Raghavendra Stores: ರಾಘವೇಂದ್ರ ಸ್ಟೋರ್ಸ್ ವಿಮರ್ಶೆ – ಚಿತ್ರ ನೋಡ್ಬೇಕಾ ಬೇಡ್ವಾ, ಕಂಪ್ಲೀಟ್ ರಿಪೋರ್ಟ್ !
Raghavendra Stores: ನವರಸ ನಾಯಕ ಜಗ್ಗೇಶ್ (Actor Jaggesh) ಅಭಿನಯದ ‘ರಾಘವೇಂದ್ರ ಸ್ಟೋರ್ಸ್(Raghavendra Stores) ಸಿನಿಮಾ ಜನರಿಗೆ ಮನರಂಜನೆಯ ರಸದೌತಣ ಬಡಿಸಲು ರೆಡಿಯಾಗಿದೆ. ಹೊಂಬಾಳೆ ಫಿಲ್ಮ್ಸ್ ಸಾರಥ್ಯದ ಅಡಿಯಲ್ಲಿ ನಿರ್ಮಾಣವಾದ ಸಿನಿಮಾ ಎಂದ ಮೇಲೆ ಕೇಳಬೇಕೆ? ಫ್ಯಾಮಿಲಿ ಎಂಟರ್ಟೈನ್ಮೆಂಟ್ ಜೊತೆಗೆ ಸಿನಿರಸಿಕರನ್ನು ನಗೆಗಡಲಲ್ಲಿ ತೇಲಿಸುವುದರಲ್ಲಿ ಡೌಟೆ ಇಲ್ಲ. ಜಗ್ಗೇಶ್ ಸಿನಿಮಾ ಎಂದ ಮೇಲೆ ಏನಾದರೂ ಸಂದೇಶ ರವಾನೆ ಮಾಡಬೇಕು ಎನ್ನುವ ಸದ್ದುದೇಶ ಇರುವುದು ಖಾತ್ರಿ. ಮನಸಿಗೆ ಮುದ ನೀಡುವ ಕರ್ಣಗಳಿಗೆ ಹಿತವಾದ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.
Jaggesh comedy sentiment Raghavendra Stores released
ನಿನ್ನೆ ಚಿತ್ರದ ಪ್ರೀಮಿಯರ್ ಶೋ ನಡೆದಿತ್ತು. ಇವತ್ತು ಕರ್ನಾಟಕದಾತ್ಯಂತ ಚಿತ್ರ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರೋತ್ಸಾಹಿಸಲೋ ಏನೋ ಎಂಬಂತೆ ಬೆಂಗಳೂರಿನ ಗಾಂಧಿನಗರದಲ್ಲಿನ ಸಂತೋಷ್ ಚಿತ್ರಮಂದಿರಕ್ಕೆ ನಟ ರಾಘವೆಂದ್ರ ರಾಜ್ ಕುಮಾರ್ ಅವರು ಪತ್ನಿ ಸಮೇತರಾಗಿ ಬಂದು ಚಿತ್ರ ವೀಕ್ಷಿಸಿದರು. ಸಹಜವಾಗಿ ಚಿತ್ರ ಹೇಗಿದೆ ಅನ್ನೋ ಕುತೂಹಲ ಬಹಳಷ್ಟು ಮಂದಿಗೆ ಇದ್ದು, ರಾಘವೇಂದ್ರ ಸ್ಟೋರ್ಸ್ ಚಿತ್ರದ ಕಂಪ್ಲೀಟ್ ವಿವರವನ್ನು ನಾವು ನಿಮಗೆ ನೀಡಲಿದ್ದೇವೆ.
