Boy Earned 100 Crores: ಕೇವಲ 23 ರ ವಯಸ್ಸಿಗೆ 100 ಕೋಟಿ ಒಡೆಯನಾದ ಹುಡುಗ, ಹೇಗೆ ಅಂತೀರಾ, ಈ ಸ್ಟೋರಿ ಓದಿ !

Boy Earned 100 Crores: ಹೈದರಾಬಾದ್ ಮೂಲದ ಈ 23 ವರ್ಷದ ಚಿಗುರು ಮೀಸೆಯ ಹುಡುಗ ಸಂಕರ್ಷ್ ಚಂದ್ (Sankarsh Chanda) ಬಹಳ ಸಣ್ಣ ವಯಸ್ಸಿಗೆ 100 ಕೋಟಿ ರೂಪಾಯಿ ಸಂಪಾದಿಸುವ ಮೂಲಕ ಜಾಗತಿಕ ಶ್ರೀಮಂತ ಸಾಧಕರ ಪಟ್ಟಿಗೆ ಸೇರಿದ್ದಾರೆ. ಕೇವಲ ಜುಜುಬಿ 2,000 ರೂನಿಂದ ಆರಂಭವಾದ ಈತನ ಹೂಡಿಕೆ ಇವತ್ತು ಹೆಮ್ಮರವಾಗಿ ಬೆಳೆದು, ಆತನನ್ನು ದಿಗ್ಗಜ ಸಾಧಕರ ಸರತಿ ಸಾಲಿಗೆ ನಿಲ್ಲಿಸಿದೆ.

ಸಾಮಾನ್ಯ ಗೃಹಸ್ಥನೊಬ್ಬ ಒಳ್ಳೆಯ ಒಂದು ಓದಿ ಕೆಲಸಕ್ಕೆ ಸೇರಿಕೊಂಡು ಜೀವನ ಪೂರ್ತಿ ದುಡಿದರು ಕೂಡಾ 1 ಕೋಟಿಗಿಂತ ಹೆಚ್ಚು ಹಣ ಉಳಿಸಲಾಗದು. ಕೇವಲ ಕೆಲವೇ ಮಂದಿಯನ್ನು ಕೋಟಿ, ದಶಕೋಟಿ, ಶತಕೋಟಿಗಳು ಆಕರ್ಷಿಸುತ್ತವೆ: ಅಂತವರ ಸಾಲಿಗೆ ಸಂಕರ್ಶ ಚಂದ್ ಒಂದು ಸೇರ್ಪಡೆ. ಹೌದು, ಹೈದರಾಬಾದಿನ ಈ ಸಂಕರ್ಷ ಕೇವಲ ಶೇರು ಮಾರುಕಟ್ಟೆಯಿಂದ ಬರೋಬ್ಬರಿ 100 ಕೋಟಿ ಸಂಪತ್ತು ಕಳಿಸಿದ್ದಾರೆ !!

ನಮಗೆ ಷೇರುಪೇಟೆಯಲ್ಲಿ ಇಂತಹ ಹಲವು ಉದಾಹರಣೆಗಳು ಕಾಣಸಿಗುತ್ತವೆ. ಕೇವಲ 5,000 ರೂಪಾಯಿಯಿಂದ ಶೇರು ವ್ಯವಹಾರ ಶುರು ಮಾಡಿದ ರಾಕೇಶ್ ಜುಂಜನ್ ವಾಲರ ಸಾಹಸದ ಸಂಪತ್ತಿನ ಕಥೆ ನಿಮಗೆ ಗೊತ್ತೇ ಇದೆ. ರಾಕೇಶ್ ಜುಂಜುನವಾಲ ಥರಾನೇ, ವಿಜಯ್ ಕೇದಿಯಾ, ಸಿಂಘಾನಿಯಾ ಹೀಗೆ ಹಲವು ಜನರು ಷೇರು ಹೂಡಿಕೆಗಳಿಂದಲೇ (Share Investments) ಸಾವಿರಾರು ಕೋಟಿಗಳಿಸಿ ಶೂನ್ಯದಿಂದ ಸಂಪತ್ತು ಗಿಟ್ಟಿಸಿಕೊಂಡಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಹೈದರಾಬಾದಿನ ಸಂಕಷ್ ಚಂದ್ ಎಂಬ 24 ವರ್ಷದ ಹುಡುಗ. ಸಂಕರ್ಷ್ ಚಂದ (Sankarsh Chanda) 23ರ ವಯಸ್ಸಿಗೆ 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಷೇರುಸಂಪತ್ತು ಮತ್ತು ಶೇರು ಸಂಬಂಧಿ ಸಂಪತ್ತು ಕಳಿಸಿ ಗಮನ ಸೆಳೆದಿದ್ದಾರೆ.

