Home National Government Portal: ಇನ್ನು ಸಿಗಲಿದೆ ಈ ಎಲ್ಲಾ ದಾಖಲೆ ಒಂದೇ ವೆಬ್‌ಸೈಟ್‌ನಲ್ಲಿ! ಯಾವೆಲ್ಲ ದಾಖಲೆ ಸಿಗಲಿದೆ...

Government Portal: ಇನ್ನು ಸಿಗಲಿದೆ ಈ ಎಲ್ಲಾ ದಾಖಲೆ ಒಂದೇ ವೆಬ್‌ಸೈಟ್‌ನಲ್ಲಿ! ಯಾವೆಲ್ಲ ದಾಖಲೆ ಸಿಗಲಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ!

Government Portal
Image source : IIFL Insurance

Hindu neighbor gifts plot of land

Hindu neighbour gifts land to Muslim journalist

Government Portal: ಹಳ್ಳಿಗಳಲ್ಲಿ ಅಥವಾ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರು ಅನೇಕ ಬಾರಿ ಸರ್ಕಾರಿ ಕಚೇರಿ ಸುತ್ತುವ ಮೂಲಕ ತೊಂದರೆ ಅನುಭವಿಸುತ್ತಾರೆ. ಈ ಕಾರಣದಿಂದ ಹಲವಾರು ಯೋಜನೆಗಳ ಪ್ರಯೋಜನ ಪಡೆಯಲು ವಂಚಿತರಾಗುತ್ತಾರೆ. ಇದೇ ಉದ್ದೇಶದಿಂದ ಸರ್ಕಾರದ ಯೋಜನೆಗಳು ಮತ್ತು ಸರ್ಕಾರಿ ಕೆಲಸಗಳ ಲಾಭವನ್ನು ಜನರಿಗೆ ತಲುಪಿಸಲು ಆನ್‌ಲೈನ್ ವೇದಿಕೆ ನಿರ್ಮಿಸಿದೆ. ಇನ್ನುಮುಂದೆ ನಾಗರೀಕರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡದೆಯೇ ಸರ್ಕಾರಿ ಸೇವೆಗಳ ಪ್ರಯೋಜನಗಳನ್ನು ಇದೀಗ ಒಂದೇ ವೆಬ್‌ಸೈಟ್‍ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಹೌದು, ಕೇಂದ್ರ ಸರ್ಕಾರವು ಭಾರತದ ನಾಗರಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು,
ಈ ಯೋಜನೆಗಳ ಪ್ರಯೋಜನಗಳನ್ನು ಸುಲಭವಾಗಿ ಪಡೆದುಕೊಳ್ಳಲು ವೆಬ್‍ಸೈಟ್ ರೂಪಿಸಿದೆ. ಈ ಒಂದೇ ವೆಬ್‍ಸೈಟ್‍ನಲ್ಲಿ ನೀವು ಹಲವಾರು ಸೇವೆಗಳನ್ನು ಪೆದುಕೊಳ್ಳಬಹುದು.

ಇದೀಗ services.india.gov.in ವೆಬ್‌ಸೈಟ್‍ನಲ್ಲಿ (Government Portal) ಯಾವುದೇ ನಾಗರಿಕರು ಸರ್ಕಾರದ ಅಗತ್ಯ ಸೇವೆಗಳ ಲಾಭ ಪಡೆಯಬಹುದು. ಇದರಿಂದ ಸರ್ಕಾರಿ ಕೆಲಸವನ್ನು ಸುಲಭಗೊಳಿಸಲು ಮತ್ತು ಎಲ್ಲಾ ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಬಹುದು.

ಈ ವಿಶೇಷ ಯೋಜನೆಗಳ ಲಾಭ ಪಡೆಯಲು ಅದರ ಆನ್‌ಲೈನ್ ಪ್ರಕ್ರಿಯೆಯ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಪೋರ್ಟಲ್‌ನ ಹೆಸರು services.india.gov.in. ಇಲ್ಲಿ ಯಾವುದೇ ನಾಗರಿಕರು ಸರ್ಕಾರದ ಅಗತ್ಯ ಸೇವೆಗಳ ಲಾಭವನ್ನು ಪಡೆಯಬಹುದು.

ನೀವು ಯಾವುದೇ ದಾಖಲೆಗಳ ಲಿಂಕ್ ಮಾಡಲು, ಅಂದರೆ ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್ ಲಿಂಕ್ ಮಾಡಬೇಕೇ? ಜನನ ಪ್ರಮಾಣ ಪಡೆದುಕೊಳ್ಳಬೇಕೆ? ಈ ವೆಬ್‌ಸೈಟ್‍ನಲ್ಲಿ ನೀವು ಎಲ್ಲವನ್ನೂ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ಎಲ್ಲಿಯೂ ಭೇಟಿ ನೀಡಬೇಕಾಗಿಲ್ಲ. ಸರ್ಕಾರಿ ಕಚೇರಿಗೆ ಹೋಗುವ ಅಗತ್ಯವಿಲ್ಲ.

ಈ ಸರ್ಕಾರಿ ಪೋರ್ಟಲ್‌ನಲ್ಲಿ ಹಣಕಾಸು ಸಚಿವಾಲಯದ 121 ಸೇವೆಗಳು, ಶಿಕ್ಷಣ ವಿವಿಧ 46 ಸೇವೆಗಳು, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ 39 ಸೇವೆಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ 38 ಸೇವೆಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ 100 ಸೇವೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 72 ಸೇವೆಗಳು, ವೈಯಕ್ತಿಕ ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ 60 ಸೇವೆಗಳು, ಲಭ್ಯವಿವೆ.

ಈ ಮೇಲಿನ ಎಲ್ಲಾ ಸೇವೆಗಳ ಉಪಯೋಗವನ್ನು ಇನ್ನುಮುಂದೆ ನಾಗರೀಕರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡದೆಯೇ ಸರ್ಕಾರಿ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ: Abhi Cinema : ತಮ್ಮ ಮೊದಲ ಸಿನಿಮಾ ಅಭಿಗೆ ರಮ್ಯಾಗೆ ಪವರ್ ಸ್ಟಾರ್ ಪುನೀತ್ ಜೇಬಿಂದ ತೆಗೆದು ಕೊಟ್ಟ ಸಂಭಾವನೆ ವೈರಲ್!