ಚಿತ್ರದ ನಾಯಕ ಅಡುಗೆ ಭಟ್ಟ. ಮಲೆನಾಡಿನ ಹಿನ್ನೆಲೆಯಲ್ಲಿ ಕಥೆ ನಡೆಯುತ್ತದೆ. ಸಿನಿಮಾ ನಾಯಕ ಹಯವದನ ಪಾತ್ರದಲ್ಲಿ ಹಾಸ್ಯ ನಟ ಜಗ್ಗೇಶ್ ಬಣ್ಣ ಹಚ್ಚಿದ್ದಾರೆ. ಇನ್ನೂ ಸಿನಿಮಾದಲ್ಲಿ ತಂದೆಯ ಪಾತ್ರದಲ್ಲಿ ದತ್ತಣ್ಣ ಅಭಿನಯಿಸಿದ್ದು, ಇವರು ರಾಘವೇಂದ್ರ ಸ್ಟೋರ್ಸ್ (Raghavendra Stores)ಓನರ್ ಆಗಿ ತೆರೆ ಮೇಲೆ ಮಿಂಚಿದ್ದಾರೆ. ಚಿತ್ರದ ಮೊದಲ ಭಾಗ ಪೂರ್ತಿ ಕಾಮಿಡಿ ಆಗಿದ್ದರೆ, ಅದೇ ದ್ವಿತೀಯಾರ್ಧ ಪಕ್ಕಾ ಸೆಂಟಿಮೆಂಟಲ್! ಇದೇ ಚಿತ್ರದ ಪಾಸಿಟಿವ್ ಮತ್ತು ನೆಗೆಟಿವ್ ಕೂಡಾ !
ನಾಯಕ ಹಯವದನನ ತಂದೆ ದತ್ತಣ್ಣ ಮದುವೆ ಸಮಾರಂಭಗಳಿಗೆ ಕೇಟರಿಂಗ್ ಸರ್ವಿಸ್ ಮೂಲಕ ಖ್ಯಾತಿ ಪಡೆದಿರುತ್ತಾರೆ. ಜಗ್ಗೇಶ್ ಅಡುಗೆ ಭತ್ತ. ಕ್ಯಾಟರಿಂಗ್ ಚೆನ್ನಾಗಿ ನಡೀತಾ ಇದ್ರೂ ಮದ್ವೆಯಾಗಲು ಹುಡುಗಿ ಸಿಗುತ್ತಿಲ್ಲ. ವಯಸ್ಸು 40 ದಾಟಿದೆ. ಮದುವೆಯಾಗದೆ ಪ್ರಸ್ತ ಮುಗಿಸಿಕೊಳ್ಳದೆ ಇರುವ ವರ್ಜಿನ್ ಗಂಡು ಹಯವದನ. ಮೊದಲಾರ್ಧದ ತುಂಬಾ ಡಬ್ಬಲ್ ತ್ರಿಬ್ಬಲ್ ಮೀನಿಂಗ್ ಡೈಲಾಗ್ ಗಳದ್ದೇ ಸಾಮ್ರಾಜ್ಯ. ಜಗ್ಗೇಶ್ ಪೂರ್ತಿಯಾಗಿ ಭಟ್ಟ ಆಗಿದ್ದಾರೆ. ತೂತು ವಡೆ, ದೋಸೆ, ಅಂಗೈ ಅಗಲ ಸೈಟು, ಎಲ್ಲಿಗೆ ಇಳಿಸ್ಲಿ, ಭಾರ ಆಗಿದೆ, ಶುರು ಹಚ್ಕೊಬೇಕು – ಇಂತಹಾ ಡೈಲಾಗ್ ಗಳು ಅಸಹ್ಯ ಅಂತ ಅನ್ನಿಸಿಕೊಳ್ಳದ ಥರ ಕಥೆ ಇದೆ. ಸಹಜ ನಟ ಜಗ್ಗೇಶ್ ತನ್ನದೇ ಮ್ಯಾನರಿಸಂನ ಮುಂದೆ ಈ ಡೈಲಾಗುಗಳು ಸಹ್ಯ ಅನ್ನಿಸಿಕೊಂಡು ಕಥೆ ಸಾಗುತ್ತದೆ.
