Muslim couples: ಮುಸ್ಲಿಂ ದಂಪತಿಗಳು ಖುಷಿ ಪಡಲು ಇದೆ ವಿಶೇಷ ಕಾರಣ, ಮನೆ ಬಾಗಿಲಿಗೇ ತಲುಪಿಸಲು ಆಗಿದೆ ಹೊಸ ವ್ಯವಸ್ಥೆ !

Muslim Couples: ಮುಸ್ಲಿಂ ದಂಪತಿಗಳಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು (Karnataka Government) ಮುಸ್ಲಿಂ ದಂಪತಿಗಳಿಗೆ (Muslim Couples) ವಕ್ಫ್‌ನಿಂದಲೇ ವಿವಾಹ ಪ್ರಮಾಣ ಪತ್ರ ನೀಡುವುದಕ್ಕೆ ಅಧಿಕೃತ ಆದೇಶ ಹೊರಡಿಸಿದ್ದು, ಹೀಗಾಗಿ, ಪ್ರತಿ ಜಿಲ್ಲಾ ವಕ್ಫ್‌ ಕಚೇರಿಗಳಲ್ಲಿ ಕೂಡ ಮದುವೆ ಪ್ರಮಾಣ ಪತ್ರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ವಕ್ಫ್‌ ಇಲಾಖೆ (Waqf Board Of Dakshina Kannada) ಇದರಲ್ಲಿ ಮತ್ತಷ್ಟು ಮುಂದೆ ಹೆಜ್ಜೆ ಇರಿಸಲು ಮುಂದಾಗಿದೆ. ಅಂಚೆ ಇಲಾಖೆಯ ಜೊತೆಗಿನ ಒಡಂಬಡಿಕೆಯಿಂದ ಸರಳ ಹಾಗೂ ಸುಲಭವಾಗಿ ಮನೆಗೆ ಮದುವೆ ಪ್ರಮಾಣ ಪತ್ರ ತಲುಪಿಸುವ ಸೇವೆ ನೀಡಲು ಮುಂದಾಗಿದೆ.

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರು ಅಂಚೆ ವಿಭಾಗ ಹೊಸ ಸೇವೆ ನೀಡಲು ಮುಂದಾಗಿದ್ದು, ಇದೀಗ ಮುಸ್ಲಿಂ ದಂಪತಿಗಳ ಮ್ಯಾರೇಜ್‌ ಸರ್ಟಿಫಿಕೇಟ್‌ ಅನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲು ಮುಂದಾಗಿದೆ.ಮ್ಯಾರೇಜ್‌ ಸರ್ಟಿಫಿಕೇಟ್ ಸ್ಪೀಡ್ ಪೋಸ್ಟ್ನಲ್ಲಿ ನೀಡಲು ಮಂಗಳೂರು ಅಂಚೆ ಇಲಾಖೆ ಸಿದ್ಧತೆ ನಡೆಸಿದ್ದು, ಸಾಮಾನ್ಯವಾಗಿ ಈ ಅರ್ಜಿ ಸಲ್ಲಿಸಿದ ಹದಿನೈದು ದಿನಗಳ ಒಳಗಾಗಿ ಮದುವೆ ಪ್ರಮಾಣ ಪತ್ರ ನಿಮ್ಮ ಮನೆಗೆ ತಲುಪಲಿದೆ. ಸುಲಭವಾಗಿ ಮನೆ ಬಾಗಿಲಿಗೆ ಮದುವೆ ಪ್ರಮಾಣ ಪತ್ರ ತರಿಸಿಕೊಳ್ಳಲು ಇಚ್ಛಿಸುವ ಮುಸ್ಲಿಂ ದಂಪತಿಗಳು ಮೊದಲಿಗೆ ನಿಯಮಾನುಸಾರ ಸೂಕ್ತ ದಾಖಲಾತಿಗಳ ಜೊತೆಗೆ ಜಿಲ್ಲಾ ವಕ್ಫ್‌ ಇಲಾಖೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಮುಸ್ಲಿಂ ದಂಪತಿಗಳ ಮದುವೆ ಪ್ರಮಾಣ ಪತ್ರವನ್ನು ಪಡೆಯಲು ಆಗಾಗ ದ.ಕ. ಜಿಲ್ಲಾ ವಕ್ಫ್ ಕಛೇರಿಗೆ ಭೇಟಿ ನೀಡಬೇಕಾದ ಅವಶ್ಯಕತೆಯಿಲ್ಲ. ಅಷ್ಟೇ ಅಲ್ಲದೆ, ಪ್ರಮಾಣ ಪತ್ರವನ್ನು ಒಳಗೊಂಡ ಸ್ಪೀಡ್ ಪೋಸ್ಟ್ ಬಟವಾಡೆಯ ಯಾವ ಹಂತದಲ್ಲಿದೆ ಎಂಬುದನ್ನು www.indiapost.gov.in ನಲ್ಲಿ ಟ್ರ್ಯಾಕ್ ಮಾಡಿ ತಿಳಿದುಕೊಳ್ಳಬಹುದು. ಅರ್ಜಿದಾರರಿಗೆ ರವಾನೆಯಿಂದ ಬಟವಾಡೆವರೆಗೆ ವಿವಿಧ ಹಂತಗಳಲ್ಲಿ SMS ಮೂಲಕ ಮಾಹಿತಿ ನೀಡಲಾಗುತ್ತದೆ.

