D. K Suresh: ಡಿಕೆ ಶಿವಕುಮಾರ್ ನೆನೆದು ಕಣ್ಣೀರು ಹಾಕಿದ ಸಹೋದರ ಡಿಕೆ ಸುರೇಶ್ ; ಅಂತದ್ದೇನಾಯಿತು?!

DK Suresh Tears remembering DK Shivakumar during the campaign in kanakapur

DK Suresh: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ಪಕ್ಷದ ಗೆಲುವಿಗಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಅಂತೆಯೇ ಕನಕಪುರ ಕ್ಷೇತ್ರದಲ್ಲೂ ಪ್ರಚಾರದ ಬಿಸಿ ಹೆಚ್ಚಾಗಿದೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಶಿವಕುಮಾರ್ (D. K. Shivakumar) ಪರ ಸಹೋದರ ಡಿ.ಕೆ ಸುರೇಶ್ (DK Suresh) ಪ್ರಚಾರ ನಡೆಸಿ, ಮಾತಯಾಚಿಸಿದರು. ಈ ವೇಳೆ ಅಣ್ಣನನ್ನು ನೆನೆದು ಡಿಕೆ ಸುರೇಶ್ ಭಾವುಕರಾದರು.

ಅಣ್ಣ ಡಿ ಕೆ ಶಿವಕುಮಾರ್ ಪರವಾಗಿ ಹುಟ್ಟೂರು ಕನಕಪುರ ತಾಲೂಕಿನ ದೊಡ್ಡಹಾಲಹಳ್ಳಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಡಿ.ಕೆ ಸುರೇಶ್ ಭಾಷಣದ ವೇಳೆ ಡಿಕೆಶಿಯನ್ನು ನೆನೆದು ಭಾವುಕರಾದರು,
ಕಣ್ಣೀರು ಹಾಕಿದರು.

ಭಾಷಣದಲ್ಲಿ ಡಿ.ಕೆ ಶಿವಕುಮಾರ್ ಗಡ್ಡಬಿಟ್ಟಿರುವ ವಿಚಾರವಾಗಿ ಮಾತನಾಡಿದ ಸುರೇಶ್ “ ಡಿಕೆಶಿ ಕಳೆದ ಎರಡು ವರ್ಷದಿಂದ ಮನೆ ಸೇರಿಲ್ಲ. ಊಟ ಮಾಡಿಲ್ಲ, ನಿದ್ರೆ ಮಾಡ್ತಿಲ್ಲ. ಯಾವಾಗ ಮಲಗ್ತಾರೆ, ಏಳ್ತಾರೆ ಗೊತ್ತಿಲ್ಲ. ಎರಡು ಗಂಟೆ ಕಾಲ ಡಿ.ಕೆ ಶಿವಕುಮಾರ್ ಮಲಗಿದ್ರೆ ಹೆಚ್ಚು. ಕೆಲವರು ಗಡ್ಡಾಯಾಕೆ ಬಿಟ್ಟಿದ್ದಾರೆ ಎಂದು ಕೇಳ್ತಾರೆ. ಗಡ್ಡಕ್ಕೆ ಉತ್ತರ ಕೊಡಬೇಕಾಗಿರೋದು ಈ ತಾಲೂಕಿನ ಜನ. ಗಡ್ಡಯಾಕೆ ಬಿಟ್ಟಿದ್ದಾರೆ ಎಂದು ಹೇಳಿ ಮೇ.13 ನೇ ತಾರೀಖು ತೀರ್ಮಾನ ಆಗುತ್ತೆ” ಎಂದು ಭಾವುಕರಾಗಿ ನುಡಿದರು.

ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ರಣಹದ್ದು ಬಡಿದು ಬಿಟ್ಟಿತ್ತು. ಅದೃಷ್ಟವಶಾತ್ ಡಿಕೆ ಶಿವಕುಮಾರ್ ಅವರು ಅಪಾಯದಿಂದ ಪಾರಾಗಿದ್ದರು. ಅಲ್ಲದೆ, ಡಿಕೆಶಿ ಪ್ರಯಾಣಿಸಿದ ಹೆಲಿಕಾಪ್ಟರ್ ಇಳಿದ ಹೊನ್ನಾವರ ರಾಮತೀರ್ಥ ಗುಡ್ಡದಲ್ಲಿ ಬೆಂಕಿ ಅನಾಹುತವೂ ನಡೆದಿತ್ತು. ಈ ಹಿನ್ನೆಲೆ ಡಿಕೆಶಿ ದೇವಸ್ಥಾನಗಳಿಗೂ ಭೇಟಿ ನೀಡಿದ್ದರು. ಸದ್ಯ ಪ್ರಚಾರ ಕಾರ್ಯದಲ್ಲಿ ಮಗ್ನರಿಗಿದ್ದಾರೆ.

ಇದನ್ನೂ ಓದಿ:Karnataka Election 2023: ಬೆಂಗಳೂರಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ, ಈ ಸ್ಥಳಗಳಲ್ಲಿ ವಾಹನ ಸಂಚಾರ ನಿರ್ಬಂಧ!

Leave A Reply

Your email address will not be published.