ಏನೇ ಪ್ರಯತ್ನ ಪಟ್ಟರೂ ಒಂದು ಹುಡುಗಿ ಈತನಿಗೆ ಸಿಗಲ್ಲ, ಜೊತೆಗಿನ ಮೂಕ ಗೆಳೆಯ ಕೂಡಾ ಒಳ್ಳೆಯ ಹುಡ್ಗಿನಾ ಮದ್ವೆ ಆಗಿ ಪ್ರಸ್ತ ಮುಗಿಸಿಕೊಂಡು ಬಿಟ್ಟಿದ್ದಾನೆ. ಹಯವದನ (ಜಗ್ಗೇಶ್) ನೋಡಲು ಹೋದ ಹುಡುಗಿ, ಜಗ್ಗೇಶ್ ಅಂಕಲ್ ಥರ. ಕಾಣ್ತಾರೆ, ಅವ್ರ ತಮ್ಮ ಓಕೆ ಅಂತ ಹೇಳಿ ತಮ್ಮನನ್ನು ಕಟ್ಕೋತಾಳೆ. ಹಯವದನನಿಗೆ ಮುಳ ಮುಳ ಆಗುತ್ತಿರುತ್ತದೆ. ಹೀಗೆ ಬರಗೆಟ್ಟು ಇರುವ ಜಗ್ಗೇಶ್, ರಾಘವೇಂದ್ರ ಸ್ಟೋರ್ಸ್ ಟ್ರೈಲರ್ ನಲ್ಲಿ ತೋರಿಸಿದಂತೆ 40 ವರ್ಷದ ವರ್ಜಿನ್‌ಗೆ ವಧು ಬೇಕು; ಹುಡುಗಿಯಾದ್ರೂ ಓಕೆ, ಆಂಟಿಯಾದ್ರೂ ಓಕೆ ಎಂಬ ಸ್ಥಿತಿಯಲ್ಲಿ ಇದ್ದಾರೆ. ಅಂತಹ ಸ್ಥಿತಿಯಲ್ಲಿ ಆತನಿಗೂ ಒಂದು ಸನ್ನಿವೇಶದಲ್ಲಿ ಹುಡುಗಿ ಸಿಗುತ್ತೆ. ಮದ್ವೇನೂ ಆಗತ್ತೆ. ಆದ್ರೆ ಪ್ರಸ್ತ.ಆಗಬೇಕು ಎನ್ನುವಾಗ ನಾನಾ ಅಡೆತಡೆಗಳು. ಇವಿಷ್ಟು ರಾಘವೇಂದ್ರ ಸ್ಟೋರ್ ಚಿತ್ರದ ಪ್ರಥಮಾರ್ಧದ ಕಥಾ ಸಮ್ಮರಿ. ಜಗ್ಗೇಶ್ ನಟರಿಗೆ ಡೈಲಾಗ್ ಗಳಿಗೆ ಪದ್ಯ ಹುಡುಗರು ಶಿಳ್ಳೆ ಚಪ್ಪಾಳೆ ನಗು ಚಿತ್ರಮಂದಿರದಲ್ಲಿ ಕೇಳಿ ಬರುತ್ತದೆ.
ಸಿನಿಮಾದ ನಾಯಕಿ ಪಾತ್ರದಲ್ಲಿ ಶ್ವೇತಾ ಶ್ರೀವತ್ಸವ್ (Shwetha Srivatsav)ಬಣ್ಣ ಹಚ್ಚಿದ್ದು, ಹೆಚ್ಚಿನ ಸಮಾರಂಭದಲ್ಲಿ ಹಾಡುಗಾರ್ತಿಯಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಸಿನಿರಸಿಕರ ಮನದಲ್ಲಿ ಲಗ್ಗೆ ಇಡಲು ಹಾಸ್ಯದ ರುಚಿ ಬಡಿಸಲು ರವಿಶಂಕರ್ ಗೌಡ ಕಾಣಿಸಿಕೊಂಡಿದ್ದು, ವಿಲನ್ ಆಗಿ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ.
