Canara Bank: ಪದವಿ ಪಾಸಾದವರಿಗೆ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗ! ಈ ಕೂಡಲೇ ಅರ್ಜಿ ಸಲ್ಲಿಸಿ

Share the Article

Canara Bank Recruitment-2023: ಉದ್ಯೋಗಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಇಂದಿನ ಕಾಲದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ದೊಡ್ದ ಸವಾಲಾಗಿ ಪರಿಣಮಿಸಿದೆ. ಪೈಪೋಟಿಯ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಒಂದು ನೌಕರಿ ಪಡೆಯೋದೆ ದೊಡ್ಡ ಹರಸಾಹಸ. ಅದರಲ್ಲಿಯೂ ಬ್ಯಾಂಕಿನಲ್ಲಿ ಕೆಲಸ ಹುಡುಕುತ್ತಿರುವ ಮಂದಿಗೆ ಬಂಪರ್ ಸುದ್ಧಿ ಇಲ್ಲಿದೆ.

ಏಪ್ರಿಲ್ 2023 ರ ಕೆನರಾ ಬ್ಯಾಂಕ್ ನೇಮಕಾತಿ (Canara Bank Recruitment-2023) ಪ್ರಕ್ರಿಯೆಗಾಗಿ ಅಧಿಕೃತ ಅಧಿಸೂಚನೆಯ ಗ್ರೂಪ್ ಚೀಫ್ ಕಂಪ್ಲೈಯನ್ಸ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಮಾಹಿತಿ, ವೇತನ, ಆಯ್ಕೆ ಪ್ರಕ್ರಿಯೆ ಮೊದಲಾದ ಮಾಹಿತಿ ತಿಳಿದಿರುವುದು ಅವಶ್ಯಕ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಹುದ್ದೆಯ ವಿವರ:
ಸಂಸ್ಥೆಯ ಹೆಸರು : ಕೆನರಾ ಬ್ಯಾಂಕ್
ಹುದ್ದೆಗಳ ಸಂಖ್ಯೆ : 1 ಹುದ್ದೆ
ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಯ ಹೆಸರು : ಗುಂಪು ಮುಖ್ಯ ಅನುಸರಣೆ ಅಧಿಕಾರಿ

ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 26 ಏಪ್ರಿಲ್‌ 2023 ಆರಂಭಿಕ ದಿನವಾಗಿದ್ದು, ಮೇ 17 2023 ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಅನುಸಾರ, ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿರಬೇಕಾಗುತ್ತದೆ. ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಅನುಸಾರ, ಈ ಹುದ್ದೆಗಾಗಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ. ಇನ್ನು ವಯೋಮಿತಿ ಗಮನಿಸಿದರೆ, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೇ 1, 2023 ರಂತೆ ಕನಿಷ್ಠ ವಯೋಮಿತಿ 45 ಆಗಿದ್ದು, ಗರಿಷ್ಠ 55 ವರ್ಷಗಳನ್ನು ಮೀರಿರಬಾರದು. ಕೆನರಾ ಬ್ಯಾಂಕ್ ನಿಯಮಗಳ ಅನುಸಾರ ಅರ್ಹ ಅಭ್ಯರ್ಥಿಗಳ ವಯೋಮಿತಿಯನ್ನು ಸಡಿಲಿಕೆ ಇರುತ್ತದೆ. ಹೀಗಾಗಿ, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

 

ಇದನ್ನು ಓದಿ: Puttur Politic: ಅರುಣ್ ಪುತ್ತಿಲ ‘ ಶೋ ಮ್ಯಾನ್ ‘, ಬಿಜೆಪಿಗೆ ಎಂದಾದರೂ ಮತ ನೀಡಿದ್ದಾರಾ? – ಡಾ. ಪ್ರಸಾದ್ ಭಂಡಾರಿ ಹಿಗ್ಗಾಮುಗ್ಗ ತರಾಟೆ, ಏಕಾಂಗಿಯಾಗುತ್ತಿರುವ ಪುತ್ತಿಲ ?!! 

Leave A Reply