Sudeep on Geetha Shivaraj Kumar: ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್ ಕುಮಾರ್ ಬಗ್ಗೆ ಹೀಗಂದ್ರಾ ಕಿಚ್ಚ ಸುದೀಪ್ ?!

Share the Article

Sudeep on Geetha Shivaraj-Kumar: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ ಸಿದ್ಧತೆ ಭರದಿಂದ ಸಾಗುತ್ತಿದ್ದು (Karnataka Assembly Elections 2023), ಚುನಾವಣೆ ಪ್ರಚಾರದಲ್ಲಿ ಚಂದನವನದ ಹಲವಾರು ಸೆಲೆಬ್ರಿಟಿಗಳು ತೊಡಗಿಕೊಂಡಿದ್ದಾರೆ.

ಅದರಲ್ಲೂ ಕನ್ನಡ ಸಿನಿಮಾ ರಂಗದಲ್ಲಿ ಗೀತಾ ಶಿವರಾಜ್​ಕುಮಾರ್​ ಮತ್ತು ಕಿಚ್ಚ ಸುದೀಪ್ (Sudeep on Geetha Shivaraj-Kumar) ಅವರಿಗೆ ಹೆಚ್ಚಿನ ಗೌರವ ಇದೆ. ಆದರೆ ರಾಜಕೀಯದಲ್ಲಿ ಅವರಿಬ್ಬರು ಬೇರೆ ಬೇರೆ ಪಕ್ಷಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಈಗಾಗಲೇ ಬಿಜೆಪಿ ಪಕ್ಷದ ಪರವಾಗಿ ಸ್ಟಾರ್‌ ನಟರಾದ ದರ್ಶನ್‌ ಹಾಗೂ ಸುದೀಪ್‌ ಸೇರಿದಂತೆ ಹಲವು ನಾಯಕರು ಚುನಾವಣಾ ಅಖಾಡದಲ್ಲಿ ಪ್ರಚಾರವನ್ನ ನಡೆಸುತ್ತಿದ್ದು, ಇದೀಗ ದೊಡ್ಮನೆ ಕುಟುಂಬದ ಹಿರಿಯ ಸೊಸೆ, ನಟ ಶಿವರಾಜ್‌ ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಸೇರಿರುವ ಮಾಹಿತಿ ದೊರಕಿದೆ.

ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ನಟ ಕಿಚ್ಚ ಸುದೀಪ್, ಗೀತಾಕ್ಕರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಗೀತಕ್ಕ ಕೈಗೊಂಡಿರುವ ನಿರ್ಧಾರದ ಹಿಂದೆ ಒಳ್ಳೆಯ ಆಲೋಚನೆ ಇರುತ್ತದೆ. ಗೀತಕ್ಕರಿಗೆ ಶುಭವಾಗಲಿ ಎಂದು ಶುಭ ಹಾರೈಸಿದ್ದಾರೆ.

“ಸಿನಿಮಾ ರಾಜಕೀಯ ಪ್ರಚಾರದ ನಡುವೆ ವ್ಯತ್ಯಾಸವಿಲ್ಲ. ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ಇದ್ದೇವೆ. ಜನರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇವೆ. ಸದ್ಯ ರಾಜಕೀಯದ ಬಗ್ಗೆ ನಾನು ಮಾತಾನಾಡುವುದಿಲ್ಲ. ನನಗೆ ಸಿನಿಮಾದಲ್ಲಿ ಕೆಲಸ ಮಾಡಲು ಸಾಕಷ್ಟು ಕೆಲಸಗಳಿವೆ” ಎಂದು ಟ್ವಿಟ್ಟರ್ ಮೂಲಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

 

 

ಇದನ್ನು ಓದಿ: Samantha Birthday: ಹಾಟ್‌ ಬೆಡಗಿ ಸಮಂತಾಗೆ ಇಂದು ಕೂಲ್ ಬರ್ತ್ ಡೇ, ಅಬ್ಬಬ್ಬಾ ಈಕೆಗೆ ಇಷ್ಟು ವಯಸ್ಸಾಯ್ತಾ ?

Leave A Reply