ಈ ನಟ ಕನ್ನಡದಲ್ಲಿರಬಾರದಿತ್ತು. ಬೇರೆ ಭಾಷೆಯಲ್ಲಿ, ಅದರಲ್ಲೂ ಬಾಲಿವುಡ್ ನಲ್ಲಿ ಇದ್ದಿದ್ದರೆ ಆತ ಹಾಲಿವುಡ್ವರೆಗೆ ಹಾರಿ ಹೋಗಿ ಬೆಳೆಯುತ್ತಿದ್ದ. ನಟ ಜಗ್ಗೇಶ್ ಅವರ ಪ್ರತಿಭೆಯನ್ನು ನೋಡಿದ ಯಾರೇ ಆಗಲಿ, ಈ ರೀತಿ ಆಶಿಸುವುದು ಸಹಜ. ಆ ಮಟ್ಟಿಗೆ ಇದೆ ಜಗ್ಗೇಶ್ ಅವರದು ನವರಸ ಪ್ರತಿಭೆ. ಅದರಲ್ಲೂ ಹಾಸ್ಯ ಅಂದ್ರೆ ಕನ್ನಡದಲ್ಲಿ ನೆನಪಾಗೋದು ಆ ತುಸು ಗಪ್ಪು ಹುಡುಗ, ಮುಖದಲ್ಲೇ ಭಾವ ಹೊರಡಿಸುವ ರೀತಿ, ಸಿಗ್ನೇಚರ್ ಮ್ಯಾನರಿಸಂ, ‘ಆ ಟೈಪು – ಈ ಟೈಪು’ ಮಾತು ಮತ್ತು ಪರ್ಫೆಕ್ಟ್ ಟೈಮಿಂಗ್.
ಚಿತ್ರದಾಸ ಮಜಾ ಕೊಟ್ಟರೆ ದ್ವಿತೀಯ ಅಂತ ಸೆಂಟಿಮೆಂಟಲ್ ಸನ್ನಿವೇಶನಗಳಿಗೆ ಸೀಮಿತವಾಗಿದೆ. ನಿರ್ದೇಶಕರು ಹಾಸ್ಯ ಮತ್ತು ಸೆಂಟಿಮೆಂಟಲ್ ಕಥೆಗಳ ಮಧ್ಯೆ ಸಮನ್ವಯ ಸಾಧಿಸಲು ಪ್ರಯತ್ನಿಸಿಯೇ ಇಲ್ಲ ಅನ್ನಿಸುತ್ತದೆ. ಮೊದಲ ಭಾಗದಲ್ಲಿ ಬರಪೂರಾ ಹಾಸ್ಯ ನೋಡಿದ ಮನಸ್ಸು ದ್ವಿತೀಯ ಭಾಗದಲ್ಲೂ ಕೊ0ಚಮಟ್ಟಿಗಾದರೂ ಅದನ್ನು ಬಯಸುತ್ತದೆ. ಆದರೆ ಈ ಸಮನ್ವಯತೆಯ ಕೊರತೆ ಚಿತ್ರದ ಬಹುದೊಡ್ಡ ನೆಗೆಟಿವ್ ಪಾಯಿಂಟ್.
