Home Breaking Entertainment News Kannada Actress Sanya Iyer: ಸಾನ್ಯಾ ಅಯ್ಯರ್ ಹಾಟ್ ಫೋಟೋ, ಸೆಲೆಬ್ರಿಟಿ ಫೋಟೋ ಗ್ರಾಫರ್ ಡಬು ರತ್ನಾನಿ...

Actress Sanya Iyer: ಸಾನ್ಯಾ ಅಯ್ಯರ್ ಹಾಟ್ ಫೋಟೋ, ಸೆಲೆಬ್ರಿಟಿ ಫೋಟೋ ಗ್ರಾಫರ್ ಡಬು ರತ್ನಾನಿ ಪಿಕ್ ನೋಡಿ BB ವಿನ್ನರ್ ರೂಪೇಶ್ ಶೆಟ್ಟಿ ಏನಂದ್ರು ?

Actress Sanya Iyer
Image source: Instagram

Hindu neighbor gifts plot of land

Hindu neighbour gifts land to Muslim journalist

Actress Sanya Iyer: ಪುಟ್ಟಗೌರಿ (Putta gowri) ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಾನ್ಯ ಅಯ್ಯರ್ (Actress Sanya Iyer) ತಮ್ಮ ಪಾತ್ರದ ಮೂಲಕ ಅತಿ ಕಿರಿವಯಸ್ಸಿನಲ್ಲೇ ಜನಮನ ಗೆದ್ದಿದ್ದಾರೆ. ನಂತರ ಬಿಗ್ ಬಾಸ್ (Bigg boss) ಮನೆಗೆ ಎಂಟ್ರಿ ಕೊಟ್ಟು ಇನ್ನಷ್ಟು ಜನರನ್ನು ಸೆಳೆದಿರುವ ನಟಿ ಇದೀಗ ಸಖತ್ ಸುದ್ದಿಯಲ್ಲಿದ್ದಾರೆ.

ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಇದೀಗ ತಮ್ಮ ಗ್ಲಾಮರಸ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್‌ ಡಬು ರತ್ನಾನಿ (Dabboo Ratnani) ಬಳಿ ಫೋಟೋಶೂಟ್‌ ಮಾಡಿಸಿದ್ದು, ನೆಟ್ಟಿಗರು ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಸಾನ್ಯಾ ಅಯ್ಯರ್ ಹಾಟ್ ಫೋಟೋ ನೋಡಿ BB ವಿನ್ನರ್ ರೂಪೇಶ್ ಶೆಟ್ಟಿ ಏನಂದ್ರು ಗೊತ್ತಾ ?

ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್‌ ಡಬು ರತ್ನಾನಿ ಸಾನ್ಯಾ ಅಯ್ಯರ್ ಫೋಟೋ ಕ್ಲಿಕ್ ಮಾಡಿದ್ದಾರೆ. ನಟಿ ಸಾನ್ಯ
ಬಣ್ಣದ ಶಾರ್ಟ್‌ ಸ್ಕರ್ಟ್‌ ಧರಿಸಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದ ಬಿಗ್‌ಬಾಸ್‌ ವಿನ್ನರ್ ರೂಪೇಶ್‌ ಶೆಟ್ಟಿ (Roopesh shetty) ‘ಚೆನ್ನಾಗಿದೆ ಸ್ಯಾನ್’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಸೋಷಿಯಲ್ಸ್ ಸಾನ್ಯ ಅಯ್ಯರ್ ಸೌಂದರ್ಯವನ್ನು ತಮ್ಮದೇ ರೀತಿಯಲ್ಲಿ ಹೊಗಳಿದ್ದಾರೆ. ಕೆಲವರಂತೂ I m already Deathed Chinna ಅಂತ ಕೆಜಿಎಫ್ ಡೈಲಾಗ್ (KGF dialogue) ಹೊಡೆದು ಖುಷಿ ಹಂಚಿಕೊಂಡಿದ್ದಾರೆ.

ಸದ್ಯ ಬಾಲಿವುಡ್‌ನ ಡಬ್ಬೂ ರತ್ನಾನಿ ಕಡೆಯಿಂದಲೇ ಸಾನ್ಯ ಅಯ್ಯರ್ ಫೋಟೋ ಶೂಟ್ ಮಾಡಿಸಿರುವುದು ವಿಶೇಷ ಅನಿಸಿದ್ದು, ಈ ಮೂಲಕ ನಟಿ ಬಾಲಿವುಡ್‌ಗೆ ಎಂಟ್ರಿ ಕೊಡೋ ಪ್ಲಾನ್ ಏನಾದರೂ ಹಾಕಿದ್ದಾರಾ ಅನ್ನೋದು ಪ್ರಶ್ನಾರ್ಥಕ ಚಿಹ್ನೆ (?) ಆಗಿದೆ. ಆದರೆ ಫೋಟೋ ಮಾತ್ರ ಬಾಲಿವುಡ್ ರೇಂಜ್‌ಗೇನೆ ಇದೆ ಎನ್ನಬಹುದು.

ಇದನ್ನೂ ಓದಿ:Rashmika Mandanna: ಬಾಹುಬಲಿಯ ಅವಂತಿಕಾ ಥರದ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ಕುದುರೆ ಏರಿ ನಡೆದಿದೆ ಭಾರೀ ತಯಾರಿ !