4,024 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಈ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​ (Apartment) ಒಟ್ಟು 7,944 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಎಂಬ ಮಾಹಿತಿ ಇದೆ.

ಸಮಂತಾ ಅವರ ಹೊಸ ಮನೆಯು ಉನ್ನತ ಸೌಲಭ್ಯಗಳು ಮತ್ತು ‘ಸಮೃದ್ಧವಾದ ತೆರೆದ ಸ್ಥಳಗಳನ್ನು’ ಸಹ ಒಳಗೊಂಡಿರುತ್ತದೆ. “ವಿಶ್ವ ದರ್ಜೆಯ ಕ್ಲಬ್‌ಹೌಸ್ ನಿಮಗೆ ದೊಡ್ಡ ಈಜುಕೊಳ, ಒಳಾಂಗಣ ಆಟಗಳು, ವಿವಿಧೋದ್ದೇಶ ಕೋರ್ಟ್, ಸುಸಜ್ಜಿತ ಜಿಮ್ನಾಷಿಯಂ ಮತ್ತು ಹೆಲ್ತ್ ಕ್ಲಬ್, ಆಡಿಟೋರಿಯಂ ಮತ್ತು ಇನ್ನೂ ಅನೇಕ ಸೌಲಭ್ಯಗಳನ್ನು ಒಳಗೊಂಡಂತೆ ಜೀವನಶೈಲಿಯ ಸೌಕರ್ಯಗಳನ್ನು ಒದಗಿಸುತ್ತದೆ” ಎಂದು ವೆಬ್‌ಸೈಟ್ ಹೇಳಿದೆ.

 

ಇದನ್ನು ಓದಿ: Shobha karandlaje: ಈ ಸಲ ನಮ್ಮ ಸಮಾನ್ಯ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಆಗ್ತಾರೆ- ಶೋಭಾ ಕರಂದ್ಲಾಜೆ! ಯಾರು ಗೊತ್ತಾ ಆ ಕಾರ್ಯಕರ್ತ? 

Leave A Reply

Your email address will not be published.