ಈ ಸಿನೆಮಾದ ಮುಖ್ಯ ಅಂಶ ಊಟವನ್ನು ಹಾಳು ಮಾಡಬಾರದು ಜೊತೆಗೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ಹೇಗೆ ಎಂಬುದನ್ನು ರಾಘವೇಂದ್ರ ಸ್ಟೋರ್ಸ್ ಸಿನಿಮಾ ಹೇಳಲು ಹೊರಟಿದೆ. ಆದರೆ ಯಾವುದೋ ಸಂದೇಶ ಕೊಡಲು ಹೋಗಿ ದ್ವಿತೀಯಾರ್ಧದಲ್ಲಿ ಚಿತ್ರ ಎಡವಿದೆ. ಸೆಂಟಿಮೆಂಟಲ್ ಪಾತ್ರಗಳು ಸನ್ನಿವೇಶಗಳು ಮನಸ್ಸು ತಟ್ಟಿದರು ರಾಘವೇಂದ್ರ ಸ್ಟೋರ್ಸ್ ಎನ್ನುವ ಚಿತ್ರ ಕಾಮಿಡಿ ಪ್ರಧಾನ ಚಿತ್ರ ಎಂದು ಥಿಯೇಟರಿಗೆ ಹೋದ ಮನಸ್ಸುಗಳು ವಾಪಸ್ ಬರುವಾಗ ಕೊಂಚಮಟ್ಟಿಗೆ ನಿರಾಶರಾಗಿ ಬರುವುದು ಸಹಜ.
ಇನ್ನೂ ಚಿತ್ರದ ಕ್ಯಾಮರಾ ವರ್ಕ್ ಸಾಕಾಗಲ್ಲ. ಹಾಡುಗಳು ಅಷ್ಟೇನು ನೆನಪು ಮಾಡಿಕೊಳ್ಳುವ ಹಾಗೆ ಇಲ್ಲ. ದತ್ತಣ್ಣ ಮತ್ತು ಜಗ್ಗೇಶ್ ಪತ್ನಿಯಾಗಿ ನಟಿಸಿದ ಶ್ವೇತಾ ಶ್ರೀವಾಸ್ತವ ಉತ್ತಮವಾಗಿ ನಡೆಸಿದ್ದಾರೆ. ಡಾಕ್ಟರ್ ರವಿಶಂಕರ್ ಗೌಡ ಚೆನ್ನಾಗಿ ಸಾತ್ ನೀಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇಡೀ ಚಿತ್ರವು ಜಗ್ಗೇಶ್ ಪ್ರತಿಭೆಯ ಮೇಲೆ ನಿಂತಿದೆ. ಜಗ್ಗೇಶ್ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಹೊಂಬಾಳೆ ಚಿತ್ರತಂಡ ಲೋ ಬಜೆಟ್ ಚಿತ್ರ ಮಾಡುವ ನೆಪದಲ್ಲಿ ಅಥವಾ ಪ್ರಯತ್ನದಲ್ಲಿ ಅಲ್ಲಲ್ಲಿ ಕಾಂಪ್ರಮೈಸ್ ಮಾಡಿಕೊಂಡಿದೆ. ಚಿತ್ರದ ಕೊನೆಯಲ್ಲಿ ಮಕ್ಕಳು ಡೈಲಾಗ್ ಹೇಳುವ ಪರಿಸ್ಥಿತಿ ಒಂದು ಇದ್ದು ಅದರಲ್ಲಿ ಮಕ್ಕಳ ಕೈಯಲ್ಲಿ ಉದ್ದುದ್ದ, ‘ ದೊಡ್ಡವರು ‘ ಹೇಳುವಂತಹ ಡೈಲಾಗ್ ಹೇಳಿಸಲಾಗಿದೆ. ಆ ಭಾಗದಲ್ಲಿ ಚಿತ್ರಕಥೆ ಸೋತು ಹೋಗಿದೆ. ಒಟ್ಟಾರೆ ಜಗ್ಗೇಶ್ ಅವರ ಅಭಿನಯಕ್ಕಾಗಿ ಮೊದಲಾರ್ಧಕಾಗಿ ಚಿತ್ರವನ್ನು ನೋಡಲೇಬೇಕಿದೆ.
ಇದನ್ನೂ ಓದಿ: Bhumika Chawla: 44 ರ ನಟಿ 14 ರ ಹುಡುಗನ ಜತೆ ರೊಮ್ಯಾನ್ಸ್ – ಈ ಪ್ಯಾರ್ ಗೆ ಏನಾಗೈತೆ ?!