Darshan-Umapathy gowda: ಏನಿದು ನಟ ದರ್ಶನ್‌ -ಉಮಾಪತಿ ಗಲಾಟೆ! ಪರ್ಸನಲ್‌ ವಿಷಯ ಮಾತಾಡೋಕೆ ನನಗೆ ಎರಡು ನಿಮಷ ಸಾಕೆಂದು ಯಾಕಂದ್ರು ಉಮಾಪತಿ?!

Umapathy Srinivas gowda counter to Actor Darshan Toogudeepa

Darshan-Umapathy Gowda: ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಹಾಗೂ ನಿರ್ಮಾಪಕ ಉಮಾಪತಿ ಗೌಡ (Umapathy gowda) ನಡುವಿನ ಸಮರ ಇಂದಿನದಲ್ಲ ಕಳೆದ ಹಲವು ಸಮಯಗಳಿಂದ ಇವರ ಮಧ್ಯೆ ವಾಗ್ಯುದ್ಧ ನಡೆಯುತ್ತಲೇ ಇದೆ. ಇದೀಗ “ಅವ್ರ್‌ ಪರ್ಸನಲ್‌ ಆಗಿ ಮಾತಾಡಿದ್ರೆ ನಾನು ಮಾತಾಡೋಕೆ 2 ನಿಮಿಷ, ಆದ್ರೆ ಬೇಡ” ಎಂದು ಉಮಾಪತಿ ದರ್ಶನ್ ಬಗ್ಗೆ ಹೇಳಿರುವ ಮಾತು ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಉಮಾಪತಿ ಯಾಕೆ ಹೀಗೆ ಹೇಳಿದ್ರು? ದರ್ಶನ್ ಈ ಮೊದಲು ಏನು ಹೇಳಿದ್ದರು?

ಸ್ನೇಹಿತರಾಗಿದ್ದ ದರ್ಶನ್ -ಉಮಾಪತಿ (Darshan-Umapathy Gowda) 25 ಕೋಟಿ ಫೇಕ್ ಲೋನ್ ವಿಚಾರದಲ್ಲಿ ದೂರಾಗಿದ್ದರು. ನಂತರದಲ್ಲಿ ವಾಗ್ಯುದ್ಧ ನಡೆಯುತ್ತಲೇ ಇತ್ತು. ಈ ಹಿಂದೆ ದರ್ಶನ್ ಉಮಾಪತಿಯ ವಿಚಾರವಾಗಿ ‘ನಿರ್ಮಾಪಕರು ಇದ್ದರೇನೆ ಸ್ಟಾರ್‌ಗಳಂತೆ. ನಾವು ಕೂಲಿ ಮಾಡಿದ್ದಕ್ಕೆ ಹಣ ನೀಡುತ್ತಾರೆ. ನನ್ನನ್ನು ಸ್ಟಾರ್ ಮಾಡಿದ್ದು ಇವರಲ್ಲ. ’ಎಂದು ಹೇಳಿದ್ದರು. ಅದಕ್ಕೆ ಇದೀಗ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.

ಅಂದು ದರ್ಶನ್ ಉಮಾಪತಿ ಸ್ಟಾರ್ ಗಳ ವಿಚಾರವಾಗಿ ಮಾತನಾಡಿದ್ದಕ್ಕೆ ತಿರುಗೇಟು ನೀಡಿದ್ದರು‌. “ಸ್ಟಾರ್‌ಗಳು ಏನು ಮೇಲಿಂದ ಉದುರುತ್ತಾರಾ? ನಿರ್ಮಾಪಕರು ಇದ್ದರೇನೇ ಸಿನಿಮಾ, ಸ್ಟಾರ್‌ಗಳು 500 ರೂಪಾಯಿ ದಾನ ಮಾಡಿದರೂ ಅದು ನಿರ್ಮಾಪಕರ ದುಡ್ಡು ಎಂದು ಹೇಳಿದ್ದಾರೆ. ಈ ಕ್ಷೇತ್ರದ ನಿರ್ಮಾಪಕರು. ಕಲಾವಿದರು ನಾವೆಲ್ಲಾ ಒಂದೇ” ಎಂದು ಹೇಳಿದ್ದರು.

