Famous Mulbagal dosa: ಕೋಲಾರದ ಫೇಮಸ್ ‘ ಮುಳಬಾಗಿಲು ದೋಸೆ’ ಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಹೆಸರು !

Share the Article

Famous Mulbagal dosa: ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಮೈಸೂರಿನ ಹೋಟೆಲ್‌ವೊಂದರಲ್ಲಿ ಬೆಣ್ಣೆ ಹಚ್ಚಿ ಬಿಸಿ – ಬಿಸಿ ಬೆಣ್ಣೆ ದೋಸೆ ಮಾಡಿದ್ದನ್ನು ನಾವು ಮೊನ್ನೆ ನೋಡಿದ್ದೇವೆ. ಹಾಗೆಯೇ, ನಿನ್ನೆ ಹರ್ಷಿಕಾ ಪೂಣಚ್ಚ ಅವರ ಹಾಟ್ ಹಾಟ್ ಬಜ್ಜಿಗೆ ಕೈ ಹಾಕಲು ನೂಕು ನುಗ್ಗಲು ಆಗಿದನ್ನೂ ನಾವು ಗಮನಿಸಿದ್ದೇವೆ. ಇದರ ಜೊತೆಗೆ ಈಗ ಚುನಾವಣೆಗೆ ಮುಳಬಾಗಿಲು ದೋಸೆ ಎಂಟ್ರಿ ಕೊಟ್ಟಿದೆ ನೋಡಿ ! ಅದೇನಪ್ಪಾ ಅಂತ ತಿಲ್ಕೊಳ್ಳೋ ಇಂಟರೆಸ್ಟ್ ಇದ್ರೆ ನಮ್ಮ ಈ ವರದಿ ಓದಿ.

ಕಳೆದ 30 ವರ್ಷಗಳಿಂದ ಮುಳಗಾಗಿಲು ದೋಸೆ ಬಿಸಿನೆಸ್ ಜೋರಾಗಿ ನಡಿತಾ ಬರ್ತಿದೆ. ಮುಳಬಾಗಿಲು ದೋಸೆ ! ಇದರ ಬಗ್ಗೆ ಕೇಳದವರಿಲ್ಲ. ಬಿಸಿ – ಬಿಸಿಯಾಗಿ ದೋಸೆ ಹಾಕಿ, ಅದರ. ಮೇಲೊಂದು ಬೆಣ್ಣೆ ಮುದ್ದೆ ಬಿಸಾಕಿ ಮಾಡುವ ಈ ಮುಳಬಾಗಿಲಿನ ದೋಸೆಯ ಸ್ಪೆಷಾಲಿಟಿ ನಿಮಗೆ ಗೊತ್ತಿರಬಹುದು. ಪೇಡದಿಂದ ಹೇಗೆ ಧಾರವಾಡ ಇದೀಗ ಫೇಮಸ್ ಆಗಿದೆಯೋ, ಅದೇ ರೀತಿ ಮುಳಬಾಗಿಲು ಫೇಮಸ್ ಆಗಲು ಇದೇ ದೋಸೇನೆ ಕಾರಣ ನೋಡಿ. ಈಗ ಮುಳಬಾಗಿಲು ದೋಸೆಯ ಮೇಲೆ ನರೇಂದ್ರ ಮೋದಿಯವರ ಹೆಸರು ಪ್ರಿಂಟ್ ಆಗಿದೆ. ಇಲ್ಲಿದೆ ನೋಡಿ ಡೀಟೈಲ್ಸ್!

ಪ್ರಧಾನಿ ನರೇಂದ್ರ ಮೋದಿ ಸಹ ಕೋಲಾರದಲ್ಲಿ ಮಾಡಿದ ಭಾಷಣದಲ್ಲಿ ಎಂದಿನಂತೆ ಕನ್ನಡ ಭಾಷೆಯನ್ನು ಮಾತನಾಡಿ ‘ಚಿನ್ನದ ನಾಡಿನ ಜನತೆಗೆ ನನ್ನ ನಮಸ್ಕಾರಗಳು’ ಎಂದು ಮನಮುಟ್ಟುವಂತೆ ಆಡಿದ ಈ ಮಾತು ಜನರ ಮನಸ್ಸನ್ನು ಸೆಳೆದುಬಿಟ್ಟಿದೆ. ಮಾತನ್ನು ಮುಂದುವರಿಸುತ್ತಾ ಮುಳಬಾಗಿಲು ದೋಸೆಯ (Famous Mulbagal dosa) ತನ್ನ ಅಭಿರುಚಿಯನ್ನು ಜನರ ಮುಂದಿಟ್ಟಿದ್ದಾರೆ.

‘ ಕೋಲಾರದ ಮುಳಬಾಗಿಲು ದೋಸೆಯ ಕಂಪು ಪಕ್ಕದ ರಾಜ್ಯಗಳಿಗೂ ಹರಡಲಿದೆ. ಹೀಗೆ ಒಂದೊಂದು ರಾಜ್ಯಗಳಿಗೂ ಹರಡಿ ಅದರ ರುಚಿ ಇನ್ನಷ್ಟು ಹೆಚ್ಚಾಗಲಿ. ಅದನ್ನು ಇನ್ನೂ ಕೆಲವರು ಸವಿಯುವಂತೆ ಆಗಲಿ ‘ ಎಂದು ನಗುತ್ತಲೇ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಇದೀಗ ಪ್ರಧಾನಿ ಆಡಿದ ಈ ಮುಳಬಾಗಿಲು ದೋಸೆಯ ಹೆಸರು ಸಿಕ್ಕಾಪಟ್ಟೆ ವೈರಲ್ ಆಗುವಂತೆ ಮಾಡಿದ್ದಾರೆ. ಸದ್ಯ ಇದೀಗ ಮುಳಬಾಗಿಲು ಹೋಟೆಲ್ ನ ಮಸಾಲೆ ದೋಸೆ ವ್ಯಾಪಾರಿಗಳು ಸಿಕ್ಕಾಪಟ್ಟೆ ದಿಲ್ ಖುಷ್ ಆಗಿದ್ದಾರೆ. ದೋಸೆಯ ವ್ಯಾಪಾರಕ್ಕೆ ಖುದ್ದು ಪ್ರಧಾನಿ ಮೋದಿ ಇಳಿದರೆ ಖುಷಿ ಆಗದೆ ಇರುತ್ತಾ, ನೀವೇ ಹೇಳಿ ?

 

ಇದನ್ನು ಓದಿ: Pakistan: ಹಲ್ಲಿಗಳ ಬಾಲಕ್ಕಿದೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ! ವಯಾಗ್ರ ನಿಷೇದದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಜೋರಾಯ್ತು ಹಲ್ಲಿ ತೈಲದ ಬೇಡಿಕೆ! 

Leave A Reply