17ನೇ ವಯಸ್ಸಿನಲ್ಲಿ 2,000 (Boy Earned 100 Crores) ರೂನಿಂದ ಹೂಡಿಕೆ ಪ್ರಯಾಣ ಆರಂಭಿಸಿದ ಹೈದರಾಬಾದ್ ಮೂಲದ ಸಂಕರ್ಷ್ ಚಂದ್ ಇದಕ್ಕೆ ಮೊದಲು ನವದೆಹಲಿ ಬಳಿಯ ನೋಯ್ಡಾದ ಬೆನೆಟ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಎಂಜಿನಿಯರಿಂಗ್ ಓದುತ್ತಿದ್ದ. ಅತನ ವಯಸ್ಸು ಕೇವಲ 17 ವರ್ಷ. 2,000 ರೂ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಮೊದಲಿಗೆ ಹೂಡಿಕೆ ಮಾಡಿದರು. ಅದಾಗಲೇ ಆತನಿಗೆ ಷೇರುಹೂಡಿಕೆ ಒಂದು ಕನಸಿನ ಉದ್ಯೋಗವಾಗಿತ್ತು. ಹಾಗಾಗಿ ಬಿ ಟೆಕ್ ಅನ್ನು ಅರ್ಧದಲ್ಲಿ ನಿಲ್ಲಿಸಿ ಪೂರ್ತಿ ಶೇರು ಮಾರುಕಟ್ಟೆಗೆ ಇಳಿಯುತ್ತಾನೆ ಹದಿನೇಳರ ಯುವಕ. ನೋಡ ನೋಡುತ್ತಿದ್ದಂತೆ ಆತ ಹೂಡಿದ್ದ 2,000 ಒಂದುವರೆ ಲಕ್ಷಕ್ಕೆ ಬೆಳೆದು ನಿಲ್ಲುತ್ತದೆ. ಮುಂದಿನ ಎರಡು ವರ್ಷದಲ್ಲಿ ಈತ ಹೂಡಿಕೆ ಮಾಡಿದ್ದ ಷೇರುಗಳು ಅದ್ಭುತವಾಗಿ ಬೆಳೆದು 13 ಲಕ್ಷ ರೂ ಬೆಲೆ ಬಾಳುತ್ತವೆ. ಹೀಗೆ ಸಂಕರ್ಷ್ ಚಂದ್ ಅವರ ಷೇರುಹೂಡಿಕೆ ಪ್ರಯಾಣ ಮತ್ತು ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಾ ಸಾಗಿದೆ.

ಕೇವಲ ಷೇರುಪೇಟೆಯಲ್ಲಿ ಮಾತ್ರವೇ ಹೂಡಿಕೆ ಮಾಡಿ ಹಣ ಗಳಿಸುತ್ತಿಲ್ಲ ಸಂಕರ್ಷ್. ಆತನಲಿ ಓರ್ವ ಬಿಸಿನೆಸ್ ಮ್ಯಾನ್ ಕೂಡಾ ಇದ್ದಾನೆ. ಸ್ವಬೋಧ ಇನ್ಫಿನಿಟಿ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಎಂಬ ಹೂಡಿಕಾ ಸಲಹಾ ಸಂಸ್ಥೆಯನ್ನು ಹುಟ್ಟುಹಾಕಿರುವ ಈತ ಮೊದಲ ವರ್ಷದಲ್ಲೇ 12 ಲಕ್ಷ ಆದಾಯ ಗಳಿಸಿ ಎರಡನೇ ಮತ್ತು ಮೂರನೇ ವರ್ಷದಲ್ಲಿ ಕ್ರಮವಾಗಿ 14 ಲಕ್ಷ ಮತ್ತು 32 ಲಕ್ಷ ಗಳಿಸಿದ್ದಾರೆ. ನಾಲ್ಕನೇ ವರ್ಷದಲ್ಲಿ ಅಂದರೆ 2020-21 ರಲ್ಲಿ ಬರೋಬರಿ 40 ಲಕ್ಷ ರೂ ಆದಾಯಗಳಿಸಿ ತಾನೊಬ್ಬ ಉತ್ತಮ ಬ್ಯುಸಿನೆಸ್ ಮ್ಯಾನ್ ಅನ್ನುವುದನ್ನು ಕೂಡ ಸಂಕರ್ಷ ಚಂದ್ ಸಾಬೀತುಪಡಿಸಿದ್ದಾರೆ.

