Malappuram: ಪ್ರವಾಸಿಗರ ಬೋಟ್ ಪಲ್ಟಿಯಾಗಿ ಆರು ಮಕ್ಕಳು ಸೇರಿದಂತೆ, ಒಟ್ಟು 15 ಜನರ ದುರ್ಮರಣ!

Malappuram boat overturns 15 people death

Malappuram : ಮಲಪ್ಪುರಂ (Malappuram) ಜಿಲ್ಲೆಯ ತಿರೂರು ತಾಲೂಕಿನ ತಾನೂರ್​ ಬಳಿ ಬೋಟ್ ಪಲ್ಟಿಯಾಗಿ 15 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಆರು ಮಕ್ಕಳು, ಮಹಿಳೆಯರು ಸೇರಿದ್ದೂ, ಒಟ್ಟು 15 ಜನರು ದುರ್ಮರಣ ಹೊಂದಿದ್ದಾರೆ ಎಂದು ಸಚಿವ ವಿ ಅಬ್ದುರಾಹಿಮಾನ್ ದೃಢಪಡಿಸಿದ್ದಾರೆ. ತೂವಲ್ ತೀರ್ಥಂ ಪ್ರವಾಸಿ ತಾಣದ ಪುರಪುಜಾ ನದಿಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಸುಮಾರು 30ರಿಂದ 40ಕ್ಕೂ ಹೆಚ್ಚು ಪ್ರವಾಸಿಗರಿದ್ದ ಬೋಟ್ ಪಲ್ಟಿಯಾಗಿ ಈ ಅವಘಡ ಸಂಭವಿಸಿದ್ದೂ, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಅಗ್ನಿಶಾಮಕ ದಳ, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ದೋಣಿ ದಡದಿಂದ 300 ಮೀಟರ್​ ದೂರಲ್ಲಿದೆ.

ದೋಣಿಯಲ್ಲಿದ್ದ ಪ್ರಯಾಣಿಕರು ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿ ಮತ್ತು ತನೂರ್ ಪ್ರದೇಶದವರು ಎಂದು ಪತ್ತೆ ಹಚ್ಚಲಾಗಿದೆ.

ಬೋಟ್​ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಜೀವ ರಕ್ಷಕ ಸಾಧನಗಳು ಇರಲಿಲ್ಲವೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಟೈಮ್ಸ್​​ ನೌ ವರದಿ ಪ್ರಕಾರ, ಈವರೆಗೆ ಸುಮಾರು 10 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಮರಳಿ ಬಾರದ ಲೋಕಕ್ಕೆ ತೆರಳಿದ ಬಲರಾಮ : ಸಾವಿರಾರು ಜನರ ಕಂಬನಿ

Leave A Reply

Your email address will not be published.