Actor Chethan: ಬಾಲಿವುಡ್ ಭಾಯಿಜಾನ್ ಬಗ್ಗೆ ವ್ಯಂಗ್ಯವಾಡಿದ ನಟ ಚೇತನ್ ; ಸಲ್ಮಾನ್ ಖಾನ್ ಕಾಮುಕ ಎಂದು ಟ್ವೀಟ್!!
Actor Chethan Kumar Uses Debauchery word for Salman Khan
Actor Chethan Kumar : ನಟ ಚೇತನ್ (Actor Chethan kumar) ಒಂದೆರಡಲ್ಲ ಸಾಕಷ್ಟು ವಿವಾದಾತ್ಮಕ ಹೇಳಿಕೆ ಹುಟ್ಟುಹಾಕಿ ಪ್ರತಿದಿನ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಂತೂ ಸೋಷಿಯಲ್ ಮೀಡಿಯಾದಲ್ಲಿ ಏನೇ ಸುದ್ಧಿ ಹರಿದಾಡಿದರೂ ಅದಕ್ಕೆ ನಟ ಚೇತನ್ ಪ್ರತಿಕ್ರಿಯೆ ಇದ್ದೆ ಇರುತ್ತದೆ. ಇದೀಗ ಸಲ್ಮಾನ್ ಖಾನ್ (Salman Khan) ಮಹಿಳೆಯರ ದೇಹ ಅಮೂಲ್ಯ ಎಂದು ಹೇಳಿದ್ದಕ್ಕೆ ನಟ ಚೇತನ್ ಪ್ರತಿಕ್ರಿಯಿಸಿದ್ದು, ಬಾಲಿವುಡ್ ನಟನ ಬಗ್ಗೆ ವ್ಯಂಗ್ಯವಾಡಿ, ಕಾಮುಕ ಎಂದಿದ್ದಾರೆ.
ಈ ಹಿಂದೆ ನಟಿ ಪಾಲಕ್ ತಿವಾರಿ (Palak Tiwari) ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ್ದು, “ತಮ್ಮ ಸೆಟ್‌ನಲ್ಲಿ ಯಾವ ಹುಡುಗಿಯೂ ‘ಲೋ ನೆಕ್‌ಲೈನ್’ ಬಟ್ಟೆ ಧರಿಸುವಂತಿಲ್ಲ. ಹೆಣ್ಮಕ್ಕಳು ಡೀಪ್ ನೆಕ್‌ಲೈನ್ ಬಟ್ಟೆ ಧರಿಸುವುದನ್ನು ಸಲ್ಮಾನ್ ಇಷ್ಟಪಡುವುದಿಲ್ಲ” ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಸಂದರ್ಶನವೊಂದರಲ್ಲಿ ಸಲ್ಮಾನ್ ಗೆ ಈ ವಿಚಾರವಾಗಿ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ “ ಹೆಣ್ಣಿನ ದೇಹವು ಅಮೂಲ್ಯವಾಗಿದ್ದು, ಹೆಣ್ಣು ತನ್ನ ದೇಹವನ್ನು ಹೆಚ್ಚು ಮುಚ್ಚಿಕೊಂಡಷ್ಟು ಉತ್ತಮವಾಗಿರುತ್ತದೆ” ಎಂದು ಬಾಲಿವುಡ್ ಭಾಯಿಜಾನ್ ಹೇಳಿದ್ದರು. ಇದರ ಬೆನ್ನಲ್ಲೇ ನಟನ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ಸಲ್ಮಾನ್ ಖಾನ್ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ‘ಹೆಣ್ಮಕ್ಕಳ ಮೇಲೆ ದೌರ್ಜನ್ಯ ಮಾಡಿದವರು ಮಹಿಳೆಯ ಬಗ್ಗೆ ಮಾತನಾಡುತ್ತಾರೆ’ ಎಂಬಂತಹ ಹಲವು ವಿರೋಧ ಮಾತುಗಳು ಕೇಳಿಬಂದವು. ಇದೀಗ ಸಲ್ಮಾನ್ ಖಾನ್ ಹೇಳಿಕೆಗೆ ಸ್ಯಾಂಡಲ್ ವುಡ್ ನಟ ಚೇತನ್ ಪ್ರತಿಕ್ರಿಯೆ ನೀಡಿದ್ದು, ನಟನ ಬಗ್ಗೆ ವ್ಯಂಗ್ಯವಾಡಿದ್ದಾರೆ.
“ ಸಲ್ಮಾನ್ ಖಾನ್ ಅವರು ಮಹಿಳೆಯರ ದೇಹ ಅಮೂಲ್ಯವಾದದ್ದು, ಹೆಚ್ಚು ಕವರ್ ಮಾಡಿದಷ್ಟು ಒಳ್ಳೆಯದು ಎಂದು ಹೇಳಿದ್ದಾರೆ. ಖಾನ್ ಅವರು ಕಾಮುಕ ಸ್ವಭಾವ, ಮಹಿಳೆಯರನ್ನು ಪ್ರಶ್ನಾರ್ಹ ರೀತಿಯಲ್ಲಿ ನಡೆಸಿಕೊಳ್ಳುವುದರಿಂದಲೇ ತಿಳಿಯಲ್ಪಟ್ಟಿದ್ದಾರೆ. ಇವರು ಮಹಿಳೆಯರ ಡ್ರೆಸ್ ಬಗ್ಗೆ ನೈತಿಕ ಪೊಲೀಸ್ಗಿರಿ ತೋರಿಸುತ್ತಿದ್ದಾರೆ. ಸಲ್ಮಾನ್ ಖಾನ್ ಈ ಬಗ್ಗೆ ಕಮೆಂಟ್ ಮಾಡುವುದರಿಂದ ಅವರ ಅಜ್ಞಾನ/ಬೂಟಾಟಿಕೆ/ಪುರುಷಪ್ರಧಾನ ಯೋಚನೆಗಳು ಹೆಚ್ಚು ಸ್ಪಷ್ಟವಾಗುತ್ತದೆ” ಎಂದು ನಟ ಚೇತನ್ ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ನಟ ಚೇತನ್ ಟ್ವೀಟ್ ನಲ್ಲಿ ಸಲ್ಮಾನ್ ಖಾನ್’ನನ್ನು ಪರೋಕ್ಷವಾಗಿ ಕಾಮುಕ ಎಂದಿದ್ದಾರೆ. ಹೌದು, ಸಲ್ಮಾನ್ ಖಾನ್ ಬಗ್ಗೆ debaucheries ಎಂಬ ಪದ ಬಳಸಿದ್ದಾರೆ. ಈ ಪದದ ಅರ್ಥ, ದೈಹಿಕ ಸುಖದಲ್ಲಿ ಹೆಚ್ಚು ಒಳಗೊಂಡವರು, ದೈಹಿಕ ಸುಖಕ್ಕೆ ಹೆಚ್ಚಿನ ಆದ್ಯತೆ ನೀಡುವವರು ಎಂಬುದಾಗಿದೆ. ಡ್ರಗ್ಸ್, ಮದ್ಯ ಹೀಗೆ ಇತರೆ ಚಟ ಹೊಂದಿರುವವರು ಎಂದಾಗಿದೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) May 1, 2023
ಇದನ್ನೂ ಓದಿ: EPFO Extends Deadline: ಹೆಚ್ಚಿನ ಪಿಂಚಣಿ’ಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ!