Karnataka Election: ಮದುವೆಯಾಗದ ಯುವಕರಿಗೆ ಮದುವೆ ಭಾಗ್ಯ ಗ್ಯಾರಂಟಿ- ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆ ಫುಲ್ ವೈರಲ್!

Karnataka election Marriage luck guarantee for unmarried youth-

Karnataka Election: ವಿಧಾನಸಭಾ ಚುನಾವಣೆಯ (Karnataka election) ಹಿನ್ನೆಲೆ ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿದ್ದಾರೆ. ಪಕ್ಷದ ಗೆಲುವಿಗಾಗಿ ಜಿಜೆಪಿ- ಕಾಂಗ್ರೇಸ್ ಪಕ್ಷಗಳು ಭರವಸೆಯ ಘೋಷಣೆಗಳನ್ನು ಮಾಡುತ್ತಿದ್ದು, ಕಳೆದೆರಡು ದಿನಗಳ ಹಿಂದೆ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಆದರೆ, ಇದೀಗ ಬೆಳಗಾವಿ (Belagavi) ಜಿಲ್ಲೆಯ ಅರಭಾವಿ ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆಯಲ್ಲಿನ ಒಂದು ಭರವಸೆ ಸಖತ್ ವೈರಲ್ ಆಗಿದೆ. ಅಂತದ್ದೇನಿದೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

ಬೆಳಗಾವಿ ಜಿಲ್ಲೆ ಅರಭಾವಿ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಹಾಗೂ ಗೋಕಾಕ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ಇವರು ಭರವಸೆಯ ಪ್ರಣಾಳಿಕೆ ಹೊರಡಿಸಿದ್ದು, ಇದರಲ್ಲಿನ ಒಂದು ಭರವಸೆ ಎಲ್ಲರ ಗಮನ ಸೆಳೆದಿದ್ದು, ಸಖತ್ ವೈರಲ್ ಆಗಿದೆ.

ಗುರುಪುತ್ರ ಕುಳ್ಳೂರ ಹಾಗೂ ಪುಂಡಲೀಕ ಕುಳ್ಳೂರ ಇಬ್ಬರೂ ಸಹೋದರರು. ಬೇರೆ ಬೇರೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ವಧು-ವರರ ಮದುವೆ ಭಾಗ್ಯವನ್ನು ಘೋಷಣೆ ಮಾಡಿದ್ದಾರೆ. ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಸದ್ಯ ಈ ಭರವಸೆ ಸಖತ್ ಟ್ರೋಲ್ ಆಗುತ್ತಿದ್ದು, ವೈರಲ್ ಆಗುತ್ತಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಪಕ್ಷಗಳು ಭಾರೀ ಪ್ರಚಾರ ನಡೆಸುತ್ತಿವೆ. ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ: ವಿಚಿತ್ರ ಆದರೂ ಸತ್ಯ!ಇಲ್ಲೊಂದು ದೇಶದಲ್ಲಿ ಈ ದಿನ ಮಕ್ಕಳು ಜನಿಸಿದರೆ, ಲಕ್ಷಗಟ್ಟಲೇ ಹಣದ ಜೊತೆ ಇವೆಲ್ಲಾ ಸೌಕರ್ಯಗಳು ಲಭ್ಯ!

Leave A Reply

Your email address will not be published.