Shraddha Walker: ದೆಹಲಿ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣ; ಅಫ್ರಾಬ್‌ ಮೇಲೆ ಕೊಲೆ, ಸಾಕ್ಷ್ಯ ನಾಶ ಆರೋಪ ಹೊರಿಸಿದ ಕೋರ್ಟ್‌!!!

Shraddha Walker :Court frames murder charges against Aaftab Poonawala

Shraddha Walker: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಒಂದು ಘಟನೆಯೇ ಅದು ದೆಹಲಿಯ ಶ್ರದ್ಧಾ ವಾಕರ್‌(Shraddha Walker) ಹತ್ಯೆ ಪ್ರಕರಣ. ಈ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾ ವಿರುದ್ಧ ದೆಹಲಿಯ ಸಾಕೇತ್‌ ನ್ಯಾಯಾಲಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302 (ಕೊಲೆ) ಮತ್ತು201 (ಸಾಕ್ಷ್ಯಗಳ ಕಣ್ಮರೆ) ಅಡಿಯಲ್ಲಿ ಕೊಲೆಗಾರ ಮತ್ತು ಸಾಕ್ಷ್ಯಗಳ ನಾಶ ಮಾಡಿದ್ದಾನೆ ಎಂದು ಆದೇಶ ನೀಡಿದೆ. ಹಾಗೆನೇ ಈ ಬಗ್ಗೆ ಜೂನ್‌1ರಂದು ವಿಚಾರಣೆ ಶುರು ಮಾಡಲಾಗುವುದು ಎಂದು ಹೇಳಿದೆ.

ಸುಮಾರು ಮೂರು ವರ್ಷದಿಂದ ತನ್ನ ಜೊತೆ ಲಿವ್‌ ಇನ್‌ ರಿಲೇಷನ್‌ಶಿಪ್‌ ಹೊಂದಿದ್ದ ಅಫ್ತಾಬ್‌ ಶ್ರದ್ಧಾವಾಲ್ಕರ್‌ಳನ್ನು ಕೊಂದು, ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ನಂತರ ನಗರದ ಅನೇಕ ಭಾಗಗಳಲ್ಲಿ ಎಸೆದಿದ್ದ ಈ ಪಾತಕಿ ಅಫ್ತಾಬ್. ಈತನ ವಿರುದ್ಧ ಪೊಲೀಸರು ಸುಮಾರು 3000 ಪುಟಗಳ ಆರೋಪ ಪಟ್ಟಿ ಸಿದ್ಧಪಡಿಸಿದ್ದರು. ಕಳೆದ ವರ್ಷದ ಮೇ 18ರಂದು ದಿಲ್ಲಿಯ ಮೆಹ್ರೌಲಿ ಪ್ರದೇಶದಲ್ಲಿರುವ ಬಾಡಿಗೆ ಫ್ಲ್ಯಾಟ್‌ನಲ್ಲಿ ಈತ ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್‌ಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಹತ್ಯೆಗೂ ಮುನ್ನ ಇವರಿಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಹೇಳಲಾಗಿದೆ. ಆಕೆಯನ್ನು ಹತ್ಯೆ ಮಾಡಿದ ನಂತರ ಅಫ್ತಾಬ್‌ ಸುಮಾರು 300 ಲೀಟರ್‌ ಸಾಮರ್ಥ್ಯದ ಬೃಹತ್‌ ಫ್ರಿಡ್ಜ್‌ ಖರೀದಿ ಮಾಡಿದ್ದು, ಶ್ರದ್ಧಾಳ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಅದರೊಳಗಿಟ್ಟಿದ್ದ.

ಇದನ್ನೂ ಓದಿ: PS-2 Collection: ‘ಪೊನ್ನಿಯಿನ್ ಸೆಲ್ವನ್-2’ ಭರ್ಜರಿ 300 ಕೋಟಿ ಗಳಿಕೆ! OTT ಬಿಡುಗಡೆ ಡೇಟ್‌ ಫಿಕ್ಸ್‌!

 

Leave A Reply

Your email address will not be published.