Home Breaking Entertainment News Kannada Samantha Birthday: ಹಾಟ್‌ ಬೆಡಗಿ ಸಮಂತಾಗೆ ಇಂದು ಕೂಲ್ ಬರ್ತ್ ಡೇ, ಅಬ್ಬಬ್ಬಾ ಈಕೆಗೆ ಇಷ್ಟು...

Samantha Birthday: ಹಾಟ್‌ ಬೆಡಗಿ ಸಮಂತಾಗೆ ಇಂದು ಕೂಲ್ ಬರ್ತ್ ಡೇ, ಅಬ್ಬಬ್ಬಾ ಈಕೆಗೆ ಇಷ್ಟು ವಯಸ್ಸಾಯ್ತಾ ?

Actress Samantha Birthday

Hindu neighbor gifts plot of land

Hindu neighbour gifts land to Muslim journalist

Actress Samantha Birthday: ಟಾಲಿವುಡ್​ನಲ್ಲಿ (Tollywood) ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದು, ಸಿನಿಮಾ ಮತ್ತು ವೆಬ್​ ಸಿರೀಸ್​ ಲೋಕದಲ್ಲಿ ಕೂಡ ತನ್ನ ಅಸ್ತಿತ್ವ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಸಮಂತಾ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಟಾಲಿವುಡ್ ಬ್ಯೂಟಿ ಕ್ವೀನ್ ಸಮಂತಾಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಟಾಲಿವುಡ್‌ ಹಾಟ್‌ ಬೆಡಗಿ ಸಮಂತಾ ಮೊಟ್ಟ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಶಾಕುಂತಲಂ’ ತೆರೆಗೆ ಅಪ್ಪಳಿಸಿ ಮಕಾಡೆ ಮಲಗಿದ್ದಕ್ಕೆ ಅನೇಕ ಮಂದಿ ಸ್ಯಾಮ್ ಅವರ ಕಾಲೆಳೆದಿದ್ದರು. ಈ ಸಿನಿಮಾ ಅದೇಕೋ ಏನೋ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ.ಇದರ ನಡುವೆ ಹುಟ್ಟುಹಬ್ಬದ (Actress Samantha Birthday)ಸಂಭ್ರಮದಲ್ಲಿರುವ ನಟಿಗೆ ಎಷ್ಟು ವರ್ಷ ತುಂಬಿತು ಗೊತ್ತಾ?

Actress Samantha Birthday
Image Credit Source: ABP News

 

ಟಾಲಿವುಡ್ ಹಾಟ್ ಬೆಡಗಿಯ ಕೂಲ್ ಬರ್ತ್ಡೇಗೆ ಅನೇಕ ಮಂದಿ ಸ್ಟಾರ್ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಸದ್ಯ ಟಾಲಿವುಡ್‌ ಬೆಡಗಿ ಸಮಂತಾ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಬ್ಬಬ್ಬಾ ಇವರಿಗೆ ಇಷ್ಟು ವಯಸ್ಸಾಯ್ತಾ? ಎಂದು ಅಭಿಮಾನಿಗಳ ನಡುವೆ ಸಣ್ಣ ಚರ್ಚೆ ನಡೆಯುತ್ತಿದೆ. ಸಮಂತಾ ಅಭಿಮಾನಿಗಳು(Actress Samantha Fans) ನಟಿಯ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ಸಾಕ್ಷಿ ಎಂಬಂತೆ ಸಮಂತಾ ಬರ್ತ್‌ಡೇಗೆ ಅಭಿಮಾನಿಗಳು ಆಕೆಯ ಹೆಸರಿನ ಗುಡಿ ಕಟ್ಟಿಸಿದ್ದಾರೆ.

ಇತ್ತೀಚೆಗಷ್ಟೇ ಮಯೋಸಿಟಿಸ್ ಎಂಬ ಕಾಯಿಲೆಗೆ ತುತ್ತಾಗಿ ಚೇತರಿಕೆ ಕಾಣುತ್ತಿದ್ದಾರೆ. ನಟಿ ಸಮಂತಾ ಅವರಿಗೆ ಖಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದರು ಕೂಡ ಪದೇ ಪದೇ ಆರೋಗ್ಯ ಕೈ ಕೊಡುತ್ತಿದೆ. ಇದೀಗ, ಮತ್ತೊಮ್ಮೆ ಆರೋಗ್ಯ ಕೈ ಕೊಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದು, ಹುಟ್ಟುಹಬ್ಬದ ಸಂಭ್ರಮದ ನಡುವೆಯೂ ನಟಿಯ ಆರೋಗ್ಯ ಕೊಟ್ಟಿರುವುದರಿಂದ ಸಮಂತಾ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿದೆ. ನಟಿ ಸಮಂತಾ ನಟನೆಯ ಜೊತೆಗೆ ಸಾಮಾಜಿಕ ಕಳಕಳಿಯ ಮೂಲಕ ಸಾಮಾಜಿಕ ಜನಪರ ಸೇವೆಗಳನ್ನು ಮಾಡುವುದರಿಂದ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಸದ್ಯ ಸ್ಯಾಮ್ ಅಭಿಮಾನಿ ಸಂದೀಪ್‌ ಎಂಬ ಯುವಕನೊಬ್ಬ ಗುಡಿ ಕಟ್ಟಿಸಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ನಟಿಗೆ ಹೆಚ್ಚಿನ ಯಶಸ್ಸು, ಉತ್ತಮ ಆರೋಗ್ಯ ದೇವರು ಕರುಣಿಸಲಿ ಎಂದು ಅಭಿಮಾನಿಗಳು ಅಶಿಸುತ್ತಿದ್ದಾರೆ.

 

ಇದನ್ನು ಓದಿ: Mosquito Bite: ಸೊಳ್ಳೆ ಕಚ್ಚಿದರೆ ತುರಿಕೆ, ದಪ್ಪ ಏಕೆ ಆಗುತ್ತದೆ? ಇದರ ಕಾರಣ ಏನು ಗೊತ್ತೇ!