“ನಿರ್ಮಾಪಕರು ಇದ್ದರೇನೆ ಸ್ಟಾರ್‌ಗಳಂತೆ. ಅದು ತಪ್ಪು ಸ್ವಾಮಿ. ಹೌದು ನಿರ್ಮಾಪಕರು ಇದ್ರೆ ಒಂದು ಸಿನಿಮಾ ಆಗುತ್ತೆ. ಆದರೆ ಸೆಲೆಬ್ರೆಟಿಗಳು, ಅಭಿಮಾನಿಗಳು, ಸಿನಿಪ್ರೇಮಿಗಳು ಇದ್ದರೆ ಮಾತ್ರ ಒಬ್ಬ ಕಲಾವಿದ, ಸ್ಟಾರ್‌ ಆಗೋಕೆ ಸಾಧ್ಯ. ಒಬ್ಬ ಸ್ಟಾರ್ 500 ರೂಪಾಯಿ ದಾನ ಮಾಡಿದರೂ ನಿರ್ಮಾಪಕರ ದುಡ್ಡು ಎನ್ನುವುದು ತಪ್ಪು. ನಮಗೆ ಏನು ಧರ್ಮಕ್ಕೆ ಕೊಡ್ತಾರಾ ಹಣ. ಬೆಳಗ್ಗೆಯಿಂದ ಸಂಜೆವರೆಗೂ ಕತ್ತೆ ರೀತಿ ದುಡಿಯುತ್ತೇವೆ. ಮನೆಯಲ್ಲಿ ಕೂರಿಸಿ ನಮಗೆ ಹಣ ಕೊಡಲ್ಲ. ಕೆಲಸ ಮಾಡಿದರೆ ಕೂಲಿ ಕೊಡ್ತಾರೆ. ಕೂಲಿ ಕೇಳಿದ್ರೆ ತಪ್ಪಾ, ಸಿನಿಮಾ ದುಡ್ಡು ಮಾಡಿದ್ರೆ ನಮಗೆ ತಂದು ಕೊಡ್ತೀರಾ ಸ್ವಾಮಿ?. ಒಬ್ಬ ಹೀರೊ ಬಗ್ಗೆ ಮಾತನಾಡುವ ಮುಂಚೆ ಯೋಚನೆ ಮಾಡಿ. ಇನ್ನು ನಾನು ದರ್ಶನ್‌ನ ಕರ್ಕೊಂಡು ಬಂದೆ. ದರ್ಶನ್‌ನ ಸ್ಟಾರ್ ಮಾಡ್ದೆ ಎಂದು ಹೇಳುವ ಅಧಿಕಾರ, ಅರ್ಹತೆ, ಯೋಗ್ಯತೆ ಇರುವುದು ಮೆಜೆಸ್ಟಿಕ್ ಸಿನಿಮಾ ನಿರ್ಮಾಪಕ ಎಂ. ಜಿ ರಾಮಮೂರ್ತಿ ಅವರಿಗೆ ಮಾತ್ರ. ಇನ್ಯಾರಿಗೂ ನಾನು ಆ ಯೋಗ್ಯತೆ ಕೊಟ್ಟಿಲ್ಲ” ಎಂದು ಖಡಕ್ ಆಗಿ ಹೇಳಿದ್ದರು.

ದರ್ಶನ್ ಅವರ ಈ ಹೇಳಿಕೆಗೆ ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಉಮಾಪತಿ ಪ್ರತಿಕ್ರಿಯಿಸಿದ್ದು, “ನೋಡಿ ಅದು ಅವರಿಗೆ ಬಿಟ್ಟಿರುವುದು. ನಾನು ಹೇಳುವುದು ಇಷ್ಟೇ. ವ್ಯವಹಾರ ವ್ಯವಹಾರವಾಗಿ ಮಾಡಿದ್ದೇವೆ. ಈಗ ಅವರು ಪರ್ಸನಲ್‌ ಆಗಿ ಮಾತಾಡಿದ್ರೆ ನಾನು ಮಾತಾಡೋಕೆ 2 ನಿಮಿಷ ಸಾಕು, ಆದ್ರೆ ಬೇಡ. ನಾನು ಹಾಗೆ ಮಾಡುವುದಿಲ್ಲ . ಯಾಕಂದ್ರೆ ನನ್ನ ಗುರಿನೇ ಬೇರೆ. ಅನಗತ್ಯ ವಿಚಾರಕ್ಕೆ ಸುಮ್ಮನೆ ನನ್ನ ಸಮಯ ವ್ಯರ್ಥ ಮಾಡಲ್ಲ. ಅವರು ತುಂಬಾ ಫ್ರೀ ಆಗಿದ್ದಾರೆ, ಮಾತನಾಡಲಿ ಸಮಸ್ಯೆ ಇಲ್ಲ. ಎಲ್ಲದಕ್ಕು ಉತ್ತರ ಕೊಡುವ ಸಮಯ ಬರುತ್ತದೆ. ಆಗ ಉತ್ತರ ಕೊಡ್ತೀನಿ. ನಾವು ಸಿನಿಮಾ ಮಾಡಿದ್ದು ನಿರ್ಮಾಪಕರಾಗಿ ಅಲ್ಲ. ಅಭಿಮಾನಿ ಆಗಿ. ಆದರೆ ಒಬ್ಬ ಅಭಿಮಾನಿಯನ್ನು ಹೆಂಗೆ ನಡೆಸಿಕೊಳ್ಳಬೇಕು, ಆದ್ರೆ ಅವ್ರು ಹೆಂಗೆ ನಡೆಸಿಕೊಂಡಿದ್ದಾರೆ ನಿಮ್ಗೆ ಗೊತ್ತು. ದೇವರು ಅವರನ್ನು ತುಂಬಾ ಚೆನ್ನಾಗಿ ಇಟ್ಟಿರಲಿ. ಇನ್ನು 500 ಸಿನಿಮಾ ಮಾಡಿ, 50 ವರ್ಷ ಇಂಡಸ್ಟ್ರಿ ಆಳಲಿ” ಎಂದು ಟಾಂಗ್ ಕೊಟ್ಟರು.

ಇದನ್ನೂ ಓದಿ:CT Ravi: ಸಿಟಿ ರವಿ ಆರೋಗ್ಯದಲ್ಲಿ ಏರುಪೇರು! ಆಸ್ಪತ್ರೆಗೆ ದಾಖಲು!!!

Leave A Reply

Your email address will not be published.