ಸಂಕರ್ಷ್ ಗೆ ಸ್ಫೂರ್ತಿ ಯಾರು ಗೊತ್ತೇ?
ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಮತ್ತು ಸ್ವಂತ ವ್ಯವಹಾರ ಆರಂಭಿಸಲು ಅಮೆರಿಕನ್ ಆರ್ಥಿಕ ತಜ್ಞ ಬೆಂಜಮಿನ್ ಗ್ರಹಾಂ ಆತನ ಪ್ರೇರಣಾ ಶಕ್ತಿ. ಈ ಅಮೆರಿಕನ್ ವ್ಯಕ್ತಿ ಬರೆದ ಪ್ರಬಂಧವೊಂದನ್ನು ಓದಿದ ಬಳಿಕ ಸಂಕರ್ಷ್ ಗೆ ಷೇರು ಮಾರುಕಟ್ಟೆ ಮೇಲೆ ಆಸಕ್ತಿ ಪ್ರಾರಂಭ ಆಗಿದೆ. ಅಂದಿನಿಂದ ಆತನ ಶೇರು ಮಾರುಕಟ್ಟೆಯ ಪ್ರಯಾಣ ಶುರುವಾಗಿದೆ. ಷೇರು ಮತ್ತು ಹಣದ ಬಗ್ಗೆ ಆಸಕ್ತಿ ಇದ್ದವರಿಗೆ ಸಂಕರ್ಷ್ ಚಂದ್ 3 ಪುಸ್ತಕಗಳನ್ನು ಓದುವಂತೆ ಶಿಫಾರಸು ಮಾಡಿದ್ದಾರೆ. ‘ದಿ ಇಂಟೆಲಿಜೆಂಟ್ ಇನ್ವೆಸ್ಟರ್’, ‘ಸೆಕ್ಯೂರಿಟಿ ಅನಾಲಿಸಿಸ್’ ಮತ್ತು ‘ದಿ ಫಸ್ಟ್ ಥ್ರೀ ಮಿನುಟ್ಸ್ ಆಫ್ ದಿ ಯೂನಿವರ್ಸ್’– ಇವೇ ಆ 3 ಹೂಡಿಕೆ ಪುಸ್ತಕಗಳು. ಆತನಲ್ಲಿ ಒಬ್ಬ ಬರಹಗಾರ ಕೂಡ ಇದ್ದಾನೆ.
ಸಂಕರ್ಷ್ ಚಂದ್ ಕೇವಲ ಹೂಡಿಕೆ ಮತ್ತು ವ್ಯವಹಾರಕ್ಕೆ ಸೀಮಿತರಾದವರಲ್ಲ. 2016 ರಲ್ಲೇ ಪುಸ್ತಕವೊಂದನ್ನು ಬರೆದ ಅಪ್ಪಟ ಪ್ರತಿಭೆ ಚಂದ್. ‘ಫೈನಾನ್ಷಿಯಲ್ ನಿರ್ವಾಣ’ ಎಂಬ ಪುಸ್ತಕ ಬರೆದ ಆತ ಹಣ ಹೂಡಿಕೆ ಮತ್ತು ವ್ಯಾಪಾರ ಎರಡೂ ಬೇರೆ ಎಂದು ತೋರಿಸಿಕೊಟ್ಟಿದ್ದಾರೆ.

 

ಇದನ್ನು ಓದಿ: Car-Ricksha accident: ಬೆಳ್ತಂಗಡಿ : ಕಾರು -ರಿಕ್ಷಾ ಅಪಘಾತ ,ಐವರು ಗಂಭೀರ 

Leave A Reply

Your email address will not be published.