ಅಂಚೆ ಇಲಾಖೆ ಹಾಗೂ ವಕ್ಫ್‌ ಒಡಂಬಡಿಕೆಯಿಂದ ಅಂಚೆ ಸೇವೆ ಮೂಲಕ ಸ್ಪೀಡ್‌ ಪೋಸ್ಟ್​ನಲ್ಲಿ ಮುಸ್ಲಿಂ ದಂಪತಿಗಳ ಮದುವೆ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಈ ಸೇವೆಯನ್ನು ಪಡೆಯಲು ದ. ಕ ಜಿಲ್ಲಾ ವಕ್ಫ್ ಕಛೇರಿ ಕೌಂಟರ್‌ ನಲ್ಲಿ ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿಲ್ಲ. ಸ್ಪೀಡ್ ಪೋಸ್ಟ್ ವಿತರಣೆಯ ಸಂದರ್ಭ ಪೋಸ್ಟ್ ಮ್ಯಾನ್ ಮೂಲಕ ರೂ.80/- ನಿಗದಿತ ಶುಲ್ಕವನ್ನು ಅಂಚೆ ಕಚೇರಿಗೆ ಪಾವತಿಸಬೇಕಾಗುತ್ತದೆ.ಅರ್ಜಿದಾರರು ಒಂದೇ ಬಾರಿ ವಕ್ಫ್‌ ಕಚೇರಿಗೆ ಭೇಟಿ ನೀಡಿದರೆ ಸಾಕಾಗುತ್ತದೆ. ಅರ್ಜಿದಾರರು ಅರ್ಜಿ ಸಲ್ಲಿಸುವ ಸಂದರ್ಭ ಹೆಚ್ಚು ಆಯ್ಕೆ ಲಭ್ಯವಾಗಲಿದ್ದು, ಇದೊಂದು ಐಚ್ಛಿಕ ಆಯ್ಕೆ ಪ್ರಕ್ರಿಯೆಯಾಗಿದ್ದು, ಅರ್ಜಿ ಸಲ್ಲಿಸುವವರು ಸ್ಪೀಡ್‌ ಪೋಸ್ಟ್‌ ಮೂಲಕ ಮದುವೆ ಪ್ರಮಾಣ ಪತ್ರವನ್ನು ಸ್ವೀಕರಿಸಲು ಇಷ್ಟಪಡುವುದಾಗಿ ಅರ್ಜಿ ತುಂಬಬೇಕಾಗುತ್ತದೆ.

ಇದರ ಜೊತೆಗೆ ಪೋಸ್ಟ್‌ ಬಟವಾಡೆ ಮಾಡುವ ಸಮಯದಲ್ಲಿ 80 ರೂ. ನೀಡಲು ಸಮ್ಮತಿ ಸೂಚಿಸಿರುವುದನ್ನು ಅರ್ಜಿಯಲ್ಲಿ ತುಂಬಬೇಕಾಗುತ್ತದೆ. ಇದರಿಂದ ಪದೇ ಪದೇ ಅಂಚೆ ಕಚೇರಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗದು.ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಕಛೇರಿಗೆ ಅರ್ಜಿ‍ ಸಲ್ಲಿಸಿದ 15 ದಿನಗಳ ಒಳಗೆ ಪ್ರಮಾಣ ಪತ್ರವು ಮುದ್ರಣವಾಗಿ, 2 ರಿಂದ 5 ದಿನಗಳ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈ ಪ್ರಮಾಣ ಪತ್ರವನ್ನು ಭಾರತದಾತ್ಯಂತ ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ತಲುಪಿಸಲು ಅವಕಾಶವಿದೆ. ಅರ್ಜಿದಾರರ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಬಟವಾಡೆ ಪಡೆದುಕೊಳ್ಳಬಹುದು. ಅರ್ಜಿದಾರರು ಪ್ರಮಾಣ ಪತ್ರವನ್ನು ಮನೆಯ ವಿಳಾಸದಲ್ಲಿ ಇಲ್ಲವೇ ಕಛೇರಿಯ ವಿಳಾಸದಲ್ಲಿ ಕೂಡ ಪಡೆಯಬಹುದು.

ಇದನ್ನೂ ಓದಿ: ‘ ಅದು ‘ ನಿಮ್ಗೆ ಬೇಕಾ ? ಇನ್ಮುಂದೆ ಮನೆಗೇ ಅಥವಾ ನೀವಿರೋ ಹೊಟೇಲ್’ಗೇ ಬರತ್ತೆ !

Leave A Reply

Your email address will not be published.