Rajinikanth: ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ ಸೂಪರ್ ಸ್ಟಾರ್ ರಜನಿಕಾಂತ್ !
Rajinikanth : ‘ತಲೈವಾ’ ರಜನಿಕಾಂತ್ (Rajinikanth) ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ಹಲವು ಸಿನಿಮಾಗಳ ಮೂಲಕ ಜನರನ್ನು ರಂಜಿಸಿರುವ ನಟ ಇತ್ತೀಚೆಗೆ ಫ್ಲಾಪ್ ಸಿನಿಮಾ ನೀಡುತ್ತಿದ್ದಾರೆ. ಹೌದು, 2010ರಲ್ಲಿ ತೆರೆಕಂಡ ‘ರೋಬೋ’ ನಂತರ ರಜನಿಕಾಂತ್ ಅವರ ವೃತ್ತಿಜೀವನದಲ್ಲಿ ಆ ಮಟ್ಟದ ಹಿಟ್ ಆಗಿಲ್ಲ.
ಈ ನಡುವೆ ‘ಕಬಾಲಿ’ (kabali) ಮತ್ತು ‘2.0 ಚಿತ್ರಗಳು ಒಳ್ಳೆಯ ಹೈಪ್‌ನೊಂದಿಗೆ ಬಂದರೂ ಪ್ರೇಕ್ಷಕರನ್ನು ಅಷ್ಟಾಗಿ ಆಕರ್ಷಿಸಲಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ರಜನಿಕಾಂತ್ ಇದೀಗ ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ್ದಾರೆ. ಯಾವುದು ಆ ನಗರ?
ವಿಜಯವಾಡದಲ್ಲಿ ನಂದಮೂರಿ ತಾರಕ ರಾಮರಾವ್ ಅವರ ಶತಮಾನೋತ್ಸವ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೂಪರ್ ಸ್ಟಾರ್ ರಜನಿಕಾಂತ್ ಆಗಮಿಸಿದ್ದರು. ಈ ವೇಳೆ ರಜನಿಕಾಂತ್ ಅವರು ಹೈದರಾಬಾದ್ ನಗರದ ಬಗ್ಗೆ ಸಾಕಷ್ಟು ಮಾತನಾಡಿದ್ದು, 22 ವರ್ಷಗಳ ನಂತರ ಇತ್ತೀಚೆಗೆ ಶೂಟಿಂಗ್ಗಾಗಿ ಹೈದರಾಬಾದ್ಗೆ ಬಂದಾಗ, ನಾನು ಭಾರತದಲ್ಲಿದ್ದೀನಾ? ಅಥವಾ ನ್ಯೂಯಾರ್ಕ್‌ನಲ್ಲಿದ್ದೀನಾ?
ಎಂಬ ಗೊಂದಲ ಉಂಟಾಯಿತು ಎಂದು ಹೇಳಿದರು.
“ಜುಬಿಲಿ ಹಿಲ್ಸ್ ಮತ್ತು ಬಂಜಾರಾ ಹಿಲ್ಸ್ ಪ್ರದೇಶಗಳು ತುಂಬಾನೆ ಅಭಿವೃದ್ಧಿಯಾಗಿದೆ. ಇದೀಗ ಹೈದರಾಬಾದ್ (Hyderabad) ಹೈ-ಟೆಕ್ ಸಿಟಿಯಾಗಿ ಮಾರ್ಪಟ್ಟಿದೆ. ಬಿಲ್ಗೇಟ್ಸ್ನಂತಹ (billgets) ಐಟಿ ದಿಗ್ಗಜರು ಇಲ್ಲಿಗೆ ಆಗಮಿಸಿ, ಕಂಪನಿಯನ್ನು ಶುರು ಮಾಡಿದ್ದಾರೆ. ಈ ನಗರದ ಅಭಿವೃದ್ಧಿಗೆ ಕಾರಣ ಸಿಎಂ ಚಂದ್ರಬಾಬು ನಾಯ್ಡು ಅವರು. ಈ ನಗರವನ್ನು ನ್ಯೂಯಾರ್ಕ್ (New York) ನಗರಕ್ಕೆ ಸಮನಾಗಿ ನಿರ್ಮಾಣ ಮಾಡಲು ಚಂದ್ರಬಾಬು ಸಾಕಷ್ಟು ಶ್ರಮವಹಿಸಿದ್ದಾರೆ. ಇಂದು ಲಕ್ಷಾಂತರ ತೆಲುಗು ಜನರು ಐಟಿ ವಲಯದಲ್ಲಿ ಕೆಲಸ ಮಾಡಿ, ಐಷಾರಾಮಿಯಾಗಿ ಜೀವನ ಸಾಗಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಚಂದ್ರಬಾಬು. ಚಂದ್ರಬಾಬು ಅವರ ವಿಷನ್ 2047 ಜಾರಿಗೆ ಬಂದರೆ ರಾಜ್ಯ ದೇಶದಲ್ಲಿಯೇ ಅಗ್ರಸ್ಥಾನದಲ್ಲಿರಲಿದೆ. ಅವರ ಯೋಜನೆಗಳು ಜಾರಿಗೆ ತರಲು ದೇವರು ಕೂಡ ಬಯಸಿದ್ದಾನೆ ” ಎಂದು ಹೇಳಿದರು.