

Harshika Poonacha:ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಹೊಟೇಲ್ ಮತ್ತು ತಿನಿಸು ಅಂಗಡಿಗಳ ಪಾಲು ದೊಡ್ಡದಿದೆ. ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರು ಮತ್ತು ನಾಯಕರು ದನಿವಾರಿಸಿಕೊಳ್ಳುವುದು ಇಂತಹ ಹೋಟೆಲ್ ಗಳ ಮುಂದೆ, ಟೀ ಕಾಫಿ ಇರುತ್ತಾ ತಮ್ಮ ಇಷ್ಟದ ತಿಂಡಿ ತಿನಿಸುಗಳನ್ನು ಸವಿಯುತ್ತಾ. ಮೊನ್ನೆ ಮೈಸೂರಿನ 80 ವರ್ಷ ಪುರಾತನ ಮೈಲಾರಿ ದೋಸೆ ಹೋಟೆಲ್ಗೆ ಭೇಟಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಕೈಯ್ಯಾರೆ ಕಾವಲಿ ಮೇಲೆ ದೋಸೆ ಹುಯ್ದು ಗಮನಸೆಳೆದಿದ್ದರು. ಅವರು ಅಂದು ಹಾಕಿದ ದೋಸೆ ಸೀದು ಕಪ್ಪಗೆ ಆಗಿತ್ತು ಅನ್ನೋದು ಬೇರೆ ವಿಚಾರ. ಅದು ಬಿಟ್ರೆ ಆ ದೋಸೆ ನ್ಯೂಸ್ ಎಲ್ಲಾ ಕಡೆ ಪ್ರಚಾರ ಆಗಿತ್ತು.
ಇದೀಗ ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚಳ(Harshika Poonacha) ಹಾಟ್ ಹಾಟ್ ಬಾಜ್ಜಿಗೆ ಜನ ಬಾಯ್ ಬಾಯ್ ಬಿಟ್ಟಿದ್ದಾರೆ. ಆಕೆ ಒಂದು ಮೆಣಸಿನಕಾಯಿ ಬಜ್ಜಿ ಹಾಕಿ ಜನರಿಗೆ ಹಂಚಿ ಗಮನಸೆಳೆದಿದ್ದಾರೆ. ಚುನಾವಣಾ ಪ್ರಚಾರದ ವೇಳೆ ನಟಿ ಹರ್ಷಿಕಾ ಪೂಣಚ್ಚ ಹೋಟೆಲ್ ಒಂದರಲ್ಲಿ ಮೆಣಸಿನಕಾಯಿ ಬಜ್ಜಿ ಹಾಕಿ ಗಮನಸೆಳೆದರು.

ಆಕೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಪ್ರಚಾರದ ವೇಳೆ ಹೋಟೆಲ್ನಲ್ಲಿ ಗರಿಗರಿ ಮಿರ್ಚಿ ಬಜ್ಜಿ ಮಾಡಿದರು. ಚುನಾವಣೆ ಪ್ರಚಾರ ಮಾಡಲು ಚಿಕ್ಕಬಳ್ಳಾಫುರ ತಾಲೂಕಿನ ನಂದಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಹೋಟೆಲ್ ನಲ್ಲಿ ಎಣ್ಣೆಗೆ ಬಜ್ಜಿ ಬಿಟ್ಟಿದ್ದಾರೆ ಹರ್ಷಿಕಾ.

ಹರ್ಶಿಕಾಳ ಹಾಟ್ ಬಜ್ಜಿ ಸವಿಯಲು ಜನ ತಾಮುಂದು ನಾ ಮುಂದು ಎಂದು ನುಗ್ಗಾಡಿದ್ದಾರೆ. ಅಲ್ಲಿ ಬಜ್ಜಿ ಕರಿದು ನೆರೆದಿದ್ದವರಿಗೆ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ ಹರ್ಷಿಕಾ. ಹರ್ಷಿಕಾ ಪೂಣಚ್ಚ ಅವರ ಖಾರದ ಮೆಣಸಿನ ಕಾಯಿ ಹಾಟ್ ಬಜ್ಜೀಗೆ ಭಾರೀ ಬೇಡಿಕೆ ಕಂಡು ಬಂತು. ಅವರು ಮೆಣಸಿನಕಾಯಿ ಬಜ್ಜಿ ಹಾಕಿ ಜನರಿಗೆ ಹಂಚಿ ಖುಷಿ ವ್ಯಕ್ತಪಡಿಸಿದರು. ಇದೇ ವೇಳೆ ತಾವು ಮಾಡಿದ ಬಜ್ಜಿಯನ್ನು ಮಗುವಿಗೂ ನೀಡಿದರು.
ಇದನ್ನೂ ಓದಿ: ಕೋತಿಯ ಚೇಷ್ಟೆಗೆ ಯುವತಿ ತಬ್ಬಿಬ್ಬು, ರಸಿಕತನ ಯಾರಪ್ಪನ ಸೊತ್ತೂ ಅಲ್ಲ ಅಂತಾ ಕೋತಿ ?!













